ಬಿಸಿಸಿಐ ಪ್ರಧಾನ ಕಚೇರಿ ಮುಂಬೈನಿಂದ ಬೆಂಗ್ಳೂರಿಗೆ ಶಿಫ್ಟ್ ?
Team Udayavani, Feb 6, 2018, 6:35 AM IST
ನವದೆಹಲಿ: ಉದ್ಯಾನನಗರಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯನ್ನು ದೇವನಹಳ್ಳಿಗೆ ವರ್ಗಾಯಿಸುವ ವಿಚಾರದ ಬೆನ್ನಲ್ಲೇ ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಪ್ರಧಾನ ಕಚೇರಿಯನ್ನು ಮುಂಬೈನಿಂದ ಬೆಂಗಳೂರಿಗೆ ಸ್ಥಳಾಂತರಿಸುವ ಕುರಿತು ಚಿಂತನೆ ನಡೆದಿದೆ.
ಎಲ್ಲ ಅಂದುಕೊಂಡಂತೆ ನಡೆದರೆ ಮುಂದಿನ ಕೆಲ ವರ್ಷಗಳಲ್ಲಿ ಬಿಸಿಸಿಐ ತನ್ನ ಪ್ರಧಾನ ಕಚೇರಿಯನ್ನು ಬೆಂಗಳೂರಿಗೆ ವರ್ಗಾಯಿಸಲಿದೆ. ಈ ಕುರಿತಂತೆ ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ಮಂಡಳಿಯ ಎಲ್ಲ ಸದಸ್ಯರಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪತ್ರದಲ್ಲಿ ಸದಸ್ಯರಿಂದ ಸಲಹೆ ಸೂಚನೆ ಕೇಳಲಾಗಿದೆ. ಇದಕ್ಕೆ ಮುಂದಿನ ಮಂಡಳಿ ಸಭೆಯಲ್ಲಿ ಸದಸ್ಯರಿಂದ ಪ್ರತಿಕ್ರಿಯೆ ಕೇಳಲಾಗಿದೆ.
ಸಿ.ಕೆ.ಖನ್ನಾ ಪತ್ರದಲ್ಲೇನಿದೆ?: ಸದ್ಯ ಮುಂಬೈನ ವಾಂಖೇಡೆಯಲ್ಲಿರುವ ಬಿಸಿಸಿಐ ಪ್ರಧಾನ ಕಚೇರಿ ಸಣ್ಣದು. ಮೂಲಸೌಕರ್ಯದ ಹೆಚ್ಚಿಸಲು ಅಲ್ಲಿ ಅವಕಾಶವಿಲ್ಲ. ಬೆಂಗಳೂರಿನಲ್ಲಿ ನಮ್ಮದೇ 40 ಎಕರೆ ಜಾಗವಿದೆ. ವಿಮಾನ ನಿಲ್ದಾಣಕ್ಕೂ ಹತ್ತಿರವಿದೆ. ಮಹತ್ವದ ಎನ್‌ಸಿಎ ರೂಪಿಸುವ ಗುರಿ ಹೊಂದಲಾಗಿದ್ದು ಅಲ್ಲಿಗೆ ಬಿಸಿಸಿಐ ಪ್ರಧಾನ ಕಚೇರಿಯನ್ನು ವರ್ಗಾಯಿಸಬಹುದು. ಎನ್‌ಸಿಎ ಜತೆಗೆ ಬಿಸಿಸಿಐ ಇರುವುದರಿಂದ ಹೆಚ್ಚಿನ ಖರ್ಚು ವೆಚ್ಚಗಳಿಗೂ ಬ್ರೇಕ್ ಹಾಕಬಹುದಾಗಿದೆ. ಸದ್ಯ ಬಿಸಿಸಿಐ 5 ಸ್ಟಾರ್ ಹೋಟೆಲ್‌ಗಳಲ್ಲಿ ಸಭೆ ಆಯೋಜಿಸುತ್ತಿರುವುದರಿಂದ ಅತಿಯಾದ ಖರ್ಚು ವೆಚ್ಚಗಳಾಗುತ್ತಿದೆ. ಇದರ ಹೊರ ಬಿಸಿಸಿಐ ಮೇಲೆ ಬೀಳುತ್ತಿದೆ. ಇದನ್ನೆಲ್ಲ ತಡೆಯುವ ಪ್ರಯತ್ನ ಆಗಬೇಕಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಕಿವೀಸ್ ಸರ್ಜನ್ ಭೇಟಿಯಾದ ಬುಮ್ರಾ: ಚಾಂಪಿಯನ್ಸ್ ಟ್ರೋಫಿಗೆ ಅನುಮಾನ?
SUFC: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಿಂದ ಮೊಟ್ಟಮೊದಲ ಇಂಟರ್-ಸಿಟಿ ಪಂದ್ಯಾವಳಿ ಆಯೋಜನೆ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
AUSvSL: ಲಂಕಾ ಸರಣಿಗೆ ಆಸೀಸ್ ತಂಡ ಪ್ರಕಟ: ಸ್ಟೀವ್ ಸ್ಮಿತ್ ಗೆ ನಾಯಕತ್ವ ಪಟ್ಟ
Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್ ಆಟ
MUST WATCH
ಹೊಸ ಸೇರ್ಪಡೆ
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Friendship: ಸ್ನೇಹವೇ ಸಂಪತ್ತು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
UV Fusion: ತೆಪ್ಪ ದ್ವೀಪದೂರಿಗೊಂದು ಸಂಪರ್ಕಸೇತು
ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.