Pro Kabaddi; ಬೆಂಗಳೂರು ಬುಲ್ಸ್ ಗೆ ಆಘಾತ
Team Udayavani, Dec 3, 2023, 11:22 PM IST
ಅಹ್ಮದಾಬಾದ್: ಬೆಂಗಳೂರು ಬುಲ್ಸ್ 10ನೇ ಪ್ರೊ ಕಬಡ್ಡಿ ಋತುವನ್ನು ಸೋಲಿನೊಂದಿಗೆ ಆರಂಭಿಸಿದೆ. ಹಾವು ಏಣಿಯಾಟದಂತೆ ಸಾಗಿದ ರವಿವಾರದ ದ್ವಿತೀಯ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ 34-31 ಅಂತರದಿಂದ ಬುಲ್ಸ್‌ಗೆ ತಿವಿಯಿತು. ಇದು ಗುಜರಾತ್‌ಗೆ ಒಲಿದ ಸತತ 2ನೇ ಜಯ.
ವಿರಾಮದ ವೇಳೆ ಬುಲ್ಸ್ 20-14ರ ಮುನ್ನಡೆಯಲ್ಲಿತ್ತು. ಅನಂತರವೂ ಪೈಪೋಟಿ ತೀವ್ರಗೊಂಡಿತು. ಗುಜ ರಾತ್ ಪರ ರೈಡರ್ ರಾಕೇಶ್, ಡಿಫೆಂಡರ್ ಸೋಮ್‌ಬೀರ್ ತಲಾ 5 ಅಂಕ ಸಂಪಾದಿಸಿದರು. ಬುಲ್ಸ್ ಪರ ಮಿಂಚಿದವರೆಂದರೆ ರೈಡರ್‌ಗಳಾದ ಭರತ್ (7 ಅಂಕ) ಮತ್ತು ವಿಕಾಸ್ ಖಂಡೋಲ (6 ಅಂಕ).
ತಲೈವಾಸ್ ಜಯ: ದಿನದ ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಸ್ 42-31 ಅಂಕಗಳ ಅಂತರದಿಂದ ದಬಾಂಗ್ ಡೆಲ್ಲಿಯನ್ನು ಕೆಡವಿತು. ವಿರಾಮದ ವೇಳೆ 18-14ರ ಮುನ್ನಡೆಯಲ್ಲಿದ್ದ ತಲೈವಾಸ್ ದ್ವಿತೀಯಾರ್ಧದಲ್ಲೂ ಈ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.
21 ಅಂಕ ಬಾಚಿದ ರೈಡರ್ ಅಜಿಂಕ್ಯ ತಮಿಳ್ ತಲೈವಾಸ್ ಗೆಲುವಿನ ರೂವಾರಿ ಎನಿಸಿದರು. 14 ಟಚ್ ಪಾಯಿಂಟ್, 4 ಬೋನಸ್ ಪಾಯಿಂಟ್ ಮತ್ತು 3 ಟ್ಯಾಕಲ್ ಪಾಯಿಂಟ್‌ಗಳು ಒಳ ಗೊಂಡಿದ್ದವು. ಮತ್ತೋರ್ವ ರೈಡರ್ ನರೇಂದರ್ 8 ಅಂಕ ಗಳಿಸಿ ಕೊಟ್ಟರು. ಡೆಲ್ಲಿ ಪರ ನಾಯಕ ನವೀನ್ ಕುಮಾರ್ 14 ಅಂಕ ಗಳಿಸಿ ಮಿಂಚಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್‌ರೌಂಡರ್
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್ ಡೆಲ್ಲಿ
Ranji Trophy: ಕರ್ನಾಟಕಕ್ಕೆ ಹಿನ್ನಡೆ ಭೀತಿ
MUST WATCH
ಹೊಸ ಸೇರ್ಪಡೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.