BAN vs WI,1st ODI: ರುದರ್‌ಫೋರ್ಡ್ ಶತಕ ಬಾಂಗ್ಲಾವನ್ನು ಮಣಿಸಿದ ವಿಂಡೀಸ್
Team Udayavani, Dec 9, 2024, 8:36 PM IST
ಬಸೆಟ್ಟರ್ (ಸೇಂಟ್ ಕಿಟ್ಸ್): ಮಧ್ಯಮ ಕ್ರಮಾಂಕದ ಬ್ಯಾಟರ್ ಶೆರ್ಫೇನ್ ರುದರ್‌ಫೋರ್ಡ್ ಅವರ ಶತಕ ಹಾಗೂ ಶೈ ಹೋಪ್ ಅವರ ಕಪ್ತಾನನ ಆಟದ ನೆರವಿನಿಂದ ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ವೆಸ್ಟ್ ಇಂಡೀಸ್ 5 ವಿಕೆಟ್‌ಗಳಿಂದ ಜಯಿಸಿದೆ.
ಬಾಂಗ್ಲಾದೇಶ 6ಕ್ಕೆ 294 ರನ್ ಪೇರಿಸಿ ಸವಾಲೊಡ್ಡಿದರೆ, ವೆಸ್ಟ್ ಇಂಡೀಸ್ 47.4 ಓವರ್‌ಗಳಲ್ಲಿ 5 ವಿಕೆಟಿಗೆ 295 ರನ್ ಬಾರಿಸಿತು. ಚೇಸಿಂಗ್ ವೇಳೆ ಕೆರಿಬಿಯನ್ನರ ಆರಂಭಿಕರಾದ ಬ್ರ್ಯಾಂಡನ್ ಕಿಂಗ್ (9) ಮತ್ತು ಎವಿನ್ ಲೂಯಿಸ್ (16) ವಿಕೆಟ್ ಬೇಗ ಪತನಗೊಂಡಿತ್ತು.
ವನ್‌ಡೌನ್‌ನಲ್ಲಿ ಬಂದ ಕೇಸಿ ಕಾರ್ಟಿ (21) ಕೂಡ ಯಶಸ್ಸು ಕಾಣಲಿಲ್ಲ. ಈ ಹಂತದಲ್ಲಿ ಜತೆಗೂಡಿದ ಶೈ ಹೋಪ್ ಮತ್ತು ಶೆರ್ಫೇನ್ ರುದರ್‌ಫೋರ್ಡ್ ಸೇರಿಕೊಂಡು ಸಿಡಿಲಬ್ಬರದ ಆಟಕ್ಕೆ ಮುಂದಾದರು. ಬಾಂಗ್ಲಾ ಬೌಲಿಂಗ್ ಧೂಳೀಪಟಗೊಂಡಿತು.
ರುದರ್‌ಫೋರ್ಡ್ 80 ಎಸೆತಗಳಿಂದ 113 ರನ್ ಬಾರಿಸಿ ತಮ್ಮ ಮೊದಲ ಏಕದಿನ ಶತಕ ಸಂಭ್ರಮವನ್ನಾಚರಿಸಿದರು. ಸಿಡಿಸಿದ್ದು 8 ಸಿಕ್ಸರ್, 7 ಬೌಂಡರಿ. ಅವರ ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂತು. ಹೋಪ್ 88 ಎಸೆತಗಳಿಂದ 86 ರನ್ ಮಾಡಿದರು (4 ಸಿಕ್ಸರ್, 3 ಫೋರ್).
ಬಾಂಗ್ಲಾ ಸರದಿಯಲ್ಲಿ ಓಪನರ್ ತಾಂಜಿದ್ ಹಸನ್ 60, ನಾಯಕ ಮೆಹಿದಿ ಹಸನ್ ಮಿರಾಜ್ 74, ಮಹಮದುಲ್ಲ 50 ರನ್ ಮಾಡಿದರು.
ಸಂಕ್ಷಿಪತ್ತ ಸ್ಕೋರ್: ಬಾಂಗ್ಲಾದೇಶ-6 ವಿಕೆಟಿಗೆ 294 (ಮಿರಾಜ್ 74, ತಾಂಜಿದ್ 60, ಮಹಮದುಲ್ಲ 50, ಜಾಕರ್ ಅಲಿ 48, ಶೆಫರ್ಡ್ 51ಕ್ಕೆ 3, ಜೋಸೆಫ್ 67ಕ್ಕೆ 2). ವೆಸ್ಟ್ ಇಂಡೀಸ್-47.4 ಓವರ್‌ಗಳಲ್ಲಿ 5 ವಿಕೆಟಿಗೆ 295 (ರುದರ್‌ಫೋರ್ಡ್ 113, ಹೋಪ್ 86, ಗ್ರೀವ್ಸ್ ಔಟಾಗದೆ 41, ಸರ್ಕಾರ್ 26ಕ್ಕೆ 1, ರಿಶಾದ್ 49ಕ್ಕೆ 1).
ಪಂದ್ಯಶ್ರೇಷ್ಠ: ಶೆರ್ಫೇನ್ ರುದರ್‌ಫೋರ್ಡ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.