ಬಂಗಾರ ತರುವರೇ ಭಜರಂಗ್, ವಿನೇಶ್?
Team Udayavani, Sep 14, 2019, 5:55 AM IST
ನುರ್ ಸುಲ್ತಾನ್ (ಕಜಾಕ್‌ಸ್ಥಾನ್): ಮುಂಬರುವ ಟೋಕಿಯೊ ಒಲಿಂಪಿಕ್ಸ್ ಅರ್ಹತೆಯ ಹಿನ್ನೆಲೆಯಲ್ಲಿ ಅತ್ಯಂತ ಮಹತ್ವ ಪಡೆದಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ಶನಿವಾರದಿಂದ ಕಜಾಕ್‌ಸ್ಥಾನದ ನುರ್ ಸುಲ್ತಾನ್‌ನಲ್ಲಿ ಆರಂಭವಾಗಲಿದೆ. ಭಾರತದ ದೊಡ್ಡ ಪಡೆಯೊಂದು ಇಲ್ಲಿ ಅಖಾಡಕ್ಕೆ ಇಳಿಯಲಿದ್ದು, ಭಜರಂಗ್ ಪೂನಿಯ, ವಿನೇಶ್ ಪೋಗಟ್ ಮೇಲೆ ವಿಪರೀತ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.
ಈ ವರ್ಷದ 4 ಕೂಟಗಳಲ್ಲಿ ಎದುರಾಳಿಯನ್ನು ಮಣ್ಣುಮುಕ್ಕಿಸಿ ಮೆರೆದಾಡಿದ ಭಜರಂಗ್ ವಿಶ್ವದ ನಂ.1 ರೆಸ್ಲರ್ ಎಂಬ ಹಿರಿಮೆಯೊಂದಿಗೆ 65 ಕೆಜಿ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. ಈ ವಿಭಾಗದಲ್ಲಿ ಭಾರತೀಯನಿಗೇ ಆಗ್ರ ಶ್ರೇಯಾಂಕ ಲಭಿಸಿದೆ.
ಭಜರಂಗ್ ಪ್ರಚಂಡ ಫಾರ್ಮ್
ಈವರೆಗೆ ವಿಶ್ವ ಕುಸ್ತಿಯ ಪುರುಷರ ವಿಭಾಗದಲ್ಲಿ ಚಾಂಪಿಯನ್ ಆಗಿ ಮೂಡಿ ಬಂದ ಏಕೈಕ ಭಾರತೀಯನೆಂದರೆ ಸುಶೀಲ್ . ಈಗ “ಜೀವಮಾನದ ಫಾರ್ಮ್’ನಲ್ಲಿರುವ ಭಜರಂಗ್ ಬಂಗಾರದಿಂದ ಸಿಂಗಾರಗೊಳ್ಳುವುದನ್ನು ಕಾಣಲು ಎಲ್ಲರೂ ಕಾಯುತ್ತಿದ್ದಾರೆ.
ಭಜರಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಈವರೆಗೆ 2 ಪದಕ ಗೆದ್ದರೂ ಇದರಲ್ಲಿ ಬಂಗಾರದ ಕೊರತೆ ಕಾಡಿದೆ. ಆದರೆ ಈ ಹಾದಿ ಸುಲಭವಲ್ಲ. ರಶ್ಯದ ಗಾಜಿಮುರಾದ್ ರಶಿದೋವ್, ಬಹ್ರೈನ್‌ನ ಹಾಜಿ ಮೊಹಮ್ಮದ್ ಅಲಿ ಮೊದಲಾದವರ ಕಠಿನ ಸವಾಲನ್ನು ಎದುರಿಸಬೇಕಿದೆ.
8 ವರ್ಷಗಳ ಬಳಿಕ ಸುಶೀಲ್!
ಸುಶೀಲ್ ಕುಮಾರ್ 8 ವರ್ಷಗಳ ಸುದೀರ್ಘ ಅವಧಿಯ ಬಳಿಕ ವಿಶ್ವ ಕುಸ್ತಿ ಅಖಾಡಕ್ಕೆ ಇಳಿಯುತ್ತಿರುವುದು ವಿಶೇಷ. ಅವರದು 74 ಕೆಜಿ ವಿಭಾಗದ ಸ್ಪರ್ಧೆಯಾಗಿದೆ. ಗ್ರೀಕೋ-ರೋಮನ್ ವಿಭಾಗದಲ್ಲಿ ಗುರುಪ್ರೀತ್ ಸಿಂಗ್, ಹರ್‌ಪ್ರೀತ್ ಸಿಂಗ್ ಭಾರತದ ಭರವಸೆಯಾಗಿದ್ದಾರೆ.
ವಿನೇಶ್ ಮೇಲೆ ನಿರೀಕ್ಷೆ
ವನಿತಾ ವಿಭಾಗದಲ್ಲಿ ವಿನೇಶ್ ಪೋಗಟ್ 50 ಕೆಜಿಯಿಂದ 53 ಕೆಜಿಗೆ ತಮ್ಮ ಸ್ಪರ್ಧೆಯನ್ನು ಬದಲಾ ಯಿಸಿದ್ದಾರೆ. ಕಳೆದ 5 ಫೈನಲ್‌ಗಳಲ್ಲಿ 3 ಚಿನ್ನ ಗೆದ್ದ ಹೆಗ್ಗಳಿಕೆ ವಿನೇಶ್ ಪಾಲಿಗಿದೆ. ವಿಶ್ವ ಕುಸ್ತಿಯಲ್ಲಿ ಭಾರತದ ವನಿತಾ ಸ್ಪರ್ಧಿಗಳಾÂರೂ ಈವರೆಗೆ ಚಿನ್ನ ಗೆದ್ದಿಲ್ಲ. ಈ ಬರವನ್ನು ವಿನೇಶ್ ನೀಗುವರೇ ಎಂಬುದೊಂದು ನಿರೀಕ್ಷೆ.
ನಿರೀಕ್ಷಿತ ಫಾರ್ಮ್ನಲ್ಲಿಲ್ಲದ ಸಾಕ್ಷಿ ಮಲಿಕ್ ಕೂಡ ಸ್ಪರ್ಧೆಯಲ್ಲಿದ್ದು, ಒತ್ತಡವನ್ನು ಎಷ್ಟರ ಮಟ್ಟಿಗೆ ನಿಭಾಯಿಸಿಯಾರು ಎಂಬುದೊಂದು ಪ್ರಶ್ನೆ. ಪೂಜಾ ಧಂಡಾ, ದಿವ್ಯಾ ಕಕ್ರಾನ್ ವನಿತಾ ವಿಭಾಗದ ಪ್ರಮುಖ ಭರವಸೆಯಾಗಿದ್ದಾರೆ.
ಈ ಪಂದ್ಯಾವಳಿಯ ಎಲ್ಲ 3 “ಸ್ಟೈಲ್’ಗಳ 6 ವಿಭಾಗಗಳಲ್ಲಿ 6 ಒಲಿಂಪಿಕ್ ಕೋಟಾಗಳಿವೆ.
ವಿಶ್ವ ಕುಸ್ತಿಯಲ್ಲಿ ಭಾರತ ತಂಡ
ಪುರುಷರ ಫ್ರೀಸ್ಟೈಲ್: ರವಿ ಕುಮಾರ್ (57), ರಾಹುಲ್ ಅವಾರೆ (61), ಭಜರಂಗ್ ಪೂನಿಯ (65), ಕರನ್ (70), ಸುಶೀಲ್ ಕುಮಾರ್ (74), ಜೀತೇಂದರ್ (79), ದೀಪಕ್ ಪೂನಿಯ (86), ಪ್ರವೀಣ್ (92), ಮೌಸಮ್ ಖತ್ರಿ (97), ಸುಮಿತ್ ಮಲಿಕ್ (125 ಕೆಜಿ).
ಪುರುಷರ ಗ್ರೀಕೋ ರೋಮನ್: ಮಂಜೀತ್ (55), ಮನೀಷ್ (60), ಸಾಗರ್ (63), ಮನೀಷ್ (67), ಯೋಗೇಶ್ (72), ಗುರುಪ್ರೀತ್ ಸಿಂಗ್ (77), ಹರ್‌ಪ್ರೀತ್ ಸಿಂಗ್ (82), ಸುನೀಲ್ ಕುಮಾರ್ (87), ರವಿ (97), ನವೀನ್ (130 ಕೆಜಿ).
ವನಿತೆಯರ ಫ್ರೀಸ್ಟೈಲ್: ಸೀಮಾ (50), ವಿನೇಶ್ ಪೋಗಟ್ (53), ಲಲಿತಾ (55), ಸರಿತಾ (57), ಪೂಜಾ ಧಂಡಾ (59), ಸಾಕ್ಷಿ ಮಲಿಕ್ (62), ನವಜೋತ್ ಕೌರ್ (65), ದಿವ್ಯಾ ಕಕ್ರಾನ್ (68), ಕೋಮಲ್ ಭಗವಾನ್ ಗೋಲೆ (72), ಕಿರಣ್ (76 ಕೆಜಿ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.