ಸಿಂಗಾಪುರ ಓಪನ್: ಸಿಂಧು ಕ್ವಾರ್ಟರ್‌ಗೆ
Team Udayavani, Apr 14, 2017, 1:26 AM IST
ಸಿಂಗಾಪುರ: ವಿಶ್ವದ ಎರಡನೇ ರ್‍ಯಾಂಕಿನ ಆಟಗಾರ್ತಿ ಭಾರತದ ಪಿ.ವಿ.ಸಿಂಧು ಮತ್ತು ಬಿ.ಸಾಯಿ ಪ್ರಣೀತ್ ಸಿಂಗಾಪುರ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಮಹಿಳೆಯರ ಎರಡನೇ ಸುತ್ತಿನ ಪಂದ್ಯದಲ್ಲಿ ಸಿಂಧು 19-21, 21-17, 21-8 ಗೇಮ್‌ಗಳಿಂದ ಇಂಡೋನೇಶ್ಯದ ಫಿಟ್ರಿಯಾನಿ ಫಿಟ್ರಿಯಾನಿ ವಿರುದ್ಧ ಜಯ ಸಾಧಿಸಿದರು. ವಿಶ್ವದ 27ನೇ ರ್‍ಯಾಂಕಿನ ಫಿಟ್ರಿಯಾನಿ ಮೊದಲ ಗೇಮ್‌ನಲ್ಲಿ ಸಿಂಧುಗೆ ಸೋಲುಣಿಸಿದ್ದರು. ಎರಡನೇ ಗೇಮ್‌ನಲ್ಲಿ ಇಬ್ಬರು ಆಟಗಾರ್ತಿಯರ ನಡುವೆ ತೀವ್ರ ಸ್ಪರ್ಧೆ ಕಂಡುಬಂತು. ಆದರೆ ಅಂತಿಮ ಹಂತದಲ್ಲಿ ಮುನ್ನಡೆ ಪಡೆಯುತ್ತ ಸಾಗಿದ ಸಿಂಧು ಗೇಮ್ ವಶಪಡಿಸಿಕೊಂಡರು. ನಿರ್ಣಾಯಕವಾಗಿದ್ದ ಮೂರನೇ ಗೇಮ್‌ನಲ್ಲಿ ಸಿಂಧು ಓಟ ಏಕಮುಖವಾಗಿತ್ತು. ಆರಂಭದಲ್ಲಿಯೇ ಸಿಂಧು 11-4 ರಿಂದ ಮುನ್ನಡೆ ಪಡೆದಿದ್ದರು. ಅಂತಿಮವಾಗಿ ಸಿಂಧು 21-8 ರಿಂದ ಭಾರೀ ಅಂತರದಲ್ಲಿ ಜಯ ಸಾಧಿಸಿ ಕ್ವಾರ್ಟರ್‌ಗೆ ಪ್ರವೇಶಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ
Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್, ಸಿಮ್ರನ್ ಗೆ ಕಂಚು
Diamond League: ಡೈಮಂಡ್ ಲೀಗ್ ಋತು ಫೈನಲಿಗೆ ನೀರಜ್ ಚೋಪ್ರಾ ಅರ್ಹತೆ
Paralympics: ಸಮಾರೋಪ ಸಮಾರಂಭದಲ್ಲಿ ಹರ್ವಿಂದರ್ ಸಿಂಗ್, ಪ್ರೀತಿ ಪಾಲ್ ಧ್ವಜಧಾರಿಗಳು
US Open: ಯುಎಸ್ ಓಪನ್ ಟೆನಿಸ್ ಗ್ರ್ಯಾನ್ ಸ್ಲಾಮ್: ಪೆಗುಲಾ-ಸಬಲೆಂಕಾ ನಡುವೆ ಫೈನಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.