ಎನ್‌ಸಿಎ ತರಬೇತುದಾರರ ಗುತ್ತಿಗೆ ನವೀಕರಣವಿಲ್ಲ: ಬಿಸಿಸಿಐ
Team Udayavani, Sep 24, 2020, 1:23 AM IST
ಬೆಂಗಳೂರು: ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) 11 ಮಂದಿ ತರಬೇತುದಾರರ ಗುತ್ತಿಗೆ ನವೀಕರಣ ಮಾಡದಿರಲು ಬಿಸಿ ಸಿಐ ನಿರ್ಧರಿಸಿದೆ. ಇವರಿಷ್ಟೂ ಮಂದಿ ಸರ್ವೋಚ್ಚ ನ್ಯಾಯಾಲಯ ನಿಯೋಜಿತ ಕ್ರಿಕೆಟ್ ಆಡಳಿತಾಧಿಕಾರಿಗಳ ಕಾಲದಲ್ಲಿ ನೇಮಕಗೊಂಡವರು ಎಂಬುದು ಗಮನಾರ್ಹ. ಅದಕ್ಕಿಂತ ಮುಖ್ಯವಾಗಿ ಇವರ ಹೆಸರನ್ನು ಸೂಚಿಸಿದ್ದು ರಾಹುಲ್ ದ್ರಾವಿಡ್ ಎನ್ನುವುದು ಉಲ್ಲೇಖನೀಯ.
11 ಮಂದಿ ತರಬೇತುದಾರರ ಗುತ್ತಿಗೆ ನವೀಕರಣ ಮಾಡದಿರುವ ನಿರ್ಧಾರಕ್ಕೆ ಬಿಸಿಸಿಐ ಏಕೆ ಬಂದಿದೆ ಎನ್ನುವುದು ಗೊತ್ತಾಗಿಲ್ಲ. ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವ ಬಿಸಿಸಿಐಗೆ ಹಣದ ಸಮಸ್ಯೆಯಂತೂ ಇಲ್ಲ. 2018ರ ಬಿಸಿಸಿಐ ಬ್ಯಾಲೆನ್ಸ್‌ಶೀಟ್‌ನಲ್ಲಿ 5,226 ಕೋಟಿ ರೂ. ಹಣವಿದ್ದ ದಾಖಲೆಯಿದೆ!
ತರಬೇತುದಾರರು ಅತಂತ್ರ
30ರಿಂದ 55 ಲಕ್ಷ ರೂ. ವರೆಗೆ ವೇತನ ವಿದ್ದ 11 ತರಬೇತುದಾರರ ಪರಿಸ್ಥಿತಿ ಈಗ ಅತಂತ್ರ. ರಮೇಶ್ ಪೊವಾರ್, ಶಿವಸುಂದರ್ ದಾಸ್, ಹೃಷಿಕೇಶ್ ಕಾನಿ ಟ್ಕರ್, ಸುಬ್ರತೊ ಬ್ಯಾನರ್ಜಿ, ಸುಜಿತ್ ಸೋಮ ಸುಂದರ್, ಸೀತಾಂಶು ಕೋಟಕ್ ಈ ಪಟ್ಟಿಯಲ್ಲಿರುವ ಪ್ರಮುಖರು. ಈ ತರಬೇತುದಾರರು ವರ್ಷಕ್ಕೆ 120 ದಿನ ಕಾರ್ಯ ನಿರ್ವಹಿಸುತ್ತಾರೆ. ಇವರು ಹಿರಿಯ ಕ್ರಿಕೆಟಿಗರು, ಭಾರತ-ಎ, 19 ವಯೋಮಿತಿ, 23 ವಯೋಮಿತಿ ಆಟಗಾರರಿಗೆ ತರಬೇತಿ ನೀಡುತ್ತಾರೆ. ಹಾಗೆಯೇ ವಿಶೇಷ ಶಿಬಿರಗಳನ್ನು ಆಯೋಜಿಸುತ್ತಾರೆ.
ದ್ರಾವಿಡ್ ಕೂಡ ಅಸಹಾಯಕ
ಹೀಗೆ ಅಕಾಲದಲ್ಲಿ ಕೆಲಸ ಕಳೆದುಕೊಳ್ಳು ತ್ತಿರುವ ತರಬೇತುದಾರರನ್ನು ಉಳಿ ಸಿಕೊಳ್ಳಲು ರಾಷ್ಟ್ರೀಯ ಕ್ರಿಕೆಟ್ ಅಕಾ ಡೆಮಿ ಮುಖ್ಯಸ್ಥ ರಾಹುಲ್ ದ್ರಾವಿಡ್ ಗರಿಷ್ಠ ಪ್ರಯತ್ನ ಮಾಡಿದರೂ ಪ್ರಯೋ ಜನವಾಗಲಿಲ್ಲವಂತೆ! ಹೀಗೆಂದು ಸ್ವತಃ ದ್ರಾವಿಡ್ ಅವರೇ ಹೊರಹೋಗುತ್ತಿರುವ ತರಬೇತುದಾರರಿಗೆ ತಿಳಿಸಿದ್ದಾರೆಂದು ವರದಿಯಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.