ಮುಷ್ತಾಕ್ ಅಲಿ: ಸೋಲಂಕಿ ಸಾಹಸ; ಬರೋಡ ಸೆಮಿ ಪ್ರವೇಶ
Team Udayavani, Jan 28, 2021, 7:10 AM IST
ಅಹ್ಮದಾಬಾದ್: ಅತ್ಯಂತ ರೋಚಕ ಹಣಾಹಣಿಯಲ್ಲಿ ಹರ್ಯಾಣವನ್ನು 8 ವಿಕೆಟ್‌ಗಳಿಂದ ಮಣಿಸಿದ ಆತಿಥೇಯ ಬರೋಡ “ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ’ ಟಿ20 ಪಂದ್ಯಾವಳಿಯ ಸೆಮಿಫೈನಲ್‌ಗೆ ಲಗ್ಗೆ ಇರಿಸಿದೆ.
ಬುಧವಾರ ನಡೆದ 3ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಹರ್ಯಾಣ 7 ವಿಕೆಟಿಗೆ 148 ರನ್ ಗಳಿಸಿತು. ಜವಾಬಿತ್ತ ಬರೋಡ ಭರ್ತಿ 20 ಓವರ್‌ಗಳಲ್ಲಿ 2 ವಿಕೆಟಿಗೆ 150 ರನ್ ಬಾರಿಸಿ ಅಮೋಘ ಗೆಲುವು ಒಲಿಸಿಕೊಂಡಿತು.
ವಿಕೆಟ್ ಉಳಿಸಿಕೊಂಡರೂ ಬರೋಡದ ರನ್‌ಗತಿ ತೀರಾ ಕಳಪೆಯಾಗಿತ್ತು. ಅಂತಿಮ ಓವರಿನಲ್ಲಿ 18 ರನ್, ಕೊನೆಯ 3 ಎಸೆತಗಳಲ್ಲಿ 15 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತು. ಆದರೂ ಇದನ್ನು ಮೆಟ್ಟಿ ನಿಂತಿತು. ವಿಷ್ಣು ಸೋಲಂಕಿ ಗೆಲುವಿನ ಹೀರೋ ಆಗಿ ಮೂಡಿಬಂದರು.
ಸೋಲನ್ನು ಮೆಟ್ಟಿ ನಿಂತ ಸೋಲಂಕಿ :
ಸುಮಿತ್ ಕುಮಾರ್ ಅಂತಿಮ ಓವರ್ ಎಸೆಯಲು ಬಂದಾಗ ಬರೋಡ ಗೆಲುವಿಗೆ ಬರೋಬ್ಬರಿ 18 ರನ್ ಅಗತ್ಯವಿತ್ತು. ಮೊದಲ 3 ಎಸೆತಗಳಲ್ಲಿ ಬಂದದ್ದು 3 ಸಿಂಗಲ್ಸ್ ಮಾತ್ರ. ಹರ್ಯಾಣ ಗೆಲುವಿನ ಲೋಕದಲ್ಲಿ ವಿಹರಿಸುತ್ತಿತ್ತು. ಆದರೆ ವನ್‌ಡೌನ್ ಬ್ಯಾಟ್ಸ್‌ಮನ್ ವಿಷ್ಣು ಸೋಲಂಕಿ ಮಾತ್ರ ಸೋಲನ್ನು ಸಹಿಸಲು ಸಿದ್ಧರಿರಲಿಲ್ಲ. ಅಂತಿಮ 3 ಎಸೆತಗಳನ್ನು ಕ್ರಮವಾಗಿ ಸಿಕ್ಸರ್, ಫೋರ್, ಸಿಕ್ಸರ್‌ಗೆ ಬಡಿದಟ್ಟಿ ಟಿ20 ಇತಿಹಾಸದ ಅಮೋಘ ಗೆಲುವಿಗೆ ಕಾರಣರಾದರು. ಸೋಲಂಕಿ ಕೊಡುಗೆ ಅಜೇಯ 71 ರನ್ (46 ಎಸೆತ, 4 ಬೌಂಡರಿ, 5 ಸಿಕ್ಸರ್).
ತಮಿಳುನಾಡಿಗೆ ಸುಲಭ ಜಯ :
ಮಂಗಳವಾರ ರಾತ್ರಿ ನಡೆದ ದ್ವಿತೀಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡ ಹಿಮಾಚಲ ಪ್ರದೇಶವನ್ನು 5 ವಿಕೆಟ್‌ಗಳಿಂದ ಸುಲಭದಲ್ಲಿ ಮಣಿಸಿತು. ಹಿಮಾಚಲ ಪ್ರದೇಶ 9ಕ್ಕೆ 135 ರನ್ ಗಳಿಸಿದರೆ, ತಮಿಳುನಾಡು 17.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 141 ರನ್ ಬಾರಿಸಿ ಸೆಮಿಫೈನಲ್ ತಲುಪಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.