ಬಾಂಗ್ಲಾಕ್ಕೆ 457 ರನ್ ಟಾರ್ಗೆಟ್
Team Udayavani, Mar 11, 2017, 9:39 AM IST
ಗಾಲೆ: ಗಾಲೆ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಪ್ರವಾಸಿ ಬಾಂಗ್ಲಾದೇಶದ ಗೆಲುವಿಗೆ 457 ರನ್ನುಗಳ ಕಠಿನ ಗುರಿ ನೀಡಿದೆ. ಬಾಂಗ್ಲಾ ವಿಕೆಟ್ ನಷ್ಟವಿಲ್ಲದೆ 67 ರನ್ ಮಾಡಿ 4ನೇ ದಿನದಾಟ ಮುಗಿಸಿದೆ.
ಕೊನೆಯ ದಿನದಾಟದಲ್ಲಿ 390 ರನ್ ಗಳಿಸುವುದು ಬಾಂಗ್ಲಾಕ್ಕೆ ಅಸಾಧ್ಯವೇ ಸರಿ. ಆದರೆ ಕೆಲವು ವಿಕೆಟ್‌ಗಳನ್ನು ಉಳಿಸಿಕೊಂಡು ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಪ್ರಯತ್ನಿಸಬಹುದು. ಈ ಸಂದರ್ಭದಲ್ಲಿ ಪ್ರತಿಕೂಲ ಹವಾಮಾನವೂ ಬಾಂಗ್ಲಾಕ್ಕೆ ವರವಾಗಿ ಪರಿಣಮಿಸುವ ಸಾಧ್ಯತೆ ಇದೆ.
ಇನ್ನೊಂದೆಡೆ ಶ್ರೀಲಂಕಾ ಗೆಲುವಿಗಾಗಿ ಶಕ್ತಿಮೀರಿ ಶ್ರಮಿಸಲಿದೆ. ಆದರೆ ಶುಕ್ರವಾರದ 15 ಓವರ್‌ಗಳ ಆಟದಲ್ಲಿ ಬಾಂಗ್ಲಾದ ಯಾವುದೇ ವಿಕೆಟ್ ಉರುಳಿಸಲು ಸಾಧ್ಯವಾಗದಿದ್ದುದು ಲಂಕೆಗೆ ಎದುರಾದ ಸಣ್ಣದೊಂದು ಹಿನ್ನಡೆಯಾಗಿದೆ. ಬಿರುಸಿನ ಆಟಕ್ಕೆ ಮುಂದಾಗಿರುವ ಸೌಮ್ಯ ಸರ್ಕಾರ್ 47 ಎಸೆತಗಳಿಂದ 53 ರನ್ (6 ಬೌಂಡರಿ, 1 ಸಿಕ್ಸರ್) ಬಾರಿಸಿದ್ದು, ತಮಿಮ್ ಇಕ್ಬಾಲ್ 13 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
3ನೇ ದಿನದಾಟದ ಕೊನೆಯಲ್ಲಿ ಬಾಂಗ್ಲಾ 312 ರನ್ನಿಗೆ ತನ್ನ ಮೊದಲ ಸರದಿಯನ್ನು ಮುಗಿಸಿತ್ತು. 182 ರನ್ನುಗಳ ಭಾರೀ ಮುನ್ನಡೆಯೊಂದಿಗೆ ಶ್ರೀಲಂಕಾ ಶುಕ್ರವಾರ ದ್ವಿತೀಯ ಇನ್ನಿಂಗ್ಸ್ ಆರಂಭಿಸಿತು. ಬಿರುಸಿನ ಆಟಕ್ಕಿಳಿದು 6ಕ್ಕೆ 274 ರನ್ ಪೇರಿಸಿ ಡಿಕ್ಲೇರ್ ಮಾಡಿತು. ಕೊನೆಯ ಅವಧಿಯಲ್ಲಿ ಒಂದೆರಡಾದರೂ ವಿಕೆಟ್ ಉರುಳಿಸಿ ಬಾಂಗ್ಲಾ ಮೇಲೆ ಒತ್ತಡ ಹೇರುವುದು ಲಂಕೆಯ ಯೋಜನೆಯಾಗಿತ್ತು.
ತರಂಗ ಶತಕದಾಟ
ಶ್ರೀಲಂಕಾದ ದ್ವಿತೀಯ ಇನ್ನಿಂಗ್ಸಿನ ಆಕರ್ಷಣೆಯೆಂದರೆ ಆರಂಭಕಾರ ಉಪುಲ್ ತರಂಗ ಅವರ 3ನೇ ಟೆಸ್ಟ್ ಶತಕ. 171 ಎಸೆತಗಳನ್ನೆದುರಿಸಿದ ತರಂಗ 11 ಬೌಂಡರಿ, 2 ಸಿಕ್ಸರ್ ನೆರವಿನಿಂದ 115 ರನ್ ಬಾರಿಸಿದರು. ಚಂಡಿಮಾಲ್ ಔಟಾಗದೆ 50 ರನ್ ಮಾಡಿದರು.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-494 ಮತ್ತು 6 ವಿಕೆಟಿಗೆ 274 ಡಿಕ್ಲೇರ್ (ತರಂಗ 115, ಚಂಡಿಮಾಲ್ ಔಟಾಗದೆ 50, ಪೆರೆರ 33, ಕರುಣಾರತ್ನೆ 32, ಮಿರಾಜ್ 77ಕ್ಕೆ 2, ಶಕಿಬ್ 104ಕ್ಕೆ 2). ಬಾಂಗ್ಲಾದೇಶ-312 ಮತ್ತು ವಿಕೆಟ್ ನಷ್ಟವಿಲ್ಲದೆ 67.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Team India: ಇಂಗ್ಲೆಂಡ್ ಸರಣಿಗಿಲ್ಲ ಪ್ರಮುಖ ಆಟಗಾರರು; ಯುವ ಬ್ಯಾಟರ್ ಗೆ ನಾಯಕತ್ವದ ಹೊಣೆ
Vijay Hazare : ವರುಣ್, ತಿಲಕ್ ಬ್ಯಾಟಿಂಗ್ ವೈಭವ; ಹೈದರಾಬಾದ್ ವಿರುದ್ದ ಸೋತ ಕರ್ನಾಟಕ
Video: ಆಸ್ಪತ್ರೆಯಲ್ಲಿ ‘ಚಕ್ ದೇ ಇಂಡಿಯಾ’ ಹಾಡಿಗೆ ವಿನೋದ್ ಕಾಂಬ್ಳಿ ನೃತ್ಯ.. ವಿಡಿಯೋ ವೈರಲ್
Blitz Chess: ಜೀನ್ಸ್ ಧರಿಸಲು ಫಿಡೆ ಅನುಮತಿ: ಬ್ಲಿಟ್ಜ್ ಚೆಸ್ ಆಡಲು ಕಾರ್ಲ್ಸನ್ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Delhi; ಹಿಂದೂ, ಸಿಕ್ಖ್ ಅರ್ಚಕರಿಗೆ 18,000 ರೂ.: ನೋಂದಣಿ ಶುರು
Yemen; ಕೇರಳದ ನರ್ಸ್‌ಗೆ ಗಲ್ಲು: ಯೆಮೆನ್ ಅಧ್ಯಕ್ಷ ಸಮ್ಮತಿ
Editorial; ಜಗತ್ತಿನೆಲ್ಲೆಡೆ ಅನುರಣಿಸಲಿ ಶಾಂತಿ, ಸಹಬಾಳ್ವೆಯ ಮಂತ್ರ
Work-life balance; ಹೆಚ್ಚು ಸಮಯ ಕಳೆದರೆ ಪತ್ನಿ ಓಡಿ ಹೋಗಬಹುದು: ಗೌತಮ್ ಅದಾನಿ
KTR ಫಾರ್ಮುಲಾ ರೇಸ್ ಕೇಸ್ ರದ್ದು: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.