ಬಾಂಗ್ಲಾದೇಶಕ್ಕೆ ಏಕದಿನ ಸರಣಿ
Team Udayavani, Dec 15, 2018, 12:17 PM IST
ಸಿಲ್ಹೆಟ್: ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಅಂತಿಮ ಏಕದಿನ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದ ಬಾಂಗ್ಲಾ ದೇಶ 2-1ರಿಂದ ಸರಣಿ ವಶಪಡಿಸಿಕೊಂಡಿದೆ.
ಶುಕ್ರವಾರ ನಡೆದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ಶೈ ಹೋಪ್ ಅವರ 108 ರನ್ನುಗಳ ಹೊರತಾಗಿಯೂ ಗಳಿಸಿದ್ದು 9ಕ್ಕೆ 198 ರನ್ ಮಾತ್ರ. ಜವಾಬಿತ್ತ ಬಾಂಗ್ಲಾದೇಶ 38.3 ಓವರ್‌ಗಳಲ್ಲಿ 2 ವಿಕೆಟಿಗೆ 202 ರನ್ ಪೇರಿಸಿ ಗೆದ್ದು ಬಂದಿತು. ತಮಿಮ್ ಇಕ್ಬಾಲ್ ಅಜೇಯ 81 ರನ್ (104 ಎಸೆತ, 9 ಬೌಂಡರಿ) ಹಾಗೂ ಸೌಮ್ಯ ಸರ್ಕಾರ್ 80 ರನ್ (81 ಎಸೆತ, 5 ಬೌಂಡರಿ, 5 ಸಿಕ್ಸರ್) ಬಾರಿಸಿ ಬಾಂಗ್ಲಾ ಗೆಲುವನ್ನು ಸುಲಭಗೊಳಿಸಿದರು.
ಇನ್ನಿಂಗ್ಸ್ ಆರಂಭಿಸಿದ ಶೈ ಹೋಪ್ ವಿಕೆಟ್ ಪತನಗಳಿಗೆಲ್ಲ ಸಾಕ್ಷಿಯಾಗುತ್ತ ನಿಂತು ಅಜೇಯ 108 ರನ್ ಹೊಡೆದರು (131 ಎಸೆತ, 9 ಬೌಂಡರಿ, 1 ಸಿಕ್ಸರ್). ಇದು ಪ್ರಸಕ್ತ ಸರಣಿಯಲ್ಲಿ ಹೋಪ್ ಬಾರಿಸಿದ ಸತತ 2ನೇ ಶತಕ. ದ್ವಿತೀಯ ಪಂದ್ಯದಲ್ಲಿ ಅವರು ಅಜೇಯ 146 ರನ್ ಸಿಡಿಸಿದ್ದರು. ಈ ಸಾಧನೆಗಾಗಿ ಅವರಿಗೆ ಸರಣಿಶ್ರೇಷ್ಠ ಪ್ರಶಸ್ತಿ ಒಲಿಯಿತು. 29 ರನ್ನಿಗೆ 4 ವಿಕೆಟ್ ಕಿತ್ತು ಕೆರಿಬಿಯನ್ನರನ್ನು ಕಾಡಿದ ಮೆಹೆದಿ ಹಸನ್ ಮಿರಾಜ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.