ಚಂಡೀಗಢ ಕ್ರಿಕೆಟಿಗೆ ಬಿಸಿಸಿಐ ಮಾನ್ಯತೆ
Team Udayavani, Jul 28, 2019, 5:42 AM IST
ಚಂಡೀಗಢ: ಚಂಡೀಗಢದ ಸತತ 40 ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದೆ. ಚಂಡೀಗಢ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಮಾನ್ಯತೆ ನೀಡಿದೆ. ಅಲ್ಲಿಗೆ ಪಂಜಾಬ್, ಹರ್ಯಾಣ, ಹಿಮಾಚಲ ಪ್ರದೇಶ ತಂಡಗಳಲ್ಲಿ ಆಡಬೇಕಾದ ಅನಿವಾರ್ಯತೆ ಹೊಂದಿದ್ದ ಚಂಡೀಗಢದ ಕ್ರಿಕೆಟಿಗರಿಗೆ ಇನ್ನು ಮುಂದೆ ವಲಸೆ ಹೋಗಬೇಕಾದ ತಾಪತ್ರಯವಿಲ್ಲ. ಅವರಿನ್ನು ತಮ್ಮದೇ ನೆಲದ ತಂಡದೊಂದಿಗೆ ಆಡಬಹುದು.
ಚಂಡೀಗಢ ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ಅದಕ್ಕೆ ಪ್ರತ್ಯೇಕ ರಾಜ್ಯ ತಂಡದ ಮಾನ್ಯತೆಯನ್ನು ಬಿಸಿಸಿಐ ನೀಡಿದೆ. ಇದರಿಂದ ರಣಜಿ ತಂಡಗಳ ಸಂಖ್ಯೆ 38ಕ್ಕೆ ಏರಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.