ಟೀಮ್ ಇಂಡಿಯಾಕ್ಕೆ ಇನ್ನು “ಎಂಪಿಎಲ್ ಕಿಟ್’
Team Udayavani, Nov 17, 2020, 9:52 PM IST
ನವದೆಹಲಿ: ಬಿಸಿಸಿಐ ತನ್ನ ನೂತನ ಕಿಟ್ ಪ್ರಾಯೊಜಕರನ್ನು ಅಧಿಕೃತವಾಗಿ ಘೋಷಿಸಿದೆ. ನೈಕ್ ಬಳಿಕ ಈ ಪ್ರಾಯೋಜಕತ್ವ ಎಂಪಿಎಲ್ ನ್ಪೋರ್ಟ್ಸ್ ಪಾಲಾಗಿದೆ. ಮೂರು ವರ್ಷಗಳ ಈ ಒಡಂಬಡಿಕೆಯನ್ನು ಬಿಸಿಸಿಐ ಮಂಗಳವಾರ ಅಧಿಕೃತವಾಗಿ ಘೋಷಿಸಿದೆ. ನವಂಬರ್ 2020ರಿಂದ 2023ರ ಡಿಸೆಂಬರ್ ವರೆಗೆ ಈ ಒಪ್ಪಂದ ಜಾರಿಯಲ್ಲಿರುತ್ತದೆ.
ನೂತನವಾಗಿ ವಿನ್ಯಾಸಗೊಳಿಸುವ ಈ ಜೆರ್ಸಿಯನ್ನು ಮುಂದಿನ ಮೂರು ವರ್ಷಗಳ ಕಾಲ ಟೀಮ್ ಇಂಡಿಯಾದ ಪುರುಷರ ತಂಡದ ಜತೆಗೆ ಮಹಿಳಾ ತಂಡ ಹಾಗೂ ಅಂಡರ್-19 ತಂಡಗಳ ಆಟಗಾರರೂ ಧರಿಸಲಿದ್ದಾರೆ.
ಹಿಂದೆ ಸರಿದ ನೈಕ್
ನೈಕ್ ಕಂಪೆನಿಯೊಂದಿಗಿನ ಟೀಮ್ ಇಂಡಿಯಾದ ಕಿಟ್ ಪ್ರಾಯೋಜಕತ್ವದ ಒಪ್ಪಂದ ಇತ್ತೀಚೆಗೆ ಕೊನೆಗೊಂಡಿತ್ತು. ಈ ಒಪ್ಪಂದವನ್ನು ಮುಂದುವರಿಸಲು ನೈಕ್ ಬಯಸಿರಲಿಲ್ಲ. ಕೊರೊನಾ ವೈರಸ್ ಕಾರಣದಿಂದಾಗಿ ನಷ್ಟವನ್ನು ತುಂಬಲು ನೈಕ್ ಈ ನಿರ್ಧಾರ ತೆಗೆದುಕೊಂಡಿತ್ತು. ಹೀಗಾಗಿ ಹೊಸ ಒಪ್ಪಂದಕ್ಕೆ ಬಿಸಿಸಿಐ ಅಹ್ವಾನ ನೀಡಿತ್ತು. ಇದೀಗ ಎಂಪಿಎಲ್ ಪಾಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka sports meet: ಈಜು ಸ್ಪರ್ಧೆ ಆರಂಭ; ದಕ್ಷಿಣ ಕನ್ನಡ ಮೇಲುಗೈ
Under-19 Women’s T20 World Cup: ವೈಷ್ಣವಿ ಹ್ಯಾಟ್ರಿಕ್, 5 ರನ್ನಿಗೆ 5 ವಿಕೆಟ್ ದಾಖಲೆ
Australia Open: 50ನೇ ಬಾರಿಗೆ ಗ್ರ್ಯಾನ್‌ಸ್ಲಾಮ್ ಸೆಮೀಸ್‌ಗೇರಿದ ಜೋಕೋ
Women’s ODI rankings: ಅಗ್ರಸ್ಥಾನಕ್ಕೆ ಮಂಧನಾ ಸನಿಹ
Rinku Singh: ತಂದೆಗೆ ಸೂಪರ್ ಬೈಕ್ ಗಿಫ್ಟ್ ನೀಡಿದ ರಿಂಕು ಸಿಂಗ್… ಬೆಲೆ ಎಷ್ಟು ಗೊತ್ತಾ?