ಕೋವಿಡ್-19 ಎಫೆಕ್ಟ್: ವಿಮಾನ ಸಿಗದೆ ಗ್ಲಾಸ್ಗೋದಲ್ಲೇ ಉಳಿದ ಫುಟ್ಬಾಲ್ ಆಟಗಾರ್ತಿ ಬಾಲಾ ದೇವಿ
Team Udayavani, Mar 21, 2020, 9:08 AM IST
ಹೊಸದಿಲ್ಲಿ: ಕೋವಿಡ್-19ಕ್ಕೆ ವಿಶ್ವದಾದ್ಯಂತ ಜನರು ತತ್ತರಿಸಿದ್ದಾರೆ. ತವರು ನೆಲವನ್ನು ಬಿಟ್ಟು ವಿದೇಶಕ್ಕೆ ತೆರಳಿದ್ದವರು ಅಲ್ಲಿ ಇರಲೂ ಆಗದೆ, ಮರಳಿ ಸ್ವದೇಶಕ್ಕೆ ಬರಲೂ ಆಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹುದೆ ಪರಿಸ್ಥಿತಿಯಲ್ಲಿ ಭಾರತ ಮಹಿಳಾ ಫುಟ್‌ಬಾಲ್ ಆಟಗಾರ್ತಿ ಎನ್.ಬಾಲಾ ದೇವಿ ಕೂಡ ಸಿಲುಕಿಕೊಂಡಿದ್ದಾರೆ.
ಸ್ಕಾಟಿಷ್ ಮಹಿಳಾ ಪ್ರೀಮಿಯರ್ ಲೀಗ್ ಕ್ಲಬ್ ರೇಂಜರ್ ಪರ ಆಡಲು ಸಹಿ ಹಾಕಿರುವ ಭಾರತದ ಮೊದಲ ಮಹಿಳೆ ಬಾಲಾ ದೇವಿ ಆಗಿದ್ದಾರೆ. ಕೋವಿಡ್-19 ವ್ಯಾಪಕವಾಗಿ ಎಲ್ಲ ಕಡೆ ಹಬ್ಬಿರುವುದರಿಂದ ಅವರು ಗ್ಲಾಸ್ಗೋದಲ್ಲೇ ಅನಿವಾರ್ಯವಾಗಿ ಉಳಿದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರೀಮಿಯರ್ ಲೀಗ್ ಫುಟ್‌ಬಾಲ್ ಕೂಟ ಮುಂದೂಡಿಕೆಯಾಗಿದೆ,ಸದ್ಯ ವಾತಾವರಣ ತಿಳಿಯಾಗುವವರೆಗೆ ಅಲ್ಲೆ ಉಳಿಯಬೇಕಾಗಿದೆ.
“ಬಾಲಾ ದೇವಿ ಅಲ್ಲೇ ಇದ್ದು ತರಬೇತಿ ಮುಂದುವರಿ ಸಲಿ ದ್ದಾರೆ’ ಎಂದು ಪ್ರತಿನಿಧಿ ಅನುಜ್ ತಿಳಿಸಿದ್ದಾರೆ. ಮಾ.22ರಿಂದ ಮಾ.31ರ ತನಕ ಎಲ್ಲ ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ಭಾರತ ಸರ್ಕಾರ ನಿಷೇಧಿಸಿದೆ. ಹೀಗಾಗಿ ತವರಿಗೆ ಆಗಮಿಸಲು ಬಾಲಾ ದೇವಿಗೆ ಯಾವುದೇ ಅವಕಾಶ ಉಳಿದಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.