ಮೊಮಿನುಲ್ 175; ಬಾಂಗ್ಲಾ ಭಾರೀ ಮೊತ್ತ
Team Udayavani, Feb 1, 2018, 6:25 AM IST
ಚಿತ್ತಗಾಂಗ್: ಶ್ರೀಲಂಕಾ ವಿರುದ್ಧ ಚಿತ್ತಗಾಂಗ್ನಲ್ಲಿ ಬುಧವಾರ ಮೊದಲ್ಗೊಂಡ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ಭಾರೀ ಮೊತ್ತದತ್ತ ಮುನ್ನುಗ್ಗಿದೆ. ವನ್ಡೌನ್ ಬ್ಯಾಟ್ಸ್ಮನ್ ಮೊಮಿನುಲ್ ಹಕ್ ಅವರ ಪ್ರಚಂಡ ಬ್ಯಾಟಿಂಗ್ ಸಾಹಸದಿಂದ 4 ವಿಕೆಟ್ ನಷ್ಟಕ್ಕೆ 374 ರನ್ ರಾಶಿ ಹಾಕಿದೆ.
ಎಡಗೈ ಬ್ಯಾಟ್ಸ್ಮನ್ ಮೊಮಿನುಲ್ ಹಕ್ 175 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದು ಅವರ 5ನೇ ಶತಕವಾಗಿದ್ದು, ಜೀವನಶ್ರೇಷ್ಠ ಗಳಿಕೆಗಿಂತ ಕೇವಲ 6 ರನ್ ಹಿಂದಿದ್ದಾರೆ. ಈ 175 ರನ್ ಕೇವಲ 203 ಎಸೆತಗಳಿಂದ ದಾಖಲಾಗಿದೆ. ಬೀಸಿದ್ದು 16 ಬೌಂಡರಿ ಹಾಗೂ ಒಂದು ಸಿಕ್ಸರ್. ಮಾಜಿ ನಾಯಕ ಮುಶ್ಫಿಕರ್ ರಹೀಂ ಕೇವಲ 8 ರನ್ನಿನಿಂದ ಶತಕ ತಪ್ಪಿಸಿಕೊಳ್ಳಬೇಕಾಯಿತು (92). ಒಟ್ಟು 192 ಎಸೆತ ನಿಭಾಯಿಸಿದ ರಹೀಂ 10 ಬೌಂಡರಿ ಹೊಡೆದರು. ಮೊಮಿನುಲ್-ರಹೀಂ ಜೋಡಿಯಿಂದ 3ನೇ ವಿಕೆಟಿಗೆ 236 ರನ್ ಒಟ್ಟುಗೂಡಿತು.
ಬಾಂಗ್ಲಾ ಆರಂಭ ಕೂಡ ಉತ್ತಮ ಮಟ್ಟದಲ್ಲಿತ್ತು. ತಮಿಮ್ ಇಕ್ಬಾಲ್ (52) ಮತ್ತು ಇಮ್ರುಲ್ ಕಯೆಸ್ (40) 72 ರನ್ ಜತೆಯಾಟ ನಿಭಾಯಿಸಿದರು. ಲಿಟನ್ ದಾಸ್ ಮಾತ್ರ ಖಾತೆ ತೆರಯದೆ ನಿರ್ಗಮಿಸಿದರು. ರಹೀಂ ಮತ್ತು ದಾಸ್ ಅವರನ್ನು ಸುರಂಗ ಲಕ್ಮಲ್ ಸತತ ಎಸೆತಗಳಲ್ಲಿ ಕೆಡವಿದರು. ಆಗ ದಿನದಾಟದ ಮುಕ್ತಾಯಕ್ಕೆ ಕೇವಲ 6 ಓವರ್ ಬಾಕಿ ಇತ್ತು. ಮೊಮಿನುಲ್ ಹಕ್ ಜತೆಗೆ 9 ರನ್ ಮಾಡಿರುವ ನಾಯಕ ಮಹಮದುಲ್ಲ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.