ವಾಂಖೇಡೆಯಲ್ಲಿಂದು ಪ್ರತಿಷ್ಠೆಯ ಸಮರ: ಮುಂಬೈ ಇಂಡಿಯನ್ಸ್‌-ರಾಯಲ್‌ ಚಾಲೆಂಜರ್ ಬೆಂಗಳೂರು

ಆರ್‌ಸಿಬಿಗೆ ಬೇಕಿದೆ ತುರ್ತು ಚಿಕಿತ್ಸೆ ; ಸತತ ಎರಡನೇ ಜಯಕ್ಕೆ ಮುಂಬೈ ಪ್ರಯತ್ನ

Team Udayavani, Apr 11, 2024, 7:15 AM IST

ವಾಂಖೇಡೆಯಲ್ಲಿಂದು ಪ್ರತಿಷ್ಠೆಯ ಸಮರ: ಮುಂಬೈ ಇಂಡಿಯನ್ಸ್‌-ರಾಯಲ್‌ ಚಾಲೆಂಜರ್ ಬೆಂಗಳೂರು

ಮುಂಬಯಿ: ಸೋಲಿನ ಸುಳಿಗೆ ಸಿಲುಕಿ ಪರದಾಡುತ್ತಿರುವ ಆರ್‌ಸಿಬಿ ಹಾಗೂ ಗೆಲುವಿನ ಹಳಿ ಏರಿರುವ ಮುಂಬೈ ಇಂಡಿಯನ್ಸ್‌ ಗುರುವಾರ ಮಹತ್ವದ ಪಂದ್ಯದಲ್ಲಿ ಎದುರಾಗಲಿವೆ. ಇದು “ವಾಂಖೇಡೆ’ಯಲ್ಲಿ ನಡೆಯುವ ಪಂದ್ಯವಾದ್ದರಿಂದ, ಹಾಗೂ ಕಳೆದ ಪಂದ್ಯದಲ್ಲಿ ಇಲ್ಲಿಯೇ ಜಯದ ಖಾತೆ ತೆರೆದ ಕಾರಣ ಪಾಂಡ್ಯ ಪಡೆಯೇ ಫೇವರಿಟ್‌ ಆಗಿ ಗೋಚರಿಸುತ್ತಿದೆ.

ಸದ್ಯ ಆರ್‌ಸಿಬಿ 5 ಪಂದ್ಯಗಳಲ್ಲಿ ಒಂದನ್ನಷ್ಟೇ ಗೆದ್ದು 9ನೇ ಸ್ಥಾನದಲ್ಲಿದೆ. ಮುಂಬೈ ಕೂಡ ಗೆದ್ದಿರುವುದು ಒಂದೇ ಪಂದ್ಯ. ಆದರೆ ಆಡಿದ್ದು 4 ಪಂದ್ಯ ಮಾತ್ರ. ಡೆಲ್ಲಿಯನ್ನು ಮಣಿಸಿ ಕೊನೆಯ ಸ್ಥಾನದಿಂದ ಎಂಟಕ್ಕೇರಿದೆ.

ಪ್ರಸಕ್ತ ಋತುವಿನಲ್ಲಿ ಈ ಎರಡೂ ತಂಡಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಸಂಪೂರ್ಣ ವಿಫ‌ಲವಾಗಿವೆ. ಮುಂಬೈ ತಂಡದಲ್ಲಿ ಭಿನ್ನಾಭಿಪ್ರಾಯ ಇದೆ ಎನ್ನಬಹುದಾದರೂ, ಆರ್‌ಸಿಬಿ ಪಾಳೆಯದಲ್ಲಿ ಅಂತಹ ಒಳ ರಾಜಕೀಯವೇನೂ ಗೋಚರಿಸದು. ಆದರೆ ವಿರಾಟ್‌ ಕೊಹ್ಲಿ ಹೊರತುಪಡಿಸಿ ಉಳಿದವರ್ಯಾರೂ ತಮ್ಮ ಛಾತಿಗೆ ತಕ್ಕ ಆಟವಾಡುತ್ತಿಲ್ಲ. ಬೇರೆಲ್ಲ ಕಡೆ ಚೆನ್ನಾಗಿ ಆಡುವವರು ಆರ್‌ಸಿಬಿ ಸೇರಿದ ಬಳಿಕ ಮಂಕಾಗುತ್ತಿರುವುದು ವಿಪರ್ಯಾಸ!

ವಿದೇಶಿಗರ ವೈಫ‌ಲ್ಯ
ಒಂದೆಡೆ ವಿರಾಟ್‌ ಕೊಹ್ಲಿ ರನ್‌ ಗಳಿಸುತ್ತಿದ್ದರೂ ಉಳಿದವರ ಕೊಡುಗೆ ದೊಡ್ಡ ಶೂನ್ಯ. ಅದರಲ್ಲೂ ವಿದೇಶಿ ಕ್ರಿಕೆಟಿಗರ ಆಟ ಥರ್ಡ್‌ ಕ್ಲಾಸ್‌ ಮಟ್ಟದಲ್ಲೂ ಇಲ್ಲ. ಇದರಲ್ಲಿ ಬಿಗ್‌ ಹಿಟ್ಟಿಂಗ್‌ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ಗೆ ಅಗ್ರಸ್ಥಾನ. ಇವರು ಈವರೆಗೆ ಗಳಿಸಿದ್ದು ಬರೀ 32 ರನ್‌!

ಫಾ ಡು ಪ್ಲೆಸಿಸ್‌ ಗಳಿಕೆ 109 ರನ್‌. ಇವರ ನಾಯಕತ್ವ ಕೂಡ ಪರಿಣಾಮಕಾರಿಯಾಗಿಲ್ಲ. ಭಾರೀ ಭರವಸೆ ಇರಿಸಿದ್ದ ಕ್ಯಾಮರಾನ್‌ ಗ್ರೀನ್‌ ಕೊಡುಗೆ ಬರೀ 68 ರನ್‌.

ಇವರೆಲ್ಲ ಸೇರಿ 209 ರನ್‌ ಗಳಿಸಿದರೆ, ಕೊಹ್ಲಿ ಒಬ್ಬರೇ 316 ರನ್‌ ಬಾರಿಸಿ ಫಾರ್ಮ್ ತೆರೆದಿರಿಸಿ ದ್ದಾರೆ. ಸ್ಟ್ರೈಕ್‌ರೇಟ್‌ 146.29. ಕೇವಲ 5 ತಿಂಗಳ ಹಿಂದೆ ವಾಂಖೇಡೆಯಲ್ಲೇ ನಡೆದ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ 50ನೇ ಏಕದಿನ ಶತಕ ಬಾರಿಸಿದ್ದ ವಿರಾಟ್‌ ಕೊಹ್ಲಿ ಮೇಲೆ ಮತ್ತೊಮ್ಮೆ ಬಹು ದೊಡ್ಡ ಬ್ಯಾಟಿಂಗ್‌ ಜವಾಬ್ದಾರಿ ಬೀಳುವುದರಲ್ಲಿ ಅನುಮಾನವಿಲ್ಲ.

ಅನುಜ್‌ ರಾವತ್‌, ರಜತ್‌ ಪಾಟಿದಾರ್‌ ಕೂಡ ಸ್ಥಿರವಾದ ಬ್ಯಾಟಿಂಗ್‌ ತೋರ್ಪಡಿಸುವಲ್ಲಿ ವಿಫ‌ಲರಾಗಿದ್ದಾರೆ. ಇವರೆಲ್ಲ ಒಮ್ಮಿಂದೊಮ್ಮೆಲೇ ಸಿಡಿದು ನಿಂತು ದೊಡ್ಡ ಮೊತ್ತ ಪೇರಿಸಿದರು ಎಂದಿಟ್ಟುಕೊಂಡರೂ ಇದನ್ನು ಉಳಿಸಿ ಕೊಡಬಲ್ಲ ಬೌಲರ್‌ಗಳೇ ಆರ್‌ಸಿಬಿ ಪಾಳೆಯದಲ್ಲಿಲ್ಲ. ಎಲ್ಲರೂ ಲೆಕ್ಕದ ಭರ್ತಿ ಗೆಂಬಂತಿ ದ್ದಾರೆ. ಹಾಗೆ ಬಂದು 4 ಓವರ್‌ಗಳನ್ನು ಹಾಕಿ ಹೋಗುತ್ತಿದ್ದಾರೆ. ಇಲ್ಲಿಯೂ ವಿದೇಶೀಯರದೇ ವೈಫ‌ಲ್ಯ ಎದ್ದು ಕಾಣುತ್ತದೆ. ಅಲ್ಜಾರಿ ಜೋಸೆಫ್ ಮತ್ತು ರೀಸ್‌ ಟಾಪ್ಲಿ ರನ್‌ ನೀಡಲು ಪೈಪೋಟಿ ನೀಡುತ್ತಿದ್ದಾರೆ. ಲಾಕೀ ಫ‌ರ್ಗ್ಯುಸನ್‌ ಒಬ್ಬರು ಬಾಕಿ ಉಳಿದಿದ್ದಾರೆ.

ಮುಂಬೈ ಬ್ಯಾಟಿಂಗ್‌ ಬಲಿಷ್ಠ
ಆರ್‌ಸಿಬಿಗೆ ಹೋಲಿಸಿದರೆ ಮುಂಬೈಯ ಬ್ಯಾಟಿಂಗ್‌ ವಿಭಾಗ ಭಾರೀ ಬಲಿಷ್ಠವಾಗಿದೆ. ಡೆಲ್ಲಿ ಎದುರಿನ ಕಳೆದ ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ ಅವರ ಸೊನ್ನೆಯ ಹೊರತಾಗಿಯೂ 5ಕ್ಕೆ 234 ರನ್‌ ಪೇರಿಸಿದ್ದೇ ಇದಕ್ಕೊಂದು ಉದಾಹರಣೆ. ರೊಮಾರಿಯೋ ಶೆಫ‌ರ್ಡ್‌ ಅವರ ಸ್ಫೋಟಕ ಆಟ ಇನ್ನೂ ಕಣ್ಮುಂದಿದೆ. ರೋಹಿತ್‌ ಶರ್ಮ, ಇಶಾನ್‌ ಕಿಶನ್‌, ಹಾರ್ದಿಕ್‌ ಪಾಂಡ್ಯ, ಟಿಮ್‌ ಡೇವಿಡ್‌ ಕೂಡ ಸಿಡಿದು ನಿಂತಿದ್ದರು.ಆದರೆ ಚೇಸಿಂಗ್‌ ವೇಳೆ ಡೆಲ್ಲಿಗೆ ಸೂಕ್ತ ಕಡಿವಾಣ ಹಾಕಲಾಗದಿದ್ದುದು ಮುಂಬೈಯ ಬೌಲಿಂಗ್‌ ವೈಫ‌ಲ್ಯವನ್ನು ತೆರೆದಿಡುತ್ತದೆ. ಬೆನ್ನಟ್ಟಿ ಬಂದ ಪಂತ್‌ ಪಡೆ 8ಕ್ಕೆ 205 ರನ್‌ ಗಳಿಸಿತ್ತು. ಕೋಟಿj ಮತ್ತು ಬುಮ್ರಾ ಮಾತ್ರ ಯಶಸ್ಸು ಸಾಧಿಸಿದ್ದರು.

ಯಾವ ಪಿಚ್‌ನಲ್ಲಿ ಆಟ?
ವಾಂಖೇಡೆಯ ಯಾವ ಟ್ರ್ಯಾಕ್‌ ಮೇಲೆ ಈ ಪಂದ್ಯ ನಡೆಯಲಿದೆ ಎಂಬುದು ಕೂಡ ಮುಖ್ಯ. ಇಲ್ಲಿನ ಒಂದು ಟ್ರ್ಯಾಕ್‌ ಬೌಲರ್‌ಗಳಿಗೆ ಹೆಚ್ಚು ನೆರವು ನೀಡುತ್ತದೆ. ಉದಾಹರಣೆಗೆ ರಾಜಸ್ಥಾನ್‌ ಎದುರಿನ ಪಂದ್ಯ. ಎಪ್ರಿಲ್‌ ಒಂದರ ಈ ಮುಖಾಮುಖಿ ಯಲ್ಲಿ ಮುಂಬೈ ಕೇವಲ 125 ರನ್‌ ಮಾಡಿತ್ತು. ಇನ್ನೊಂದು ಅಪ್ಪಟ ಬ್ಯಾಟಿಂಗ್‌ ಟ್ರ್ಯಾಕ್‌. ಇನ್ನೊಂದು ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಬಳಸಲಾದ ಟ್ರ್ಯಾಕ್‌. ಇಲ್ಲಿ ಇತ್ತಂಡಗಳೂ ಇನ್ನೂರರ ಗಡಿ ದಾಟಿದ್ದವು.

ಒಟ್ಟಾರೆ ಹೇಳುವುದಾದರೆ, ಸ್ಪರ್ಧೆಯಲ್ಲಿ ಮುಂದುವರಿಯಬೇಕಾದರೆ ಇಬ್ಬರಿಗೂ ಗೆಲುವು ಮುಖ್ಯ. ಇನ್ನಿರುವುದು ಅದೃಷ್ಟದ ಆಟ.

 

ಟಾಪ್ ನ್ಯೂಸ್

Renukaswamy Case: ಬಿಡುಗಡೆಯಾಗುತ್ತಿದ್ದಂತೆ ಓಡೋಡಿ ಬಂದು ಕಾರು ಹತ್ತಿದ ಆರೋಪಿ ಲಕ್ಷ್ಮಣ್

Renukaswamy Case: ಬಿಡುಗಡೆಯಾಗುತ್ತಿದ್ದಂತೆ ಓಡೋಡಿ ಬಂದು ಕಾರು ಹತ್ತಿದ ಆರೋಪಿ ಲಕ್ಷ್ಮಣ್

Sindhanur: ಲಾರಿ ಪಲ್ಟಿ… ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್​ ಸೇರಿ ಮೂವರ ದುರ್ಮರಣ

ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್​ ಸೇರಿ ಮೂವರ ದುರ್ಮರಣ

One Nation, One Poll: ಲೋಕಸಭೆಯಲ್ಲಿ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ; ಕೈ ವಿರೋಧ

One Nation, One Poll: ಲೋಕಸಭೆಯಲ್ಲಿ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ; ಕೈ ವಿರೋಧ

Delhi: ಪ್ರಿಯಕರನ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ… ಮುಂದೆ ಆಗಿದ್ದೇ ಬೇರೆ

Delhi: ಪ್ರಿಯಕರನ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ… ಬಳಿಕ ನಡೆದದ್ದು ಘೋರ

ಭಾರತದಲ್ಲಿ ಶ್ರೀರಾಮನ ಸಂಪ್ರದಾಯ ಮುಂದುವರಿಯಲಿದೆ ವಿನಃ ಬಾಬರನದ್ದಲ್ಲ: ಸಿಎಂ ಯೋಗಿ

ಭಾರತದಲ್ಲಿ ಶ್ರೀರಾಮನ ಸಂಪ್ರದಾಯ ಮುಂದುವರಿಯಲಿದೆ ವಿನಃ ಬಾಬರನದ್ದಲ್ಲ: ಸಿಎಂ ಯೋಗಿ

Charmady: ನದಿಯಲ್ಲಿ ಗೋವುಗಳ ತಲೆ ಸೇರಿದಂತೆ ಅವಶೇಷ ಪತ್ತೆ

Charmady: ನದಿಯಲ್ಲಿ ಗೋವುಗಳ ತಲೆ ಸೇರಿದಂತೆ ಅವಶೇಷ ಪತ್ತೆ

Chhattisgarh: ಜೀವಂತ ಕೋಳಿ ಮರಿ ನುಂಗಿ ವ್ಯಕ್ತಿ ಸಾ*ವು…ಆದರೆ ಕೋಳಿ ಮರಿ ಬಚಾವ್!

Chhattisgarh: ಜೀವಂತ ಕೋಳಿ ಮರಿ ನುಂಗಿ ವ್ಯಕ್ತಿ ಸಾ*ವು…ಆದರೆ ಕೋಳಿ ಮರಿ ಬಚಾವ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqewq

T20; ವೆಸ್ಟ್‌ ಇಂಡೀಸ್‌ ಎದುರು ಬಾಂಗ್ಲಾದೇಶ ಗೆಲುವಿನ ಆರಂಭ

1-arg

T20I;ಡಬಲ್‌ ಹ್ಯಾಟ್ರಿಕ್‌ ಸಾಧನೆ ಮೆರೆದ ಆರ್ಜೆಂಟೀನಾದ ಫೆನೆಲ್‌

1-gukesh

Gukesh Dommaraju; ಚದುರಂಗ ಚಾಂಪಿಯನ್‌ ಗೆ ತವರೂರು ಚೆನ್ನೈಯಲ್ಲಿ ಭವ್ಯ ಸ್ವಾಗತ

1-mahe

MAHE;ಅ.ಭಾ.ಅಂತರ್‌ ವಿ.ವಿ. ವನಿತಾ ಟೆನಿಸ್‌: ಒಸ್ಮಾನಿಯಾ ವಿ.ವಿ. ಚಾಂಪಿಯನ್‌

1-alavas

Ball Badminton: ಆಳ್ವಾಸ್‌ಗೆ ಅವಳಿ ಪ್ರಶಸ್ತಿ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Renukaswamy Case: ಬಿಡುಗಡೆಯಾಗುತ್ತಿದ್ದಂತೆ ಓಡೋಡಿ ಬಂದು ಕಾರು ಹತ್ತಿದ ಆರೋಪಿ ಲಕ್ಷ್ಮಣ್

Renukaswamy Case: ಬಿಡುಗಡೆಯಾಗುತ್ತಿದ್ದಂತೆ ಓಡೋಡಿ ಬಂದು ಕಾರು ಹತ್ತಿದ ಆರೋಪಿ ಲಕ್ಷ್ಮಣ್

2(1

Punjalkatte: ವಾಮದಪದವು-ವೇಣೂರು ಸಂಪರ್ಕ ಇನ್ನೂ ದೂರ!

Neelavanti Movie: ಹಾರರ್‌ ನೀಲವಂತಿ

Neelavanti Movie: ಹಾರರ್‌ ನೀಲವಂತಿ

1(1

Savanur: ಸರಕಾರಿ ಶಾಲೆಯ 2 ಎಕ್ರೆ ಜಾಗ ಅಡಿಕೆ ತೋಟ

Sindhanur: ಲಾರಿ ಪಲ್ಟಿ… ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್​ ಸೇರಿ ಮೂವರ ದುರ್ಮರಣ

ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್​ ಸೇರಿ ಮೂವರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.