ಕೊಹ್ಲಿ ದ್ವಿಶತಕ ತೋರಣ ಭಾರತದ ಸಿಡಿಗುಂಡಿಗೆ ಬಾಂಗ್ಲಾ ಬೆಂಡು

Team Udayavani, Feb 11, 2017, 3:45 AM IST

kohil-800.jpg

ಹೈದರಾಬಾದ್‌: ತಮ್ಮ ಅಜೇಯ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿ ಮೆರೆದಾಡಿದ ಕ್ಯಾಪ್ಟನ್‌ ಕೊಹ್ಲಿ, ಅಜೇಯ ಶತಕದೊಂದಿಗೆ ಜೀವನಶ್ರೇಷ್ಠ ಬ್ಯಾಟಿಂಗ್‌ ಸಾಧನೆಗೈದ ಕೀಪರ್‌ ವೃದ್ಧಿಮಾನ್‌ ಸಾಹಾ ಸಾಹಸದೊಂದಿಗೆ ಬಾಂಗ್ಲಾ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಭಾರತ ರನ್ನಿನ ಪರ್ವತವನ್ನೇ ನಿರ್ಮಿಸಿದೆ. ರಹೀಂ ಬಳಗ ಬಳಲಿ ಬೆಂಡಾಗಿದೆ.

ಮೊದಲ ದಿನದಾಟದಲ್ಲಿ 3 ವಿಕೆಟಿಗೆ 356 ರನ್‌ ಪೇರಿಸಿ ಬೃಹತ್‌ ಮೊತ್ತದ ಸೂಚನೆ ನೀಡಿದ್ದ ಭಾರತ, ಶುಕ್ರವಾರ ಇದನ್ನು ಸಾಕಾರಗೊಳಿಸಿತು. 6 ವಿಕೆಟಿಗೆ 687 ರನ್‌ ಸಂಗ್ರಹಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿತು. ಇದು ಬಾಂಗ್ಲಾ ವಿರುದ್ಧ ಭಾರತ ಒಟ್ಟುಗೂಡಿಸಿದ ಅತ್ಯಧಿಕ ಮೊತ್ತ. 2007ರ ಢಾಕಾ ಟೆಸ್ಟ್‌ನಲ್ಲಿ 3ಕ್ಕೆ 610 ರನ್‌ ಪೇರಿಸಿದ್ದು ಭಾರತದ ಹಿಂದಿನ ದಾಖಲೆ.

ಭಾರತ ತನ್ನ ಟೆಸ್ಟ್‌ ಇತಿಹಾಸದಲ್ಲಿ ದಾಖಲಿಸಿದ 6ನೇ ಸರ್ವಾಧಿಕ ಮೊತ್ತ ಇದಾಗಿದೆ. 687ರ ಮೊತ್ತದಲ್ಲಿ ಒಟ್ಟು 71 ಬೌಂಡರಿ ಹಾಗೂ 5 ಸಿಕ್ಸರ್‌ ಸಿಡಿಯಲ್ಪಟ್ಟವು.

ಜವಾಬು ನೀಡತೊಡಗಿದ ರಹೀಂ ಪಡೆ ಒಂದು ವಿಕೆಟಿಗೆ 41 ರನ್‌ ಮಾಡಿದೆ. 15 ರನ್‌ ಮಾಡಿದ ಹಂಗಾಮಿ ಆರಂಭಕಾರ ಸೌಮ್ಯ ಸರ್ಕಾರ್‌ ಅವರನ್ನು ಉಮೇಶ್‌ ಯಾದವ್‌ ಬಲೆಗೆ ಬೀಳಿಸಿದರು.

ದ್ವಿತೀಯ ದಿನದಾಟದಲ್ಲೂ ಬಾಂಗ್ಲಾಕ್ಕೆ ಉರುಳಿಸಲು ಸಾಧ್ಯವಾದದ್ದು ಮೂರೇ ವಿಕೆಟ್‌. ಇದಕ್ಕೆ ಪ್ರತಿಯಾಗಿ ಭಾರತ 331 ರನ್‌ ಸಂಗ್ರಹಿಸಿತು.

ಸತತ 3 ಟೆಸ್ಟ್‌ಗಳಲ್ಲಿ 600 ರನ್‌!
ಶುಕ್ರವಾರದ ಬ್ಯಾಟಿಂಗ್‌ ವೈಭವದ ವೇಳೆ ಬಾರತ ಅಮೋಘ ವಿಶ್ವದಾಖಲೆಯೊಂದನ್ನು ನಿರ್ಮಿಸಿತು. ಭಾರತ ಸತತ 3 ಟೆಸ್ಟ್‌ಗಳಲ್ಲಿ 600 ಪ್ಲಸ್‌ ರನ್‌ ಪೇರಿಸಿದ ವಿಶ್ವದ ಮೊದಲ ತಂಡವಾಗಿ ಹೊರಹೊಮ್ಮಿತು. ಇದಕ್ಕೂ ಮುನ್ನ ಕಳೆದ ಇಂಗ್ಲೆಂಡ್‌ ಸರಣಿಯ ಮುಂಬಯಿ ಪಂದ್ಯದಲ್ಲಿ 631 ಹಾಗೂ ಚೆನ್ನೈ ಪಂದ್ಯದಲ್ಲಿ 7ಕ್ಕೆ 759 ರನ್‌ ರಾಶಿ ಹಾಕಿತ್ತು.

ಬ್ರಾಡ್‌ಮನ್‌ಗಿಂತ ಕೊಹ್ಲಿ ಮುಂದೆ
111 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ವಿರಾಟ್‌ ಕೊಹ್ಲಿ 204ರ ತನಕ ಬೆಳೆದರು. ಇದು ಅವರ 4ನೇ ದ್ವಿಶತಕ. ಎಲ್ಲವೂ ನಾಯಕನಾದ ಬಳಿಕವೇ ದಾಖಲಾದದ್ದು ವಿಶೇಷ. ಈ 4 ದ್ವಿಶತಕಗಳು ಸತತ 4 ಸರಣಿಗಳಲ್ಲಿ ಸಿಡಿದಿವೆ. ಈ ಸಾಧನೆಯಿಂದ ಡಾನ್‌ ಬ್ರಾಡ್‌ಮನ್‌ ಅವರನ್ನೂ ಮೀರಿ ನಿಂತ ಹೆಗ್ಗಳಿಕೆ ಕೊಹ್ಲಿ ಅವರದಾಯಿತು.

ಭಾರತ ಸರದಿಯ 3ನೇ ಶತಕ ಕೀಪರ್‌ ವೃದ್ಧಿಮಾನ್‌ ಸಾಹಾ ಅವರಿಂದ ದಾಖಲಾಯಿತು. ಅಜೇಯ 106 ರನ್‌ ಬಾರಿಸುವ ಮೂಲಕ ಸಾಹಾ ತಮ್ಮ ಪುನರಾಗಮನವನ್ನು ಭರ್ಜರಿಯಾಗಿಯೇ ಸಮರ್ಥಿಸಿಕೊಂಡರು. ಇದು ಸಾಹಾ ಅವರ 2ನೇ ಶತಕ ಹಾಗೂ ಜೀವನಶ್ರೇಷ್ಠ ಗಳಿಕೆ. ಕಳೆದ ವರ್ಷ ವೆಸ್ಟ್‌ ಇಂಡೀಸ್‌ ವಿರುದ್ಧ ಗ್ರಾಸ್‌ ಐಲೆಟ್‌ ಟೆಸ್ಟ್‌ನಲ್ಲಿ ಸಾಹಾ 104 ರನ್‌ ಮಾಡಿದ್ದರು. ಸಾಹಾ ಈ ಗಡಿ ದಾಟಿದೊಡನೆಯೇ ಕೊಹ್ಲಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿದರು.

ಈ ನಡುವೆ ಮತ್ತೂಬ್ಬ ನಾಟೌಟ್‌ ಬ್ಯಾಟ್ಸ್‌ಮನ್‌ ಅಜಿಂಕ್ಯ ರಹಾನೆ 45ರಿಂದ ಬ್ಯಾಟಿಂಗ್‌ ಮುಂದುವರಿಸಿ 82ರ ತನಕ ಸಾಗಿದರು. ಪೂಜಾರ ಅವರಂತೆ ಶತಕ ವಂಚಿತರಾದರು. ಇಲ್ಲವಾದರೆ ಭಾರತದ ಸರದಿಯಲ್ಲಿ 5 ಶತಕಗಳನ್ನು ಕಾಣಬಹುದಿತ್ತು. ರವೀಂದ್ರ ಜಡೇಜ 60 ರನ್‌ ಬಾರಿಸಿ ಅಜೇಯರಾಗಿ ಉಳಿದರೆ (78 ಎಸೆತ, 4 ಬೌಂಡರಿ, 2 ಸಿಕ್ಸರ್‌), ಅಶ್ವಿ‌ನ್‌ 34 ರನ್‌ ಮಾಡಿದರು. ಅತ್ತ ಬಾಂಗ್ಲಾ ಪರ ಬೌಲಿಂಗ್‌ ದಾಳಿಗಿಳಿದ 8 ಮಂದಿಯಲ್ಲಿ ಐವರಿಂದ “ಶತಕ’ ದಾಖಲಾಯಿತು!

ಕೊಹ್ಲಿ-ರಹಾನೆ 222 ರನ್‌ ಜತೆಯಾಟ
ದ್ವಿತೀಯ ದಿನ ಬ್ಯಾಟಿಂಗ್‌ ಮುಂದುವರಿಸಿದ ಕೊಹ್ಲಿ-ರಹಾನೆ 4ನೇ ವಿಕೆಟಿಗೆ 222 ರನ್‌ ಪೇರಿಸಿದರು. ಲಂಚ್‌ಗೂ ಸ್ವಲ್ಪ ಮೊದಲು ತೈಜುಲ್‌ ಇಸ್ಲಾಂ ಈ ಜೋಡಿ ಮುರಿದರು. ರಹಾನೆ 133 ಎಸೆತಗಳಿಂದ 82 ರನ್‌ ಮಾಡಿ ನಿರ್ಗಮಿಸಿದರು (11 ಬೌಂಡರಿ).

ಆದರೆ ಕೊಹ್ಲಿ ಡಬಲ್‌ ಸೆಂಚುರಿಯ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಲಂಚ್‌ ಕಳೆದು ಸ್ವಲ್ಪ ಹೊತ್ತಿನಲ್ಲಿ, 239ನೇ ಎಸೆತದಲ್ಲಿ ಅವರ ದ್ವಿಶತಕ ಪೂರ್ತಿಗೊಂಡಿತು. ಒಟ್ಟು 246 ಎಸೆತ ನಿಭಾಯಿಸಿದ ಕೊಹ್ಲಿ 24 ಬೌಂಡರಿ ಬಾರಿಸಿದರು.
ಕೊಹ್ಲಿ ನಿರ್ಗಮನದ ಬಳಿಕ ಸಾಹಾ ಕ್ರೀಸ್‌ ಆಕ್ರಮಿಸಿಕೊಂಡರು. 153ನೇ ಎಸೆತದಲ್ಲಿ ಅವರ ಶತಕ ಪೂರ್ತಿಗೊಂಡಿತು. 155 ಎಸೆತಗಳ ಇನ್ನಿಂಗ್ಸಿನಲ್ಲಿ 7 ಬೌಂಡರಿ, 2 ಸಿಕ್ಸರ್‌ ಒಳಗೊಂಡಿತ್ತು.

ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌
ಕೆ.ಎಲ್‌. ರಾಹುಲ್‌    ಬಿ ತಸ್ಕಿನ್‌    2
ಮುರಳಿ ವಿಜಯ್‌    ಬಿ ತೈಜುಲ್‌    108
ಚೇತೇಶ್ವರ್‌ ಪೂಜಾರ    ಸಿ ರಹೀಂ ಬಿ ಮಿರಾಜ್‌    83
ವಿರಾಟ್‌ ಕೊಹ್ಲಿ    ಎಲ್‌ಬಿಡಬ್ಲ್ಯು ತೈಜುಲ್‌    204
ಅಜಿಂಕ್ಯ ರಹಾನೆ    ಸಿ ಮಿರಾಜ್‌ ಬಿ ತೈಜುಲ್‌    82
ವೃದ್ಧಿಮಾನ್‌ ಸಾಹಾ    ಔಟಾಗದೆ    106
ಆರ್‌. ಅಶ್ವಿ‌ನ್‌    ಸಿ ಸರ್ಕಾರ್‌ ಬಿ ಮಿರಾಜ್‌    34
ರವೀಂದ್ರ ಜಡೇಜ    ಔಟಾಗದೆ    60
ಇತರ        8
ಒಟ್ಟು  (6 ವಿಕೆಟಿಗೆ ಡಿಕ್ಲೇರ್‌)        687
ವಿಕೆಟ್‌ ಪತನ: 1-2, 2-180, 3-234, 4-456, 5-495, 6-569.
ಬೌಲಿಂಗ್‌:
ತಸ್ಕಿನ್‌ ಅಹ್ಮದ್‌        25-2-127-1
ಕಮ್ರುಲ್‌ ಇಸ್ಲಾಂ ರಬ್ಬಿ        19-1-100-0
ಸೌಮ್ಯ ಸರ್ಕಾರ್‌        1-0-4-0
ಮೆಹೆದಿ ಹೊಸೇನ್‌ ಮಿರಾಜ್‌        42-0-165-2
ಶಕಿಬ್‌ ಅಲ್‌ ಹಸನ್‌        24-4-104-0
ತೈಜುಲ್‌ ಇಸ್ಲಾಮ್‌        47-6-156-3
ಶಬ್ಬೀರ್‌ ರೆಹಮಾನ್‌        3-0-10-0
ಮಹಮದುಲ್ಲ        5-0-16-0

ಬಾಂಗ್ಲಾದೇಶ ಪ್ರಥಮ ಇನ್ನಿಂಗ್ಸ್‌
ತಮಿಮ್‌ ಇಕ್ಬಾಲ್‌    ಬ್ಯಾಟಿಂಗ್‌    24
ಸೌಮ್ಯ ಸರ್ಕಾರ್‌    ಸಿ ಸಾಹಾ ಬಿ ಯಾದವ್‌    15
ಮೊಮಿನುಲ್‌ ಹಕ್‌    ಬ್ಯಾಟಿಂಗ್‌    1
ಇತರ        1
ಒಟ್ಟು  (1 ವಿಕೆಟಿಗೆ)        41
ವಿಕೆಟ್‌ ಪತನ: 1-38.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        5-2-7-0
ಇಶಾಂತ್‌ ಶರ್ಮ        5-0-30-0
ಆರ್‌. ಅಶ್ವಿ‌ನ್‌        2-1-1-0
ಉಮೇಶ್‌ ಯಾದವ್‌        2-1-2-1

ಭಾರತದ ಸರ್ವಾಧಿಕ ಟೆಸ್ಟ್‌ ಸ್ಕೋರ್‌
ಭಾರತ 6ಕ್ಕೆ 687 ರನ್‌ ಪೇರಿಸುವ ಮೂಲಕ ತನ್ನ ಟೆಸ್ಟ್‌ ಇತಿಹಾಸದ 5ನೇ ಸರ್ವಾಧಿಕ ಸ್ಕೋರ್‌ ದಾಖಲಿಸಿತು. ಇದು ಬಾಂಗ್ಲಾ ವಿರುದ್ಧ ಭಾರತ ಪೇರಿಸಿದ ಅತ್ಯಧಿಕ ಗಳಿಕೆಯೂ ಹೌದು. 2007ರ ಢಾಕಾ ಟೆಸ್ಟ್‌ ಪಂದ್ಯದಲ್ಲಿ 3ಕ್ಕೆ 610 ರನ್‌ ಗಳಿಸಿ ಡಿಕ್ಲೇರ್‌ ಮಾಡಿದ್ದು ಈವರೆಗಿನ ಗರಿಷ್ಠ ಮೊತ್ತವಾಗಿತ್ತು.

ಭಾರತದ ಟಾಪ್‌-5 “ಟಾಪ್‌ ಸ್ಕೋರ್‌’ಗಳ ಯಾದಿ ಇಲ್ಲಿದೆ.

ಭಾರತದ ಸರ್ವಾಧಿಕ ಟೆಸ್ಟ್‌ ಸ್ಕೋರ್‌
ರನ್‌    ವಿರುದ್ಧ    ಅಂಗಳ    ವರ್ಷ
7ಕ್ಕೆ 759 ಡಿ.    ಇಂಗ್ಲೆಂಡ್‌    ಚೆನ್ನೈ    2016
9ಕ್ಕೆ 726 ಡಿ.    ಶ್ರೀಲಂಕಾ    ಮುಂಬಯಿ    2009
707    ಶ್ರೀಲಂಕಾ    ಕೊಲಂಬೊ    2010
7ಕ್ಕೆ 705 ಡಿ.    ಆಸ್ಟ್ರೇಲಿಯ    ಸಿಡ್ನಿ    2004
6ಕ್ಕೆ 687 ಡಿ.    ಬಾಂಗ್ಲಾದೇಶ    ಹೈದರಾಬಾದ್‌    2017

ಟಾಪ್ ನ್ಯೂಸ್

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮPro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

up

Ranji match: ಉತ್ತರಪ್ರದೇಶ ಬೃಹತ್‌ ಮೊತ್ತ ಗೆಲುವಿಗೆ ಕರ್ನಾಟಕ ಹೋರಾಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮPro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

up

Ranji match: ಉತ್ತರಪ್ರದೇಶ ಬೃಹತ್‌ ಮೊತ್ತ ಗೆಲುವಿಗೆ ಕರ್ನಾಟಕ ಹೋರಾಟ

cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

Cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Tennis: ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಸಂಚಾರ: ಬಿಸಿಸಿಐ ನಿಂದ ತೀವ್ರ ಖಂಡನೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.