BANvsSL; ಹೋರಾಟ ಮುಂದುವರಿಸಿದ ಬಾಂಗ್ಲಾ; ಸೋಲು ಖಚಿತ
Team Udayavani, Apr 2, 2024, 7:59 PM IST
ಚತ್ತೋಗ್ರಾಮ್: ಪ್ರವಾಸಿ ಶ್ರೀಲಂಕಾ ಎದುರಿನ ದ್ವಿತೀಯ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಬ್ಯಾಟಿಂಗ್ ಹೋರಾಟವೊಂದನ್ನು ನಡೆಸಿದರೂ ಸೋಲನ್ನು ಖಚಿತಪಡಿಸಿದೆ. ಗೆಲುವಿಗೆ 511 ರನ್ನುಗಳ ಕಠಿನ ಗುರಿ ಪಡೆದಿದ್ದು, 4ನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 268 ರನ್ ಗಳಿಸಿದೆ.
353 ರನ್ನುಗಳ ಬೃಹತ್ ಮುನ್ನಡೆ ಬಳಿಕ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಶ್ರೀಲಂಕಾ, ದ್ವಿತೀಯ ಸರದಿಯಲ್ಲಿ 7ಕ್ಕೆ 157 ರನ್ ಗಳಿಸಿ ಡಿಕ್ಲೇರ್ ಮಾಡಿತು. ಚೇಸಿಂಗ್ ವೇಳೆ ಬಾಂಗ್ಲಾ ಮೊದಲ ಸರದಿಗಿಂತಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನೇನೋ ನೀಡಿದೆ, ಆದರೆ ಆತಿಥೇಯರ ಮುಂದೆ ಸೋಲಿನಿಂದ ಪಾರಾಗುವ ಯಾವುದೇ ಮಾರ್ಗ ಗೋಚರಿಸುತ್ತಿಲ್ಲ.
ಮೊಮಿನುಲ್ ಹಕ್ 50 ರನ್ ಮಾಡಿದರು. ಮೆಹಿದಿ ಹಸನ್ ಮಿರಾಜ್ 44 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಲಹಿರು ಕುಮಾರ, ಪ್ರಭಾತ್ ಜಯಸೂರ್ಯ ಮತ್ತು ಕಮಿಂಡು ಮೆಂಡಿಸ್ ತಲಾ 2 ವಿಕೆಟ್ ಉರುಳಿಸಿದರು. ನಾಳೆ ಪಂದ್ಯದ ಅಂತಿಮ ದಿನ.
ಮೊದಲ ಟೆಸ್ಟ್ ಪಂದ್ಯವನ್ನು 328 ರನ್ನುಗಳಿಂದ ಗೆದ್ದ ಶ್ರೀಲಂಕಾ 1-0 ಮುನ್ನಡೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ
Womens Cricket: ನ್ಯೂಜಿಲ್ಯಾಂಡ್ ಎದುರಿನ ಏಕದಿನ ಸರಣಿಗೆ ನಾಯಕತ್ವ ಉಳಿಸಿಕೊಂಡ ಕೌರ್
Pro Kabaddi League: ಇಂದಿನಿಂದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಹವಾ
Womens T20 World Cup: 6 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಮಣಿಸಿ ಫೈನಲ್ಗೇರಿದ ದ.ಆಫ್ರಿಕಾ
Virat Kohli ಸಮಸ್ಯೆಗಳನ್ನು ಜಟಿಲಗೊಳಿಸಿದ್ದಾರೆ!; ಖ್ಯಾತ ಕ್ರಿಕೆಟ್ ವಿಶ್ಲೇಷಕ ಟೀಕೆ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.