ಭಾರತ-ಬಾಂಗ್ಲಾ “ಮಾಸ್ಕ್ ಮ್ಯಾಚ್?’
ವಾಯು ಮಾಲಿನ್ಯದ ನಡುವೆ ಹೊಸದಿಲ್ಲಿಯಲ್ಲಿಂದು ಮೊದಲ ಟಿ20
Team Udayavani, Nov 3, 2019, 5:46 AM IST
ಹೊಸದಿಲ್ಲಿ: ಈವರೆಗೆ ಬಾಂಗ್ಲಾ ವಿರುದ್ಧ ಟಿ20 ಪಂದ್ಯಗಳಲ್ಲಿ ಸೋಲನ್ನೇ ಕಾಣದ ಭಾರತ ರವಿವಾರ ರಾತ್ರಿ ಹೊಸದಿಲ್ಲಿಯಲ್ಲಿ ಈ ಅಜೇಯ ಅಭಿಯಾನವನ್ನು ಮುಂದುವರಿಸಿಕೊಂಡು ಹೋಗುವ ಯೋಜನೆಯೊಂದಿಗೆ ಕಣಕ್ಕಿಳಿಯಲಿದೆ. ಆದರೆ ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ತೀವ್ರಗೊಂಡಿರುವುದು ಮಾತ್ರ ತಂಡಗಳ ಹಾಗೂ ಕ್ರಿಕೆಟ್ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ. “ಗ್ಯಾಸ್ ಚೇಂಬರ್’ನಲ್ಲಿ ಕ್ರಿಕೆಟ್ ಪಂದ್ಯ ನಡೆಸುತ್ತಿರುವುದಕ್ಕೆ ಅನೇಕರ ವಿರೋಧವೂ ವ್ಯಕ್ತವಾಗಿದೆ. ಆಟಗಾರ ರಲ್ಲದಿದ್ದರೂ ವೀಕ್ಷಕರು ಮಾಸ್ಕ್ ಧರಿಸಿ ಆಗಮಿಸುವುದು ಖಂಡಿತ!
ಫಿರೋಜ್ ಶಾ ಕೋಟ್ಲಾ ಸ್ಟೇಡಿಯಂ “ಅರುಣ್ ಜೇಟ್ಲಿ ಸ್ಟೇಡಿಯಂ’ ಆಗಿ ಪರಿವರ್ತನೆಗೊಂಡ ಬಳಿಕ ಇಲ್ಲಿ ನಡೆಯುವ ಮೊದಲ ಅಂತಾರಾಷ್ಟ್ರೀಯ ಪಂದ್ಯವೆಂಬುದು ಇಲ್ಲಿನ ವಿಶೇಷ. ಇದಕ್ಕೆ ಮಾಲಿನ್ಯದ ರೂಪದಲ್ಲಿ ಆರಂಭದಲ್ಲೇ ವಿಘ್ನ ಎದುರಾಗಿರುವುದೊಂದು ವಿಪರ್ಯಾಸ!
ಸವಾಲಿನ ಸರಣಿ
ವಾಯು ಮಾಲಿನ್ಯವನ್ನು ಬದಿಗಿಟ್ಟು ನೋಡುವುದಾದರೆ, ಇದು ಭಾರತದ ಯುವ ಪಡೆಗೆ ಸವಾಲಾಗಲಿರುವ ಮಹತ್ವದ ಸರಣಿ. ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿದ್ದಾರೆ. ರೋಹಿತ್ ಶರ್ಮ ಸಾರಥ್ಯ ವಹಿಸಿದ್ದಾರೆ. ಶಿಖರ್ ಧವನ್, ಕೆ.ಎಲ್. ರಾಹುಲ್ ಹೊರತುಪಡಿಸಿದರೆ ಅನುಭವಿ ಮುಖಗಳು ಗೋಚರಿಸುತ್ತಿಲ್ಲ. ಯುವ ಆಟಗಾರರದೇ ಸಿಂಹಪಾಲು. ಮುಂದಿನ ವರ್ಷದ ಟಿ20 ವಿಶ್ವಕಪ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಇವರ ಸಾಮರ್ಥ್ಯವನ್ನು ಒರೆಗೆ ಹಚ್ಚಬೇಕಿದೆ.
ಮುಂಬಯಿಯ ಆಲ್‌ರೌಂಡರ್ ಶಿವಂ ದುಬೆ ಟಿ20 ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಸಂಜು ಸ್ಯಾಮ್ಸನ್ ಮರಳಿದರೂ ಕೀಪಿಂಗ್ ಜವಾಬ್ದಾರಿ ಪಂತ್ ಪಾಲಾಗುವುದರಲ್ಲಿ ಅನುಮಾನವಿಲ್ಲ. ವಿಜಯ್ ಹಜಾರೆ ಸರಣಿಯಲ್ಲಿ ದ್ವಿಶತಕ ಬಾರಿಸಿದ ಸ್ಯಾಮ್ಸನ್ ಅವರನ್ನು ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಆಗಿ ಪರಿಗಣಿಸುವ ಯೋಜನೆಯೂ ಇದೆ. ಆಗ ರಾಹುಲ್ ಸ್ಥಾನಕ್ಕೆ ಸಂಚಕಾರ ಬರಲೂಬಹುದು. ಇಲ್ಲವೇ ಮನೀಷ್ ಪಾಂಡೆ ಹೊರಗುಳಿದಾರು.
ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್, ಕೆಳ ಸರದಿಯಲ್ಲಿ ಆಲ್‌ರೌಂಡರ್‌ಗಳಾದ ಕೃಣಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ಜವಾಬ್ದಾರಿ ಹೊರಬೇಕಿದೆ. ಬೌಲಿಂಗ್ ವಿಭಾಗದಲ್ಲಿ ಸಾಕಷ್ಟು ಆಯ್ಕೆಗಳಿವೆ.
ಶಕಿಬ್ ಇಲ್ಲದ ಬಾಂಗ್ಲಾ
ಇನ್ನೇನು ಬಾಂಗ್ಲಾ ತಂಡ ಭಾರತಕ್ಕೆ ಹೊರಡಬೇಕೆನ್ನು ವಾಗಲೇ ಆಲ್‌ರೌಂಡರ್ ಶಕಿಬ್ ಅಲ್ ಹಸನ್ ಐಸಿಸಿ ಯಿಂದ ನಿಷೇಧಕ್ಕೊಳಗಾದ ಆಘಾತಕಾರಿ ವಿದ್ಯಮಾನಕ್ಕೆ ಕ್ರಿಕೆಟ್ ಜಗತ್ತು ಸಾಕ್ಷಿಯಾಯಿತು. ಇದು ಬಾಂಗ್ಲಾ ತಂಡದ ಸಾಮರ್ಥ್ಯದ ಜತೆಗೆ ಮಾನಸಿಕ ಬಲವನ್ನೂ ಕುಗ್ಗಿಸಿದೆ. ಅನುಭವಿ ತಮಿಮ್ ಇಕ್ಬಾಲ್ ಸೇವೆ ಕೂಡ ಲಭಿಸುತ್ತಿಲ್ಲ. ಮುಶ್ಫಿಕರ್ ರಹೀಂ, ಲಿಟನ್ ದಾಸ್, ಸೌಮ್ಯ ಸರ್ಕಾರ್ ಮೇಲೆ ಬಾಂಗ್ಲಾ ಹೆಚ್ಚಿನ ನಿರೀಕ್ಷೆ ಇರಿಸಿದೆ.
ಬಾಂಗ್ಲಾ ವಿರುದ್ಧ ಭಾರತ ಅಜೇಯ
ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬಾಂಗ್ಲಾ ವಿರುದ್ಧ ಆಡಿದ ಎಲ್ಲ 8 ಪಂದ್ಯಗಳಲ್ಲೂ ಭಾರತ ಗೆಲುವು ಸಾಧಿಸಿರುವುದು ವಿಶೇಷ. ಈ ಫಲಿತಾಂಶಗಳ ಯಾದಿ ಇಲ್ಲಿದೆ.
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ (ನಾಯಕ), ಶಿಖರ್ ಧವನ್, ಸಂಜು ಸ್ಯಾಮ್ಸನ್/ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಶಿವಂ ದುಬೆ, ಕೃಣಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್/ ರಾಹುಲ್ ಚಹರ್, ದೀಪಕ್ ಚಹರ್, ಶಾದೂìಲ್ ಠಾಕೂರ್/ಖಲೀಲ್ ಅಹ್ಮದ್.
ಬಾಂಗ್ಲಾದೇಶ: ಲಿಟನ್ ದಾಸ್, ಸೌಮ್ಯ ಸರ್ಕಾರ್, ಮೊಹಮ್ಮದ್ ನೈಮ್/ಮೊಹಮ್ಮದ್ ಮಿಥುನ್, ಮುಶ್ಫಿಕರ್ ರಹೀಂ, ಮಹಮದುಲ್ಲ (ನಾಯಕ), ಮೊಸದೆಕ್ ಹೊಸೈನ್, ಅಫಿಫ್ ಹೊಸೈನ್, ಅರಾಫತ್ ಸನ್ನಿ, ಮುಸ್ತಫಿಜುರ್ ರಹಮಾನ್, ಅಲ್ ಅಮೀನ್ ಹೊಸೈನ್, ಅಬು ಹೈದರ್/ತೈಜುಲ್ ಇಸ್ಲಾಮ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.