Bajrang Punia: ನಿಷೇಧದ ವಿರುದ್ದ ಬಜರಂಗ್ ಹೈಕೋರ್ಟ್ ಮೊರೆ
Team Udayavani, Sep 11, 2024, 5:22 AM IST
ಹೊಸದಿಲ್ಲಿ: ರಾಷ್ಟ್ರೀಯ ಉದ್ದೀಪನಾ ನಿಗ್ರಹ ಸಂಸ್ಥೆ (ನಾಡಾ) ತನ್ನ ಮೇಲೆ ಅನಿರ್ಧಿಷ್ಟಾವಧಿ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಕುಸ್ತಿಪಟು ಬಜರಂಗ್ ಪುನಿಯಾ ದೆಹಲಿ ಹೈಕೋರ್ಟ್ನ ಮೊರೆ ಹೋಗಿದ್ದಾರೆ.
ನಿಷೇಧದ ವಿರುದ್ಧ ಅರ್ಜಿ ಸಲ್ಲಿಸಿರುವ ಬಜರಂಗ್, “ನನ್ನನ್ನು ನಿಷೇಧಿಸುವ ಮೂಲಕ ನಾಡಾ, ನಾನು ವೃತ್ತಿಪರ ಅಭ್ಯಾಸ ನಡೆಸುವ, ಜೀವನೋಪಾಯಕ್ಕೆ ಗಳಿಸುವ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿದೆ’ ಎಂದು ಆರೋಪಿಸಿದ್ದಾರೆ.
ಉದ್ದೀಪನ ಪರೀಕ್ಷೆಗೆ ಮಾದರಿ ನೀಡಲು ನಿರಾಕರಿಸಿದರು ಎಂದು ಕಳೆದ ಎಪ್ರಿಲ್ನಲ್ಲಿ ನಾಡಾ, ಬಜರಂಗ್ ಅವರನ್ನು ಮೊದಲ ಬಾರಿ ನಿಷೇಧಿಸಿತ್ತು. ಬಳಿಕ ನಿಷೇಧವನ್ನು ತೆಗೆಯಲಾಗಿತ್ತು. ಬಳಿಕ ಜೂನ್ನಲ್ಲಿ ಮತ್ತೆ ನಿಷೇಧ ಹೇರಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.