ಇಂದು ಬಿಸಿಸಿಐ “ಬದಲಾವಣೆ’ ಸಭೆ
Team Udayavani, Dec 1, 2019, 5:08 AM IST
ಮುಂಬಯಿ: ಸೌರವ್ ಗಂಗೂಲಿ ಅಧ್ಯಕ್ಷರಾದ ಅನಂತರ ಮೊದಲ ಬಿಸಿಸಿಐ ಸರ್ವಸದಸ್ಯರ ಸಭೆ ರವಿವಾರ ಮುಂಬಯಿಯಲ್ಲಿ ನಡೆಯಲಿದೆ.
ಈ ಸಭೆಯಲ್ಲಿ ಹಲವು ಮಹತ್ವದ ಸಂಗತಿಗಳ ಚರ್ಚೆಯಾಗಲಿದೆ. ಮುಖ್ಯವಾಗಿ ಬಿಸಿಸಿಐ ಅಳವಡಿಸಿಕೊಂಡಿರುವ ನೂತನ ಸಂವಿಧಾನದಲ್ಲಿ ಪ್ರಮುಖ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಕಡ್ಡಾಯ ವಿಶ್ರಾಂತಿ, ಸ್ವಹಿತಾಸಕ್ತಿ, ಐಸಿಸಿ ಪ್ರತಿನಿಧಿ ಆಯ್ಕೆ ನಿಯಮಗಳ ಮಾರ್ಪಾಡು, ಉನ್ನತ ಸಲಹಾ ಸಮಿತಿ ಆಯ್ಕೆ ಗಳೆಲ್ಲ ಈ ಸಭೆಯ ಮುಖ್ಯ ಕಾರ್ಯಕಲಾಪಗಳಲ್ಲಿ ಸೇರಿವೆ.
ಈ ಸಭೆಯಲ್ಲಿ 4ರಲ್ಲಿ 3ರಷ್ಟು ಬಹುಮತ ಬಂದರೆ ಹೊಸ ಬದಲಾವಣೆಗಳು ಸ್ವೀಕೃತಗೊಳ್ಳಲಿವೆ. ಅನಂತರ ಇದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಮಂಡಿಸಿ ಒಪ್ಪಿಗೆ ಪಡೆಯಬೇಕು.
ಸ್ವಾರಸ್ಯವೆಂದರೆ, ಸರ್ವೋಚ್ಚ ನ್ಯಾಯಾಲಯದ ಅಂತಿಮ ಒಪ್ಪಿಗೆ ಬೇಕು ಎಂಬ ನಿಯಮವನ್ನೂ ಬದಲಿಸಲು ಬಿಸಿಸಿಐ ತೀರ್ಮಾನಿಸಿದೆ. ಪ್ರತಿಯೊಂದಕ್ಕೂ ನ್ಯಾಯಾಲಯದ ಮೊರೆ ಹೋಗುವುದು ಸಾಧುವಲ್ಲ ಎನ್ನುವುದು ಹೊಸ ಆಡಳಿತ ಮಂಡಳಿಯ ವಾದ.
ಗಂಗೂಲಿ, ಜಯ್ ಶಾಗೆ ಲಾಭ
ನಿಯಮಗಳ ಬದಲಾವಣೆಯಿಂದ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ, ಜಯ್ ಶಾ ಕಾರ್ಯದರ್ಶಿಯಾಗಿ ಮುಂದುವರಿಯಲು ಅನುಕೂಲವಾಗಲಿದೆ. ಇಲ್ಲವಾದರೆ ಮುಂದಿನ 7-8 ತಿಂಗಳಲ್ಲಿ ಕಡ್ಡಾಯ ವಿಶ್ರಾಂತಿ ನಿಯಮದಡಿ ಅವರು ಅಧಿಕಾರ ತ್ಯಜಿಸುವುದು ಖಚಿತ. ಇವರು ಬಿಸಿಸಿಐ ಅಧಿಕಾರ ಸ್ವೀಕರಿಸುವಾಗ, ತಮ್ಮ ರಾಜ್ಯ ಸಂಸ್ಥೆಗಳಲ್ಲಿ 5 ವರ್ಷ, 3 ತಿಂಗಳು ಅಧಿಕಾರ ನಡೆಸಿದ್ದರು. ಆದ್ದರಿಂದ ಬಾಕಿ 9 ತಿಂಗಳು ಮಾತ್ರ ಅವರಿಗೆ ಬಿಸಿಸಿಐನಲ್ಲಿ ಅವಕಾಶ. ಅದರಲ್ಲಿ ಈಗಾಗಲೇ 2 ತಿಂಗಳು ಮುಗಿದು ಹೋಗಿದೆ.
ಕಡ್ಡಾಯ ವಿಶ್ರಾಂತಿ ನಿಯಮ ಬದಲು
ಇತ್ತೀಚೆಗಷ್ಟೇ ಅಳವಡಿಸಿಕೊಂಡಿರುವ ಬಿಸಿಸಿಐ ನೂತನ ಸಂವಿಧಾನದಲ್ಲಿ 3 ವರ್ಷಗಳ 2 ಅವಧಿ ಅಧಿಕಾರ ನಡೆಸಿದ್ದರೆ (ರಾಜ್ಯಸಂಸ್ಥೆ, ಬಿಸಿಸಿಐ ಸೇರಿ ಆಗಬಹುದು, ಯಾವುದೋ ಒಂದು ಸಂಸ್ಥೆಯಲ್ಲಾದರೂ ಆಗಬಹುದು), ಇನ್ನು 3 ವರ್ಷ ಪದಾಧಿಕಾರಿಯೊಬ್ಬರು ಕಡ್ಡಾಯ ವಿಶ್ರಾಂತಿ ಪಡೆಯುವುದು ಅನಿವಾರ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
3rd ODI ವನಿತಾ ಏಕದಿನ: ವಿಂಡೀಸ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್‌ಗೆ ಭಾರತ ಸಜ್ಜು
PAK Vs SA: ಸೆಂಚುರಿಯನ್ ಟೆಸ್ಟ್ ಪಾಕಿಸ್ಥಾನ 211ಕ್ಕೆ ಆಲೌಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಸೇನಾ ವಾಹನ ದುರಂತ; ಕೊಡಗಿನ ಯೋಧ ಚಿಂತಾಜನಕ
Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.