![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jan 26, 2021, 7:20 AM IST
ಚಿತ್ತಗಾಂಗ್: ಏಕದಿನ ಸರಣಿಯಲ್ಲಿ ಪ್ರವಾಸಿ ವೆಸ್ಟ್ ಇಂಡೀಸಿಗೆ ಬಾಂಗ್ಲಾದೇಶ 3-0 ವೈಟ್‌ವಾಶ್ ಮಾಡಿದೆ. ಸೋಮವಾರದ ಅಂತಿಮ ಪಂದ್ಯವನ್ನು 120 ರನ್ನುಗಳ ಭಾರೀ ಅಂತರದಿಂದ ಗೆದ್ದು ಪರಾಕ್ರಮ ಮೆರೆದಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾ 6 ವಿಕೆಟಿಗೆ 297 ರನ್ ಪೇರಿಸಿದರೆ, ವಿಂಡೀಸ್ 44.2 ಓವರ್‌ಗಳಲ್ಲಿ 177ಕ್ಕೆ ಕುಸಿಯಿತು. ಬಾಂಗ್ಲಾ ಸರದಿಯಲ್ಲಿ ಮೂವರು 64 ರನ್ ಗಳಿಸಿದ್ದು ವಿಶೇಷ. ಇವರೆಂದರೆ ನಾಯಕ ತಮಿಮ್ ಇಕ್ಬಾಲ್, ಮುಶ್ಫಿಕರ್ ರಹೀಂ ಮತ್ತು ಮಹಮದುಲ್ಲ.
ಶಕಿಬ್ ವಿಶಿಷ್ಟ ದಾಖಲೆ :
ಬಾಂಗ್ಲಾ ಆಲ್‌ರೌಂಡರ್ ಶಕಿಬ್ ಈ ಪಂದ್ಯದ ವೇಳೆ ವಿಶಿಷ್ಟ ದಾಖಲೆಯೊಂದನ್ನು ನಿರ್ಮಿಸಿದರು. ಅವರು ಒಂದೇ ದೇಶದಲ್ಲಿ ಆಡಲಾದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 6 ಸಾವಿರ ರನ್ ಹಾಗೂ 300 ವಿಕೆಟ್ ಕಿತ್ತ ವಿಶ್ವದ ಮೊದಲ ಆಟಗಾರನಾಗಿ ಮೂಡಿಬಂದರು. ಒಂದು ವರ್ಷದ ನಿಷೇಧದ ಬಳಿಕ ಮತ್ತೆ ದೇಶವನ್ನು ಪ್ರತಿನಿಧಿಸತೊಡಗಿದ ಶಕಿಬ್ ಪಾಲಿಗೆ ಇದೊಂದು ಮಹಾನ್ ಸಾಧನೆಯೇ ಆಗಿದೆ.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾ -6 ವಿಕೆಟಿಗೆ 297. ವಿಂಡೀಸ್-44.2
ಓವರ್‌ಗಳಲ್ಲಿ 177. ಪಂದ್ಯಶ್ರೇಷ್ಠ: ರಹೀಂ. ಸರಣಿಶ್ರೇಷ್ಠ: ಶಕಿಬ್.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.