Bangladesh: ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ತಮೀಮ್‌ ಇಕ್ಬಾಲ್

Team Udayavani, Jan 11, 2025, 11:05 AM IST

Bangladesh: Tamim Iqbal bids farewell to international cricket

ಢಾಕಾ: ಬಾಂಗ್ಲಾದೇಶದ ಹಿರಿಯ ಆಟಗಾರ, ಮಾಜಿ ನಾಯಕ ತಮೀಮ್‌ ಇಕ್ಬಾಲ್‌ (Tamim Iqbal) ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ್ದಾರೆ. ಶುಕ್ರವಾರ (ಜ.10) ತಮೀಮ್‌ ಇಕ್ಬಾಲ್‌ ಅವರು ಈ ಘೋಷಣೆ ಮಾಡಿದ್ದಾರೆ.

ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಬಾಂಗ್ಲಾದೇಶ ತಂಡವನ್ನು ಸಿದ್ಧಪಡಿಸುತ್ತಿರುವ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಎಡಗೈ ಬ್ಯಾಟ್ಸ್‌ಮನ್ ಇಕ್ಬಾಲ್ ಇತ್ತೀಚೆಗೆ ಭೇಟಿಯಾದರು. ಬಳಿಕ ತನ್ನ ನಿರ್ಧಾರ ಕೈಗೊಂಡಿದ್ದಾರೆ.

“ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ ನಿಂದ ಬಹಳ ಸಮಯದಿಂದ ದೂರವಿದ್ದೇನೆ. ಆ ಅಂತರವು ಇನ್ನು ಕಡಿಮೆಯಾಗುವುದಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ನನ್ನ ಅಧ್ಯಾಯ ಮುಗಿದಿದೆ” ಎಂದು ತಮೀಮ್ ಶುಕ್ರವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

“ನಾನು ಸ್ವಲ್ಪ ಸಮಯದಿಂದ ಇದರ ಬಗ್ಗೆ ಯೋಚಿಸುತ್ತಿದ್ದೇನೆ. ಚಾಂಪಿಯನ್ಸ್ ಟ್ರೋಫಿ ಮುಂಬರುವ ಕಾರಣ, ನನ್ನ ಬಗ್ಗೆ ಚರ್ಚೆಗಳು ತಂಡದ ಗಮನವನ್ನು ಅಡ್ಡಿಪಡಿಸಬಾರದು ಎಂದು ನಾನು ಬಯಸುತ್ತೇನೆ. ಈ ಕಾರಣಕ್ಕಾಗಿ ನಾನು ಬಹಳ ಹಿಂದೆಯೇ ರಾಷ್ಟ್ರೀಯ ಒಪ್ಪಂದದಿಂದ ದೂರ ಸರಿದಿದ್ದೇನೆ. ಆದರೆ ಮಾಧ್ಯಮಗಳು ಕೆಲವೊಮ್ಮೆ ಬೇರೆ ರೀತಿಯಲ್ಲಿ ಸೂಚಿಸುತ್ತಿದ್ದವು” ಎಂದು ಅವರು ಹೇಳಿದರು.

“ನಾಯಕ ನಜ್ಮುಲ್ ಹೊಸೇನ್ ಅವರು ನಾನು ಹಿಂತಿರುಗಲು ಪ್ರಾಮಾಣಿಕವಾಗಿ ವಿನಂತಿಸಿಕೊಂಡರು. ಆದರೆ ನಾನು ಆಯ್ಕೆ ಸಮಿತಿಯೊಂದಿಗೆ ಮಾತನಾಡಿದೆ. ನಾನು ಇನ್ನೂ ಸಮರ್ಥನೆಂದು ಅವರು ನಂಬಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ, ಆದರೆ ನಾನು ನನ್ನ ಹೃದಯದ ಮಾತನ್ನು ಕೇಳಿ ಮುಂದುವರಿಸಿದ್ದೇನೆ” ಎಂದು ತಮೀಮ್ ಹೇಳಿದರು.‌

ತಮೀಮ್‌ ಇಕ್ಬಾಲ್‌ ಕಳೆದ ವರ್ಷ ವಿದಾಯ ಹೇಳಿದ್ದರು. ಆದರೆ ಬಳಿಕ ಆಗಿನ ಪ್ರಧಾನಿ ಶೇಖ್‌ ಹಸೀನಾ ಮನವೊಲಿಕೆ ಬಳಿಕ ನಿವೃತ್ತಿಯನ್ನು ಹಿಂಪಡೆದಿದ್ದರು.

ತಮೀಮ್‌ ಇಕ್ಬಾಲ್‌ ಅವರು 70 ಟೆಸ್ಟ್‌ ಪಂದ್ಯವಾಡಿದ್ದು, 38.89ರ ಸರಾಸರಿಯಲ್ಲಿ 5,134 ರನ್‌ ಗಳಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ ನಲ್ಲಿ 10 ಶತಕ ಬಾರಿಸಿದ್ದು, 31 ಅರ್ಧಶತಕ ಗಳಿಸಿದ್ದಾರೆ.

243 ಏಕದಿನ ಪಂದ್ಯವಾಡಿರುವ ಇಕ್ಬಾಲ್‌ 8,357 ರನ್‌ ಗಳಿಸಿದ್ದಾರೆ. 78 ಟಿ20 ಪಂದ್ಯವಾಡಿರುವ ಅವರು 1758 ರನ್‌ ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ ನಲ್ಲಿ 14 ಶತಕ ಮತ್ತು ಟಿ20ಯಲ್ಲಿ ಒಂದು ಶತಕ ಬಾರಿಸಿದ್ದಾರೆ.

ಟಾಪ್ ನ್ಯೂಸ್

Cap-Brijesh-Chowta

ಗಂಜಿಮಠ ಪ್ಲಾಸ್ಟಿಕ್ ಪಾರ್ಕ್: ವಿವಾದಿತ ಭೂಮಿ ಕೈಬಿಟ್ಟು ಪರಿಷ್ಕೃತ ಯೋಜನೆ ರೂಪಿಸಿ: ಸಂಸದ

Kambala-Mud

Mudubidire: ಕಡಲಕೆರೆ ಕೋಟಿ ಚೆನ್ನಯ ಜೋಡುಕೆರೆ ಕಂಬಳಕ್ಕೆ ಚಾಲನೆ

1-gl

Mysuru; ‘ಗೃಹಲಕ್ಷ್ಮಿ’ಯಿಂದ ಶೌಚಗೃಹ ನಿರ್ಮಿಸಿದ ಮಹಿಳೆ!

1-ashwi

Sports Padma Awards ; ಶ್ರೀಜೇಶ್‌ಗೆ ಪದ್ಮಭೂಷಣ ಅಶ್ವಿ‌ನ್‌, ವಿಜಯನ್‌ಗೆ ಪದ್ಮಶ್ರೀ

Tilak-varma

IND vs ENG: ತಿಲಕ್ ವರ್ಮಾ ಹೋರಾಟದಿಂದ 2ನೇ ಟಿ-20 ಪಂದ್ಯ ಗೆದ್ದ ಭಾರತ ತಂಡ

1-deeeeeert

Ballari; ಡಾ. ಸುನೀಲ್ ಕಿಡ್ನಾಪ್ ಪ್ರಕರಣ ಸುಖಾಂತ್ಯ

1-lakshn

Belagavi; ಲಕ್ಷ್ಮೀ ಹೆಬ್ಬಾಳ್ಕರ್ ನಾಳೆ ಆಸ್ಪತ್ರೆಯಿಂದ ಬಿಡುಗಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ashwi

Sports Padma Awards ; ಶ್ರೀಜೇಶ್‌ಗೆ ಪದ್ಮಭೂಷಣ ಅಶ್ವಿ‌ನ್‌, ವಿಜಯನ್‌ಗೆ ಪದ್ಮಶ್ರೀ

Tilak-varma

IND vs ENG: ತಿಲಕ್ ವರ್ಮಾ ಹೋರಾಟದಿಂದ 2ನೇ ಟಿ-20 ಪಂದ್ಯ ಗೆದ್ದ ಭಾರತ ತಂಡ

ODI tri-series: ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಲಾಹೋರ್‌, ಕರಾಚಿಯಲ್ಲಿ ತ್ರಿಕೋನ ಸರಣಿ

ODI tri-series: ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಲಾಹೋರ್‌, ಕರಾಚಿಯಲ್ಲಿ ತ್ರಿಕೋನ ಸರಣಿ

PAK vs WI, 2nd Test : ಮೊದಲ ದಿನ 20 ವಿಕೆಟ್‌ ಪತನ

PAK vs WI, 2nd Test : ಮೊದಲ ದಿನ 20 ವಿಕೆಟ್‌ ಪತನ

ICC Under 19 Womens T20 World Cup:  ಕಿವೀಸ್‌, ಆಸೀಸ್‌, ದ. ಆಫ್ರಿಕಾ ಜಯ

ICC Under 19 Womens T20 World Cup: ಕಿವೀಸ್‌, ಆಸೀಸ್‌, ದ. ಆಫ್ರಿಕಾ ಜಯ

MUST WATCH

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

udayavani youtube

ಲಾಯರ್ ಜಗದೀಶ್ ಮೇಲೆ 40 ಜನರಿಂದ ಹ*ಲ್ಲೆ?

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

ಹೊಸ ಸೇರ್ಪಡೆ

Cap-Brijesh-Chowta

ಗಂಜಿಮಠ ಪ್ಲಾಸ್ಟಿಕ್ ಪಾರ್ಕ್: ವಿವಾದಿತ ಭೂಮಿ ಕೈಬಿಟ್ಟು ಪರಿಷ್ಕೃತ ಯೋಜನೆ ರೂಪಿಸಿ: ಸಂಸದ

Kambala-Mud

Mudubidire: ಕಡಲಕೆರೆ ಕೋಟಿ ಚೆನ್ನಯ ಜೋಡುಕೆರೆ ಕಂಬಳಕ್ಕೆ ಚಾಲನೆ

1-gl

Mysuru; ‘ಗೃಹಲಕ್ಷ್ಮಿ’ಯಿಂದ ಶೌಚಗೃಹ ನಿರ್ಮಿಸಿದ ಮಹಿಳೆ!

1-ashwi

Sports Padma Awards ; ಶ್ರೀಜೇಶ್‌ಗೆ ಪದ್ಮಭೂಷಣ ಅಶ್ವಿ‌ನ್‌, ವಿಜಯನ್‌ಗೆ ಪದ್ಮಶ್ರೀ

Tilak-varma

IND vs ENG: ತಿಲಕ್ ವರ್ಮಾ ಹೋರಾಟದಿಂದ 2ನೇ ಟಿ-20 ಪಂದ್ಯ ಗೆದ್ದ ಭಾರತ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.