ಬ್ಯಾಟ್ನೊಂದಿಗೆ ವೆಡ್ಡಿಂಗ್ ಫೋಟೋ ಶೂಟ್: ಬಾಂಗ್ಲಾ ಆಟಗಾರ್ತಿ ಸಂಜಿದಾ ವಿಶಿಷ್ಟ ಹೆಜ್ಜೆ
Team Udayavani, Oct 21, 2020, 11:00 PM IST
ಢಾಕಾ: ವಿಭಿನ್ನ ರೀತಿಯಲ್ಲಿ “ವೆಡ್ಡಿಂಗ್ ಫೋಟೋ ಶೂಟ್’ ನಡೆಸುವುದು ಈಗಿನ ಟ್ರೆಂಡ್. ಈ ನಿಟ್ಟಿನಲ್ಲಿ ಬಾಂಗ್ಲಾದೇಶ ರಾಷ್ಟ್ರೀಯ ಕ್ರಿಕೆಟ್ ತಂಡದ ಆಟಗಾರ್ತಿ ಸಂಜಿದಾ ಇಸ್ಲಾಮ್ ವಿಶಿಷ್ಟ ಹೆಜ್ಜೆ ಇರಿಸಿದ್ದಾರೆ. ಮದುವೆಯ ಸಾಂಪ್ರದಾಯಕ ಉಡುಗೆಯಲ್ಲೇ ಅಂಗಳಕ್ಕಿಳಿದು, ಬ್ಯಾಟಿಂಗ್ ಮಾಡುವ ಶೈಲಿಯಲ್ಲಿ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಇದೀಗ ವೈರಲ್ ಆಗಿದೆ.
24 ವರ್ಷದ ಮಧ್ಯಮ ಕ್ರಮಾಂಕದ ಆಟಗಾರ್ತಿ ಸಂಜಿದಾ ಅವರ ವಿವಾಹ ಪ್ರಥಮ ದರ್ಜೆ ಕ್ರಿಕೆಟಿಗ ಮಿಮ್ ಮೊಸೆದ್ದೆಕ್ ಅವರೊಂದಿಗೆ ಇತ್ತೀಚೆಗೆ ನಡೆದಿತ್ತು. ಈ ಸಮಾರಂಭವನ್ನು ಸ್ಮರಣೀಯಗೊಳಿಸುವುದು ಅವರ ಉದ್ದೇಶವಾಗಿತ್ತು. ಹೀಗಾಗಿ ಮದುವಣಗಿತ್ತಿಯ ಉಡುಗೆಯಲ್ಲೇ ಅಂಗಳಕ್ಕಿಳಿದ ಸಂಜಿದಾ ಬ್ಯಾಟಿಂಗ್ ಶೈಲಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡರು.
ಈ ಚಿತ್ರ ಐಸಿಸಿಯ ವೆಬ್ಸೈಟ್ನಲ್ಲೂ ಹರಿದಾಡಿದೆ. “ಡ್ರೆಸ್, ಜ್ಯುವೆಲ್ಲರಿ, ಕ್ರಿಕೆಟರ್ ಬ್ಯಾಟ್’ ಎಂದು ಐಸಿಸಿ ಈ ಚಿತ್ರಕ್ಕೆ ಅಡಿಬರಹ ನೀಡಿದೆ!
ಸಂಜಿದಾ ಇಸ್ಲಾಮ್ ಬಾಂಗ್ಲಾ ಪರ 16 ಏಕದಿನ, 54 ಟಿ20 ಪಂದ್ಯ ಗಳನ್ನಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.