ಲಂಡನ್ ಟೆನಿಸ್ ಕೋರ್ಟ್‌ನಲ್ಲಿ “ಬಾಲ್ ಡಾಗ್ಸ್’
Team Udayavani, Dec 9, 2018, 9:00 AM IST
ಲಂಡನ್: ಟೆನಿಸ್ ಕೋರ್ಟ್‌ನಲ್ಲಿ ಬಾಲಕ, ಬಾಲಕಿಯರು ಚೆಂಡು ಹೆಕ್ಕುವ ಕೆಲಸ ಮಾಡುವುದು ಮಾಮೂಲು. ಆದರೆ ಲಂಡನ್‌ನಲ್ಲಿ ನಡೆದ ಚಾಂಪಿಯನ್ಸ್ ಟೆನಿಸ್ ಟೂರ್ನಿಯಲ್ಲಿ ನಾಯಿ ಮರಿಗಳು ಚೆಂಡು ಹೆಕ್ಕುವ ಕಾರ್ಯದಲ್ಲಿ ತೊಡಗಿಸಿಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿವೆ.
ಚಾಂಪಿಯನ್ಸ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದ ಪಂದ್ಯದ ವೇಳೆ 3 ಸುಂದರ ನಾಯಿಗಳು ಚೆಂಡನ್ನು ಬಾಯಲ್ಲಿರಿಸಿಕೊಂಡು ಕರ್ತವ್ಯ ನಿಭಾಯಿಸುತ್ತಿದ್ದುದು ಕಂಡುಬಂತು. ಬಾಲಕ, ಬಾಲಕಿಯರೊಂದಿಗೆ ಹ್ಯಾಟಿ, ಟೀನಾ ಹಾಗೂ ಮೆಲ್ವಿನ್ ಎಂಬ 3 ನಾಯಿಗಳು ಚೆಂಡಿನ ಹಿಂದೆ ಓಡಾಡುತ್ತ ಅಭಿಮಾನಿಗಳ ಗಮನ ಸೆಳೆದಿವೆ. ವೀಕ್ಷಕರಿಂದ ಭಾರೀ ಚಪ್ಪಾಳೆ ಗಿಟ್ಟಿಸಿಕೊಂಡಿವೆ.
ಟಿಮ್ ಹೆನ್ಮನ್ ತರಬೇತಿ
ಈ ಟೂರ್ನಿಗಾಗಿ ಶ್ವಾನಗಳನ್ನು ನೀಡಿದ್ದು “ಕಾನೈನ್ ಪಾರ್ಟ್‌ನರ್’ ಎಂಬ ಸಂಸ್ಥೆ. ಇದು ಅಂಗವಿಕಲ ಜನರಿಗೆ ನೆರವಾಗಲು ನಾಯಿಗಳಿಗೆ ತರಬೇತಿ ನೀಡುತ್ತದೆ. ಮಾಜಿ ನಂ. ವನ್ ಟೆನಿಸ್ ಆಟಗಾರ ಟಿಮ್ ಹೆನ್ಮನ್ ನಾಯಿಗಳಿಗೆ ತರಬೇತಿ ನೀಡಲು ಸಹಾಯ ಮಾಡಿದ್ದಾರೆ. ಇದಕ್ಕೂ ಮುನ್ನ ಬ್ರಝಿಲ್ ಓಪನ್‌ನಲ್ಲಿ ನಾಯಿಗಳು ಚೆಂಡು ಹೆಕ್ಕಿಕೊಡುವ ಕೆಲಸವನ್ನು ಮಾಡಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Garlic: ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್ ಬೆಳ್ಳುಳ್ಳಿ ವಶಕ್ಕೆ
Pakistan: ಬಲೂಚ್‌ನಲ್ಲಿ ಆತ್ಮಾಹುತಿ ದಾಳಿ: 6 ಸಾವು, 25 ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.