Bangla-Afghan; ಸಮಬಲರ ಹೋರಾಟ: ರೋಚಕ ಕಾದಾಟ ನಿರೀಕ್ಷೆ


Team Udayavani, Oct 7, 2023, 6:18 AM IST

1-sadsadsa

ಧರ್ಮಶಾಲಾ : ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಧರ್ಮಶಾಲಾ ಮೊದಲ ವಿಶ್ವಕಪ್‌ ಪಂದ್ಯಕ್ಕೆ ಸಜ್ಜಾಗಿದೆ. ಶನಿವಾರ ಇಲ್ಲಿ ಸಮಬಲ ತಂಡಗಳಾದ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನ ತಂಡಗಳು ಮುಖಾಮುಖೀಯಾಗಲಿವೆ. ಇವೆರಡೂ ವಿಶ್ವಕಪ್‌ಗೆ ನೇರ ಪ್ರವೇಶ ಪಡೆದ ತಂಡಗಳಾದ ಕಾರಣ ರೋಚಕ ಹೋರಾಟ ನಿರೀಕ್ಷಿಸಲಡ್ಡಿಯಿಲ್ಲ.

ಬಾಂಗ್ಲಾದೇಶವನ್ನು ಮರಳಿ ಶಕಿಬ್‌ ಅಲ್‌ ಹಸನ್‌ ಮುನ್ನಡೆಸುತ್ತಿರುವುದು ಈ ಸಲದ ವಿಶೇಷ. 2011ರ ಕೂಟದಲ್ಲೂ ಶಕಿಬ್‌ ಬಾಂಗ್ಲಾದ ಸಾರಥ್ಯ ವಹಿಸಿದ್ದರು. ಅಂದಿನ ಪಂದ್ಯಾವಳಿ ಕೂಡ ಭಾರತದಲ್ಲಿ ನಡೆದಿತ್ತು.

ಬಾಂಗ್ಲಾದೇಶ ತಂಡದಿಂದ ತಮಿಮ್‌ ಇಕ್ಬಾಲ್‌ ಅವರನ್ನು ಕೈಬಿಟ್ಟ ಬಳಿಕ ಈ ಸ್ಟಾರ್‌ ಆಟಗಾರರ ನಡುವೆ ಸಣ್ಣದೊಂದು ವಾಗ್ಯುದ್ಧ ನಡೆದಿತ್ತು. ತಮಿಮ್‌ ಅವರನ್ನು ಬೆನ್ನುನೋವಿನ ಕಾರಣದಿಂದ ಹೊರಗಿರಿಸಲಾಯಿತು ಎಂಬುದು ಬಾಂಗ್ಲಾ ಕ್ರಿಕೆಟ್‌ ಮಂಡ ಳಿಯ ಸ್ಪಷ್ಟನೆಯಾಗಿತ್ತು. ಆದರೆ, ತಮಿಮ್‌ 3ನೇ ಕ್ರಮಾಂಕದಲ್ಲಿ ಆಡಲು ನಿರಾಕರಿಸಿದ್ದರಿಂದ ಸ್ಥಾನ ಕಳೆದುಕೊಂಡರು ಎಂಬುದಾಗಿ ಶಕಿಬ್‌ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದಿದ್ದರು. ತಮಿಮ್‌ ಓರ್ವ ಚೈಲ್ಡಿಶ್‌, ಅವರೋರ್ವ ಟೀಮ್‌ ಮ್ಯಾನ್‌ ಅಲ್ಲ ಎಂಬುದಾಗಿ ಶಕಿಬ್‌ ನೇರ ಆರೋಪ ಮಾಡಿದ್ದರು.
ಶಕಿಬ್‌ ಸೇರಿದಂತೆ ಬಾಂಗ್ಲಾ ಬಹಳಷ್ಟು ಅನುಭವಿ ಆಟಗಾರರನ್ನು ಹೊಂದಿದೆ. ಕೀಪರ್‌ ಮುಶ್ಫಿಕರ್‌ ರಹೀಂ, ಲಿಟನ್‌ ದಾಸ್‌, ಮಹಮದುಲ್ಲ, ಪೇಸರ್‌ ಮುಸ್ತಫಿಜುರ್‌ ರೆಹಮಾನ್‌ ಇವರಲ್ಲಿ ಪ್ರಮುಖರು. ಆದರೆ ಇವರೆಲ್ಲರಿಗಿಂತ ಯುವ ಬ್ಯಾಟರ್‌ ನಜ್ಮುಲ್‌ ಹುಸೇನ್‌ ಹೆಚ್ಚು ಅಪಾಯಕಾರಿಯಾಗಿ ಗೋಚರಿ ಸಬಹುದು. ಈ ವರ್ಷದ ಏಕದಿನದಲ್ಲಿ ಅವರು ಬಾಂಗ್ಲಾ ಪರ ಸರ್ವಾಧಿಕ 698 ರನ್‌ ಬಾರಿಸಿದ್ದಾರೆ. ಹಾಗೆಯೇ ತೌಹಿದ್‌ ಹೃದಯ್‌ ಉತ್ತಮ ಲಯದಲ್ಲಿದ್ದಾರೆ.

ಬಾಂಗ್ಲಾದ ನಿಜವಾದ ಶಕ್ತಿ ಇರುವುದೇ ಸ್ಪಿನ್‌ ವಿಭಾಗದಲ್ಲಿ. ಶಕಿಬ್‌, ಮೆಹಿದಿ ಮಿರಾಜ್‌, ಮಹೆದಿ ಹಸನ್‌ ಮಿರಾಜ್‌, ನಾಸುಮ್‌ ಅಹ್ಮದ್‌ ಭಾರತದ ಟ್ರ್ಯಾಕ್‌ಗಳಲ್ಲಿ ಮಿಂಚುವ ಸಾಧ್ಯತೆ ಇದೆ.

ಅಫ್ಘಾನ್‌: ಒಂದೇ ಗೆಲುವು
ಅಫ್ಘಾನಿಸ್ಥಾನ 2017ರಲ್ಲಿ ಐಸಿಸಿಯ ಪೂರ್ಣ ಪ್ರಮಾಣದ ಸದಸ್ಯತ್ವ ಪಡೆದ ಬಳಿಕ ಹಂತ ಹಂತವಾಗಿ ಪ್ರಗತಿ ಸಾಧಿಸುತ್ತ ಬಂದ ತಂಡ. ಆದರೆ ವಿಶ್ವಕಪ್‌ ಇತಿಹಾಸದ 15 ಪಂದ್ಯಗಳಲ್ಲಿ ಜಯಿಸಿದ್ದು ಒಂದರಲ್ಲಿ ಮಾತ್ರ. ಅದೂ ಸ್ಕಾಟ್ಲೆಂಡ್‌ ವಿರುದ್ಧ.

2019ರ ವಿಶ್ವಕಪ್‌ನಲ್ಲಿ ಅಫ್ಘಾನ್‌ ಸಾಧನೆ ಚೇತೋಹಾರಿಯಾಗಿತ್ತು. ಅಂದು ಭಾರತ, ಪಾಕಿಸ್ಥಾವನ್ನು ಸೋಲಿಸುವ ಹಂತಕ್ಕೆ ಬಂದಿತ್ತು. ಇದು ಹಶ್ಮತುಲ್ಲ ಶಾಹಿದಿ ಬಳಗಕ್ಕೆ ಸ್ಫೂರ್ತಿ ಆಗಬೇಕಿದೆ. ಮೊಹಮ್ಮದ್‌ ನಬಿ, ರಶೀದ್‌ ಖಾನ್‌, ಮುಜೀಬ್‌ ಉರ್‌ ರೆಹಮಾನ್‌, ನೂರ್‌ ಅಹ್ಮದ್‌ ಅವರಂಥ ಅನುಭವಿಗಳನ್ನು ಹೊಂದಿರುವ ತಂಡವಿದು. ರೆಹಮಾನುಲ್ಲ ಗುರ್ಬಜ್‌, ಇಬ್ರಾಹಿಂ ಜದ್ರಾನ್‌, ನವೀನ್‌ ಉಲ್‌ ಹಕ್‌, ಮುಜೀಬ್‌ ಉರ್‌ ರೆಹಮಾನ್‌ ಕೂಡ ತಂಡದ ರಕ್ಷಣೆಗೆ ನಿಲ್ಲಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಅಫ್ಘಾನಿಸ್ಥಾನದ ಬ್ಯಾಟಿಂಗ್‌ ಲೈನಅಪ್‌ ಬಲಿಷ್ಠವಾಗಿದ್ದರೂ ಸ್ಥಿರತೆಯ ಕೊರತೆ ಕಾಡುತ್ತಿದೆ. ಗೆಲುವಿನ ಹಂತದಲ್ಲಿ ಮುಗ್ಗರಿಸುವ ಸಮಸ್ಯೆಗೊಂದು ಪರಿಹಾರ ಕಂಡುಕೊಂಡರೆ ಅಫ್ಘಾನ್‌ ಅಪಾಯಕಾರಿ ಗೋಚರಿಸುವುದರಲ್ಲಿ ಅನುಮಾನವಿಲ್ಲ.

ಟಾಪ್ ನ್ಯೂಸ್

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

JPC misused for drama in by-election: HK Patil

Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Tragedy: KTM ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಯುವಕರು ಸ್ಥಳದಲ್ಲೇ ಮೃತ್ಯು

Tragedy: ಭೀಕರ ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್‌ ಆಫ್ರಿಕಾ ಸವಾಲು

IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್‌ ಆಫ್ರಿಕಾ ಸವಾಲು

Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್‌ ಡೆಲ್ಲಿ

Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್‌ ಡೆಲ್ಲಿ

KAR-BE

Ranji Trophy: ಕರ್ನಾಟಕಕ್ಕೆ ಹಿನ್ನಡೆ ಭೀತಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

12(2)

Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ

11

Malpe: ಕೋಡಿಬೆಂಗ್ರೆ-ಹಂಗಾರಕಟ್ಟೆ ಸಂಪರ್ಕ ಇನ್ನು ದೂರ

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

23-bng

Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?

10

Kaup ಒಳಚರಂಡಿ ಸಮಸ್ಯೆ ಪರಿಹಾರಕ್ಕೆ ವಿಶೇಷ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.