ಕೆನಡಾವನ್ನು ಕೆಡವಿದ ಬಾಂಗ್ಲಾ
Team Udayavani, Jan 16, 2018, 12:03 PM IST
ಲಿಂಕನ್: ಅಂಡರ್-19 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ “ಸಿ’ ವಿಭಾಗದ ಪಂದ್ಯದಲ್ಲಿ ಬಾಂಗ್ಲಾದೇಶ 2ನೇ ಜಯ ಸಾಧಿಸಿದೆ. ಸೋಮವಾರದ ಪಂದ್ಯದಲ್ಲಿ ಬಾಂಗ್ಲಾ ತಂಡ ಕೆನಡಾವನ್ನು 66 ರನ್ನುಗಳಿಂದ ಕೆಡವಿತು.
ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ತೌಹಿದ್ ಹೃದಯ್ ಅವರ ಆಕರ್ಷಕ 122 ರನ್ ಸಾಹಸದಿಂದ 8 ವಿಕೆಟಿಗೆ 264 ರನ್ ಪೇರಿಸಿತು. ಜವಾಬಿತ್ತ ಕೆನಡಾ 49.3 ಓವರ್‌ಗಳಲ್ಲಿ 198 ರನ್ನಿಗೆ ಕುಸಿಯಿತು. ಈ ಕೂಟದಲ್ಲಿ ಈ ವರೆಗೆ 2 ಪಂದ್ಯವಾಡಿದ ಹಾಗೂ ಎರಡರಲ್ಲೂ ಗೆಲುವು ಕಂಡ ಏಕೈಕ ತಂಡವೆಂಬ ಹೆಗ್ಗಳಿಕೆ ಬಾಂಗ್ಲಾದೇಶದ್ದು.
ಆರಂಭಕಾರ ಪಿನಾಕ್ ಘೋಷ್ ಅವರನ್ನು ಶೂನ್ಯಕ್ಕೆ ಕಳೆದುಕೊಂಡ ಬಳಿಕ ಮೊಹಮ್ಮದ್ ನೈಮ್, ತೌಹಿದ್ ಹೃದಯ್ ಮತ್ತು ಆಫಿಫ್ ಹುಸೇನ್ ಸೇರಿಕೊಂಡು ತಂಡವನ್ನು ಆಧರಿಸಿದರು. ಇವರಲ್ಲಿ ತೌಹಿದ್ 126 ಎಸೆತಗಳಿಂದ 122 ರನ್ ಬಾರಿಸಿದರೆ (9 ಬೌಂಡರಿ, 1 ಸಿಕ್ಸರ್), ನೈಮ್ 47 ರನ್ ಹಾಗೂ ಆಫಿಫ್ 50 ರನ್ ಕೊಡುಗೆ ಸಲ್ಲಿಸಿದರು. ಕೆನಡಾದ ಮಧ್ಯಮ ವೇಗಿ ಫೈಸಲ್ ಜಮಖಂಡಿ 5 ವಿಕೆಟ್ ಉಡಾಯಿಸಿದ್ದು ವಿಶೇಷ.
ಕೆನಡಾ ಪರ ನಾಯಕ ಅಸ್ಲಾìನ್ ಖಾನ್ ವನ್‌ಡೌನ್‌ನಲ್ಲಿ ಬಂದು 63 ರನ್ ಬಾರಿಸಿದರು. ಬೌಲಿಂಗಿನಲ್ಲೂ ಮಿಂಚಿದ ಆಫಿಫ್ ಹುಸೇನ್ 5 ವಿಕೆಟ್ ಹಾರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.