ಮುಂಬೈ-ಪುಣೆ ನಡುವೆ ಪ್ರಶಸ್ತಿ ಕದನ, ನಾಳೆ ಫೈನಲ್ ಪಂದ್ಯ
Team Udayavani, May 20, 2017, 10:35 AM IST
ಬೆಂಗಳೂರು: ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಪೂರ್ಣ ವಿಫಲವಾದ ಕೋಲ್ಕತಾ ನೈಟ್ ರೈಡರ್ಸ್ ತಂಡ ಕೈಯಾರೆ
ಮುಂಬೈ ತಂಡವನ್ನು ಫೈನಲ್‌ಗೆ ಕಳುಹಿಸಿದಂತಾಗಿದೆ. ಇಲ್ಲಿ ನಡೆದ ಕ್ವಾಲಿಫೈಯರ್ 2ನೇ ಪಂದ್ಯದಲ್ಲಿ ಮುಂಬೈ ವಿರುದ್ಧ
ಅದು 6 ವಿಕೆಟ್‌ಗಳಿಂದ ಸೋಲನ್ನಪ್ಪಿದೆ. ಇದರೊಂದಗೆ 1ನೇ ಕ್ವಾಲಿಫೈಯರ್‌ನಲ್ಲಿ ಎದುರಾದ ಮುಂಬೈ-ಪುಣೆಯೇ
ಅಂತಿಮ ಪಂದ್ಯದಲ್ಲಿ ಕಾದಾಡುವಂತಹ ಸನ್ನಿವೇಶ ನಿರ್ಮಾಣಗೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ 18.5 ಓವರ್‌ಗಳಲ್ಲಿ 107 ರನ್‌ಗೆ ಆಲೌಟಾಯಿತು. ಇದನ್ನು ಬೆನ್ನತ್ತಿದ
ಮುಂಬೈ 14.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 111 ರನ್ ಗಳಿಸಿತು.
ಮುಂಬೈ ಜಬರ್ದಸ್ತ್ ಇನಿಂಗ್ಸ್: ಸುಲಭ ಗುರಿ ಮುಂದಿಟ್ಟುಕೊಂಡು ಬ್ಯಾಟಿಂಗ್ ಆರಂಭ ಮಾಡಿದ ಮುಂಬೈ 34 ರನ್‌ಗೆ 3 ವಿಕೆಟ್ ಕಳೆದುಕೊಂಡು ಅಲ್ಪ ಆತಂಕಕ್ಕೆ ಸಿಲುಕಿತ್ತು. ಆಗ ಜೊತೆಯಾದ ನಾಯಕ ರೋಹಿತ್ ಶರ್ಮ ಮತ್ತು ಕೃಣಾಲ್ ಪಂದ್ಯದ ದಿಕ್ಕನ್ನೇ ಬದಲಿಸಿದರು. ಇಬ್ಬರೂ 4ನೇ ವಿಕೆಟ್‌ಗೆ 54 ರನ್ ಜತೆಯಾಟವಾಡಿ ಪರಿಸ್ಥಿತಿಯನ್ನು ಮುಂಬೈ
ಪರ ಬದಲಾಯಿಸಿದರು. ನಂತರ ರೋಹಿತ್ ಔಟಾದರೂ ಅದರಿಂದ ಮುಂಬೈ ಗೆಲುವಿನ ಮೇಲೆ ಪರಿಣಾಮ ಬೀರಲಿಲ್ಲ.
ಅದು ಇನ್ನೂ 33 ಎಸೆತ ಬಾಕಿಯಿರುವಂತೆಯೇ ಜಯ ಸಾಧಿಸಿತು.
ಕೋಲ್ಕತಾ ಕಳಪೆ ಆಟ: ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ಪರ ಬ್ಯಾಟ್ಸ್‌ಮನ್‌ಗಳು ಕಚ್ಚಿಕೊಂಡು ಆಡುವ
ಯತ್ನ ಮಾಡಲಿಲ್ಲ. ಆರಂಭಿಕರಾದ ಕ್ರಿಸ್ ಲಿನ್, ಸುನಿಲ್ ನಾರಾಯಣ್, ನಾಯಕ ಗಂಭೀರ್, ರಾಬಿನ್ ಉತ್ತಪ್ಪ ಎಲ್ಲರೂ ಕಡಿಮೆ ಮೊತ್ತಕ್ಕೆ ಉರುಳಿಕೊಂಡರು. ಇದ್ದಿದ್ದರಲ್ಲಿ ಸೂರ್ಯಕುಮಾರ್ ಯಾದವ್-ಇಶಾಂಕ್ ಜಗ್ಗಿ ಕೋಲ್ಕತಾ ದಾಳಿ
ಎದುರಿಸಿ ನಿಂತರು.
ಮುಂಬೈನ ಕರ್ಣ ಶರ್ಮ, ಜಸ್‌ಪ್ರೀತ್ ಬುಮ್ರಾ ಮತ್ತು ಮಿಚೆಲ್ ಜಾನ್ಸನ್ ಅವರ ಬಿಗು ದಾಳಿಗೆ ಕೆಕೆಆರ್ ತತ್ತರಿಸಿತು.
ಇಶಾಂಕ್-ಸೂರ್ಯಕುಮಾರ್ ಯಾದವ್ ಆರನೇ ವಿಕೆಟಿಗೆ 56 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡ ಕಾರಣ ಕೆಕೆಆರ್‌ನ ಮೊತ್ತ ನೂರರ ಗಡಿ ದಾಟುವಂತಾಯಿತು. 31 ರನ್ ಗಳಿಸಿ ಸೂರ್ಯಕುಮಾರ್ ಯಾದವ್ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಜಗ್ಗಿ 31 ಎಸೆತಗಳಿಂದ 28 ರನ್ ಹೊಡೆದರು. ಇವರಿಬ್ಬರನ್ನು ಬಿಟ್ಟರೆ ಸುನೀಲ್ ನಾರಾಯಣ್ ಮತ್ತು ನಾಯಕ ಗೌತಮ್ ಗಂಭೀರ್ ಮಾತ್ರ ಎರಡಂಕೆಯ ಮೊತ್ತ ಗಳಿಸಿದರು. ಬೆಂಗಳೂರಿನಲ್ಲಿಯೇ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಮಳೆಯ ಲಾಭ ಪಡೆದಿದ್ದ ಕೆಕೆಆರ್ ಇಲ್ಲಿ ವಿಫಲವಾಯಿತು.
ಭಜ್ಜಿ ಜಾಗಕ್ಕೆ ಆಯ್ಕೆಯಾಗಿ ಪಂದ್ಯ ಗೆಲ್ಲಿಸಿದ ಕರ್ಣ ಶರ್ಮ
ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರನ್ನು ಮುಂಬೈ ಇಂಡಿಯನ್ಸ್ ಮತ್ತೆ ಹೊರಗಿರಿಸಿತು. ಇವರ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಕರ್ಣ ಶರ್ಮ ಮಿಂಚಿದರು. 4 ಓವರ್ ಎಸೆದ ಅವರು 16 ರನ್ ಬಿಟ್ಟು ಕೊಟ್ಟು ಅಮೂಲ್ಯ 4
ವಿಕೆಟ್ ಕಬಳಿಸಿ ಕೆಕೆಆರ್ ಕೈಯಿಂದ ಗೆಲುವು ಕಸಿದರು.
ಸ್ಕೋರ್ ಪಟ್ಟಿ
ಮುಂಬೈ ಇಂಡಿಯನ್ಸ್
ಲೆಂಡ್ಲ್ ಸಿಮನ್ಸ್ ಎಲ್‌ಬಿಡಬ್ಲ್ಯು ಬಿ ಚಾವ್ಲಾ 3
ಪಾರ್ಥಿವ್ ಪಟೇಲ್ ಸಿ ಉತ್ತಪ್ಪ ಬಿ ಉಮೇಶ್ 14
ಅಂಬಾಟಿ ರಾಯುಡು ಬಿ ಚಾವ್ಲಾ 6
ರೋಹಿತ್ ಶರ್ಮ ಸಿ ರಜಪೂತ್ ಬಿ ನೈಲ್ 26
ಕೃಣಾಲ್ ಪಾಂಡ್ಯ ಔಟಾಗದೆ 45
ಕೈರನ್ ಪೋಲಾರ್ಡ್ ಔಟಾಗದೆ 9
ಇತರ: 8
ಒಟ್ಟು (14.3 ಓವರ್‌ಗಳಲ್ಲಿ 4 ವಿಕೆಟಿಗೆ) 111
ವಿಕೆಟ್ ಪತನ: 1-11, 2-24, 3-34, 4-88
ಬೌಲಿಂಗ್:
ಉಮೇಶ್ ಯಾದವ್ 2.3-0-23-1
ಪೀಯೂಷ್ ಚಾವ್ಲಾ 4-0-34-2
ನಥನ್ ಕೌಲ್ಟರ್ ನೈಲ್ 3-0-15-1
ಸುನೀಲ್ ನಾರಾಯಣ್ 4-0-21-0
ಅಂಕಿತ್ ರಜಪೂತ್ 1-0-14-0
ಪಂದ್ಯಶ್ರೇಷ್ಠ: ಕಣ್ì ಶರ್ಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.