ಏಷ್ಯನ್ ಕಬಡ್ಡಿಗೆ ಬೆಂಗಳೂರು ಆತಿಥ್ಯ
Team Udayavani, Mar 25, 2018, 6:40 AM IST
ಬೆಂಗಳೂರು: ದೇಶದ ಕಬಡ್ಡಿ ಇತಿಹಾಸದಲ್ಲಿ ಕ್ರಾಂತಿಯ ಕಿಡಿ ಎದ್ದಿದ್ದೆ. ಅಮೆಚೂರ್ ಕಬಡ್ಡಿ ಫೆಡರೇಷನ್ ಆಫ್ ಇಂಡಿಯಾ
(ಎಕೆಎಫ್ಐ)ಗೆ ಎದುರಾಗಿ ನ್ಯೂ ಕಬಡ್ಡಿ ಫೆಡರೇಷನ್ ಆಫ್ ಇಂಡಿಯಾ (ಎನ್‌ಕೆಎಫ್ಐ)ಅಧಿಕೃತವಾಗಿ ಜನ್ಮ ತಾಳಿದೆ.
ಬೆಂಗಳೂರು ಹೊರವಲಯದ ರೆಸಾರ್ಟ್‌ವೊಂದರಲ್ಲಿ ಹೊಸದಾಗಿ ರಚನೆಯಾದ ಎನ್‌ಕೆಎಫ್ಐ ಪದಾಧಿಕಾರಿಗಳು ಸಭೆ ನಡೆಸಿದರು. ಈ ವೇಳೆ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ನಡೆಸಲು ತೀರ್ಮಾನಿಸಲಾಯಿತು. ಆದರೆ ಅಧಿಕೃತ ದಿನಾಂಕ ಪ್ರಕಟವಾಗಲಿಲ್ಲ. ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸಂಘಟಕರು ತಿಳಿಸಿದರು.
59 ರಾಷ್ಟ್ರದ ಪದಾಧಿಕಾರಿಗಳು ಆಗಮನ: ಎನ್‌ಕೆಎಫ್ಐ ಆಯೋಜಿಸಿದ ಸಭೆಯಲ್ಲಿ ಅಮೆರಿಕ ಸೇರಿದಂತೆ 59 ರಾಷ್ಟ್ರಗಳು
ಪಾಲ್ಗೊಂಡಿದ್ದವು. ಸಭೆಯಲ್ಲಿ ಮೊದಲ ಬಾರಿಗೆ ಏಷ್ಯನ್ ಚಾಂಪಿಯನ್‌ಶಿಪ್ ನಡೆಸಲು ತೀರ್ಮಾನಿಸಲಾಯಿತು.
ಏಷ್ಯಾದ ಎಲ್ಲಾ ರಾಷ್ಟ್ರಗಳಿಗೂ ಆಹ್ವಾನ ನೀಡಲಾಗುತ್ತಿದೆ. ಕನಿಷ್ಠ 16 ರಾಷ್ಟ್ರಗಳು ಕೂಟದಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತೆ
ವೆ. ರಾಜ್ಯ ವಿಧಾನಸಭೆ ಚುನಾವಣೆಯ ದಿನಾಂಕ ನಿಗದಿ ಯಾದ ಮೇಲೆ ಕೂಟದ ದಿನಾಂಕವನ್ನು ತೀರ್ಮಾನಿಸಲಾಗುವುದು
ಎಂದು ಸಂಘಟಕರು ತಿಳಿಸಿದ್ದಾರೆ.
ವಿಶ್ವ ಮಟ್ಟದಲ್ಲಿ ಕಬಡ್ಡಿಯನ್ನು ಆಫ್ರಿಕಾ ಖಂಡ, ಅಮೆರಿಕ ಖಂಡ,ಯೂರೋಪ್ ಖಂಡ,ಏಷ್ಯಾ ಖಂಡ, ಆಸ್ಟ್ರೇಲಿಯಾ ಖಂಡ ಎಂದು 5 ವಿಭಾಗ ಮಾಡಲಾಗಿದೆ. ಈ ಎಲ್ಲಾ ವಿಭಾಗಕ್ಕೆ ವಿಶ್ವ ಕಬಡ್ಡಿ ಫೆಡರೇಷನ್ ಸಂಸ್ಥೆಯನ್ನು ಹುಟ್ಟುಹಾಕಲಾಗಿದೆ. ಸಭೆಯಲ್ಲಿ 59 ರಾಷ್ಟ್ರಗಳ ಸದಸ್ಯರು ಪಾಲ್ಗೊಂಡಿದ್ದರು. ವಿಶ್ವ ಮಟ್ಟದಲ್ಲಿ ಕಬಡ್ಡಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸುವುದು. ಕಾಮನ್‌ವೆಲ್ತ್,ಒಲಿಂಪಿಕ್ಸ್ ಸೇರಿದಂತೆ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕಬಡ್ಡಿಯನ್ನು ಸೇರಿಸಲು ಒಪ್ಪಿಗೆ ನೀಡಿದವು.
ಒಲಿಂಪಿಕ್ಸ್‌ನಲ್ಲಿ ಕಬಡ್ಡಿ ಸೇರಿಸುವುದು ಗುರಿ: ಕಬಡ್ಡಿಯನ್ನು ವಿಶ್ವಮೊಟ್ಟದಲ್ಲಿ ಬೆಳೆಸುವುದು. ಅಂದರೆ ಹೆಚ್ಚು ಹೆಚ್ಚು ರಾಷ್ಟ್ರಗಳಲ್ಲಿ ಕಬಡ್ಡಿ ಆಡುವಂತೆ ಮಾಡುವುದು. ಪ್ರತಿ ರಾಷ್ಟ್ರದಿಂದಲೂ ವಿಶ್ವ ಕಬಡ್ಡಿ ಒಕ್ಕೂಟಕ್ಕೆ ಸದಸ್ಯ ರಾಷ್ಟ್ರಗಳನ್ನಾಗಿ ಮಾಡಿಕೊಳ್ಳುವುದು.
ವಿವಿಧ ರಾಷ್ಟ್ರಗಳಲ್ಲಿ ಆಗಾಗಾ ಅಂತಾರಾಷ್ಟ್ರೀಯ ಕೂಟವನ್ನು ಆಯೋಜಿಸುವುದು. ಆ ಮೂಲಕ 2024ರ ಒಲಿಂಪಿಕ್ಸ್‌ನಲ್ಲಿ ಕಬಡ್ಡಿ ಸೇರಿಸುವಂತೆ ಎಲ್ಲಾ ರಾಷ್ಟ್ರಗಳಿಂದಲೂ ಒತ್ತಡ ಹಾಕಿಸುತ್ತೆವೆ . ಒಂದು ಕ್ರೀಡೆಗೆ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಲು ಕನಿಷ್ಠ 42 ರಾಷ್ಟ್ರಗಳು ಒಪ್ಪಿಗೆ ಸೂಚಿಸಬೇಕಾಗುತ್ತದೆ. ಅದರಲ್ಲಿ ನಾವು ಈಗಾಗಲೇ 50ಕ್ಕೂ ಅಧಿಕ ರಾಷ್ಟ್ರಗಳ ಒಪ್ಪಿಗೆ ಪಡೆದಿದ್ದು ಒಲಿಂಪಿಕ್ಸ್‌ನಲ್ಲಿ ಸೇರಿಸಿಯೇ ಸೇರಿಸುತ್ತೇವೆ ಎಂದು ತಿಳಿಸಿದರು.
ವಿಶ್ವ ಕಬಡ್ಡಿ ಲೀಗ್‌ಗೂ ಚಿಂತನೆ
ವಿಶ್ವ ಮಟ್ಟದಲ್ಲಿ ಕಬಡ್ಡಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸುವುದು ಮತ್ತು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದೇ ವರ್ಷ ವಿಶ್ವ ಕಬಡ್ಡಿ ಲೀಗ್ ಆರಂಭಿಸಲಾಗುತ್ತಿದೆ. ಇದಕ್ಕೆ ಈಗಾಗಲೇ 54 ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ. ಅಮೆರಿಕದ ಮೂಲೆಕ್ಸ್ ಕಂಪನಿ ಧನ ಸಹಾಯಮಾಡಲು ಮುಂದೆ ಬಂದಿದೆ. 10 ವರ್ಷಗಳ ಕಾಲ ಪ್ರತಿ ವರ್ಷ 200 ಕೋಟಿ ರೂ. ಸಹಾಯ ನೀಡಲು ಮುಂದಾಗಿದೆ ಎನ್ನಲಾಗಿದೆ.ಇದಕ್ಕೆ ಪುರಕ ದಾಖಲೆಗಳನ್ನು ಸಂಘಟಕರು ನೀಡಿದ ಮೇಲೆ ಕಂಪನಿಯಿಂದ ಸಹಾಯ ಧನ ದೊರೆಯಲಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ. ಇದಕ್ಕೂ ಮುನ್ನ ಜೂನ್ ಜುಲೈನಲ್ಲಿ ಪ್ರೊ ಕಬಡ್ಡಿ ಲೀಗ್ ಮಾದರಿಯಲ್ಲಿ ಇಂಡಿಯನ್ ಕಬಡ್ಡಿ ಲೀಗ್ ಕೂಡ ನಡೆಯಲಿದೆ.
ಅಧ್ಯಕ್ಷ ಸ್ಥಾನಕ್ಕಾಗಿ ಫೈಟ್, ಬಗೆಹರಿದ ಗೊಂದಲ
ಸಭೆಯ ಸಂದರ್ಭದಲ್ಲಿ ನೂತನವಾಗಿ ರಚನೆಯಾದ ವಿಶ್ವ ಕಬಡ್ಡಿ ಸಂಸ್ಥೆಗೆ ಅಧ್ಯಕ್ಷರನ್ನು ಆಯ್ಕೆ ಮಾಡುವ ವಿಚಾರದಲ್ಲಿ ಕೆಲ ಕಾಲ ಗೊಂದಲ ಉಂಟಾಯಿತು. ಬಿಹಾರ ಮೂಲದ ಮಾರಿಷಸ್‌ನ ಹರೀಶ್ ಕುಮಾರ್ ಸಿಂಗ್ ಮತ್ತು ದೆಹಲಿಯ ಕೆ.ಪಿ.ರಾವ್ ನಡುವೆ ಚುನಾವಣೆ ನಡೆಯುವ ಸಾಧ್ಯತೆ ಇತ್ತು. ಹರೀಶ್ ಬೆಂಬಲಿಗರು ಸಭೆಯಲ್ಲಿಯೇ ಚುನಾವಣೆ ನಡೆಸುವಂತೆ ಪಟ್ಟು ಹಿಡಿದಿದ್ದರು. ಆದರೆ ಕೆ.ಪಿ.ರಾವ್ ಬೆಂಬಲಿಗರು ಚುನಾವಣೆ ಬೇಡ ತಮಗೆ ಬೆಂಬಲ ನೀಡುವಂತೆ ಕೋರಿದ್ದರು. ಕೊನೆಗೆ ಕೆ.ಪಿ.ರಾವ್ ಅಧ್ಯಕ್ಷರಾಗಲು ಹರೀಶ್ ಕುಮಾರ್ ಒಪ್ಪಿಗೆ ನೀಡಿರುವುದರಿಂದ ಚುನಾವಣೆ ನಡೆಯಲಿಲ್ಲ.
ನಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಬಡ್ಡಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸುತ್ತೇವೆ.ಈಗಾಗಲೇ 50 ಕ್ಕೂ ಅಧಿಕ ರಾಷ್ಟ್ರಗಳು ನಮ್ಮ ಜತೆ ಸೇರಿದ್ದಾರೆ.ಹೀಗಾಗಿ ಒಲಿಂಪಿಕ್ಸ್‌ಗೆ ಕಬಡ್ಡಿಯನ್ನು ಸೇರಿಸುತ್ತೇವೆ ಎನ್ನುವ ವಿಶ್ವಾಸವಿದೆ.
– ಜಯ ಶೆಟ್ಟಿ,
ಮಾಜಿ ಆಟಗಾರ,ಸಂಘಟಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.