BCCI ಪ್ರಶಸ್ತಿ ಪ್ರದಾನ : ಶಾಸ್ತ್ರಿ ,ಇಂಜಿನಿಯರ್ ಜೀವಮಾನ ಸಾಧಕರು
Team Udayavani, Jan 24, 2024, 6:00 AM IST
ಹೈದರಾಬಾದ್: ಕಳೆದ 4 ವರ್ಷಗಳಿಂದ ಬಾಕಿ ಉಳಿದಿದ್ದ ಬಿಸಿಸಿಐ ವಾರ್ಷಿಕ ಕ್ರಿಕೆಟ್ ಪ್ರಶಸ್ತಿ ಪ್ರದಾನ ಸಮಾರಂಭ ಮಂಗಳವಾರ ಏಕಕಾಲದಲ್ಲಿ ಹೈದರಾಬಾದ್‌ನಲ್ಲಿ ನಡೆಯಿತು. ಭಾರತ ಮತ್ತು ಇಂಗ್ಲೆಂಡ್ ತಂಡಗಳ ಆಟಗಾರರು ಇದಕ್ಕೆ ಸಾಕ್ಷಿಯಾದರು.
ಫಾರುಖ್ ಇಂಜಿನಿಯರ್ ಮತ್ತು ರವಿಶಾಸ್ತ್ರಿ ಜೀವಮಾನದ ಸಾಧನೆಗಾಗಿ ಕರ್ನಲ್ ಸಿ.ಕೆ. ನಾಯ್ಡು ಪ್ರಶಸ್ತಿಯಿಂದ ಗೌರವಿತರಾದರು. ಆರ್. ಅಶ್ವಿನ್ 2ನೇ ಬಾರಿಗೆ ವರ್ಷದ ಶ್ರೇಷ್ಠ ಅಂತಾರಾಷ್ಟ್ರೀಯ ಆಟಗಾರ ಪ್ರಶಸ್ತಿಗೆ ಭಾಜನರಾದರು. ಉಳಿದ ಮೂವರೆಂದರೆ ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ ಮತ್ತು ಶುಭಮನ್ ಗಿಲ್. ವನಿತಾ ವಿಭಾಗದಲ್ಲಿ ಈ ಪ್ರಶಸ್ತಿ ದೀಪ್ತಿ ಶರ್ಮ ಮತ್ತು ಸ್ಮತಿ ಮಂಧನಾ ಪಾಲಾಯಿತು.
ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ಹರ್ಮನ್‌ಪ್ರೀತ್ ಕೌರ್ ಕೂಡ ಪ್ರಶಸ್ತಿಗಳಿಂದ ಸಂಭ್ರಮಿಸಿದರು. ಶ್ರೇಷ್ಠ ದೇಶಿ ಕ್ರಿಕೆಟ್ ಆಟಗಾರ್ತಿಗೆ ನೀಡಲಾಗುವ ಜಗಮೋಹನ್ ದಾಲ್ಮಿಯಾ ಪ್ರಶಸ್ತಿ ಕಾಶ್ವಿ ಗೌತಮ್ ಅವರಿಗೆ ಒಲಿಯಿತು.
2019-20ರಿಂದ 2022-23ನೇ ಸಾಲಿನ ಪ್ರಶಸ್ತಿ ಪುರಸ್ಕೃತರು
·ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಯಶಸ್ವಿ ಪದಾರ್ಪಣೆ
ಮಾಯಾಂಕ್ ಅಗರ್ವಾಲ್, ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್.
ಪ್ರಿಯಾ ಪುನಿಯಾ, ಶಫಾಲಿ ವರ್ಮ, ಎಸ್. ಮೇಘನಾ, ದೇವಿಕಾ ವೈದ್ಯ.
·ಪಾಲಿ ಉಮ್ರಿಗರ್ ಪ್ರಶಸ್ತಿ
ವರ್ಷದ ಶ್ರೇಷ್ಠ ಅಂತಾರಾಷ್ಟ್ರೀಯ ಆಟಗಾರರು
ಮೊಹಮ್ಮದ್ ಶಮಿ, ಆರ್. ಅಶ್ವಿನ್, ಜಸ್‌ಪ್ರೀತ್ ಬುಮ್ರಾ, ಶುಭಮನ್ ಗಿಲ್.
·ವರ್ಷದ ಶ್ರೇಷ್ಠ ಅಂತಾರಾಷ್ಟ್ರೀಯ ಆಟಗಾರ್ತಿಯರು
ದೀಪ್ತಿ ಶರ್ಮ (2019-20, 2020-21), ಸ್ಮತಿ ಮಂಧನಾ (2021-22, 2022-23).
·ದಿಲೀಪ್ ಸರ್ದೇಸಾಯಿ ಪ್ರಶಸ್ತಿ (2022-23)
ಅತ್ಯಧಿಕ ಟೆಸ್ಟ್ ವಿಕೆಟ್ ಸಾಧಕ: ಆರ್. ಅಶ್ವಿನ್ (ಭಾರತ-ವೆಸ್ಟ್ ಇಂಡೀಸ್).
ಅತ್ಯಧಿಕ ಟೆಸ್ಟ್ ರನ್ ಸಾಧಕ: ಯಶಸ್ವಿ ಜೈಸ್ವಾಲ್ (ಭಾರತ-ವೆಸ್ಟ್ ಇಂಡೀಸ್).
·ಕರ್ನಲ್ ಸಿ.ಕೆ. ನಾಯ್ಡು ಪ್ರಶಸ್ತಿ
ಫಾರುಖ್ ಇಂಜಿನಿಯರ್, ರವಿಶಾಶಾಸ್ತ್ರಿ .
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.