ಬೀದಿಗಿಳಿದು ನೊಂದವರ ಸಹಾಯಕ್ಕೆ ಮುಂದಾದ ಮೊಸಾದೆಕ್ ಹೊಸೈನ್
Team Udayavani, Apr 2, 2020, 5:27 AM IST
ಮೈಮನ್‌ಸಿಂಗ್ (ಬಾಂಗ್ಲಾ): ದೇಶಕ್ಕೆ ಕಷ್ಟ ಬಂದಾಗ ಕೈಲಾದಷ್ಟು ಹಣ ಕೊಡುವುದು ಒಂದು ರೀತಿ. ಇನ್ನೊಂದು ರೀತಿಯಿದೆ, ಹಣ ಕೊಡುವುದು ಮಾತ್ರವಲ್ಲ, ಪೂರ್ಣ ಹೊಣೆಗಾರಿಕೆ ಹೊತ್ತುಕೊಂಡು ಅಖಾಡಕ್ಕೆ ಇಳಿಯುವುದು.
ಭಾರತದಲ್ಲಿ ಮಾಜಿ ಕ್ರಿಕೆಟಿಗ ಜೋಗಿಂದರ್ ಶರ್ಮ, ಕಬಡ್ಡಿ ಆಟಗಾರ ಅಜಯ್ ಠಾಕೂರ್ ಈ ಸಾಲಿಗೆ ಸೇರುತ್ತಾರೆ. ಇವೆಲ್ಲವನ್ನು ಮೀರಿ ಇಡೀ ವಿಶ್ವಕ್ಕೆ ಸ್ಫೂರ್ತಿಯ ಸೆಲೆಯಾಗಿರುವುದು ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಲ್‌ರೌಂಡರ್ ಮೊಸಾದೆಕ್ ಹೊಸೈನ್.
ಕೋವಿಡ್ 19 ವೈರಸ್ ನಿಂದ ದಿನಗೂಲಿ ನೌಕರರು, ಬಡವರು, ವೃದ್ಧರು, ಅಶಕ್ತರು, ಗ್ರಾಮೀಣ ಭಾಗದ ಜನರ ಪರಿಸ್ಥಿತಿಯನ್ನಂತೂ ಕೇಳುವುದೇ ಬೇಡ. ಬಾಂಗ್ಲಾದ ಒಟ್ಟು ಜನಸಂಖ್ಯೆಯಲ್ಲಿ ಬಡವರ ಸಂಖ್ಯೆ 6 ಕೋಟಿ. ಇವರ ನೆರವಿಗೆ ಧಾವಿಸಿ ಬನ್ನಿ ಎಂದು ಮೊಸಾದೆಕ್ ಕೇಳಿಕೊಂಡಿದ್ದಾರೆ.
ತಮ್ಮ ಹುಟ್ಟೂರಿನ 200 ಬಡ ಕುಟುಂಬಗಳಿಗೆ ಅಗತ್ಯ ವ್ಯವಸ್ಥೆ ಮಾಡುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ ಅವರು ಆಹಾರ, ಬಟ್ಟೆ ಹಂಚುತ್ತಿರುವ ದೃಶ್ಯಗಳ ಮನಕಲಕುವಂತಿವೆ. ಇದು ಎಲ್ಲರಿಗೂ ಸ್ಫೂರ್ತಿಯಾಗಬೇಕಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.