ಪದ್ಮ ಭೂಷಣ ಪ್ರಶಸ್ತಿಗೆ ಧೋನಿ ಹೆಸರು ಸೂಚಿಸಿದ ಬಿಸಿಸಿಐ
Team Udayavani, Sep 20, 2017, 3:19 PM IST
ಹೊಸದಿಲ್ಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಹಾಗೂ ಹಾಲಿ ಆಟಗಾರನಾಗಿರುವ 36ರ ಹರೆಯದ ಮಹೇಂದ್ರ ಸಿಂಗ್ ಧೋನಿ ಅವರನ್ನು, ಕ್ರಿಕೆಟಿಗೆ ಅವರು ನೀಡಿರುವ ಮಹೋನ್ನತ ಕಾಣಿಕೆಯನ್ನು ಗುರುತಿಸಿ, ದೇಶದ ಮೂರನೇ ಅತ್ಯುಚ್ಚ “ಪದ್ಮ ಭೂಷಣ’ ಪೌರ ಪ್ರಶಸ್ತಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಾಮಾಂಕನ ಮಾಡಿದೆ.
ಹಿರಿಯ ಬಿಸಿಸಿಐ ಅಧಿಕಾರಿಯೋರ್ವರು ಈ ವಿಷಯವನ್ನು ದೃಢೀಕರಿಸಿ, ಧೋನಿ ಅವರನ್ನು ಬಿಸಿಸಿಐ, ಏಕೈಕ ಆಟಗಾರನಾಗಿ ಪದ್ಮ ಪ್ರಶಸ್ತಿಗೆ ಸರ್ವಾನುಮತದಿಂದ ನಾಮಾಂಕನ ಮಾಡಿದೆ ಎಂದು ಹೇಳಿದ್ದಾರೆ.
ಧೋನಿ ಅವರು ಎರಡು ವಿಶ್ವ ಪ್ರಶಸ್ತಿಯನ್ನು (2011ರಲ್ಲಿ 50 ಓವರ್ಗಳ ವಿಶ್ವ ಕಪ್ ಮತ್ತು 2007ರಲ್ಲಿ ವಿಶ್ವ ಟಿ-20) ದೇಶಕ್ಕೆ ಗೆದ್ದುಕೊಟ್ಟಿದ್ದಾರೆ; ಹತ್ತಿರ ಹತ್ತಿರ 10,000 ರನ್ ಬಾರಿಸಿದ್ದಾರೆ; 90 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಪದ್ಮ ಪ್ರಶಸ್ತಿಗೆ ಬಿಸಿಸಿಐ ನಾಮಾಂಕನಕ್ಕೆ ಇವರಿಗಿಂತ ಹೆಚ್ಚು ಯೋಗ್ಯರಿರುವ ಬೇರೊಬ್ಬ ಆಟಗಾರನಿಲ್ಲ ಎಂದು ತಮ್ಮ ಹೆಸರು ತಿಳಿಸಬಯಸದ ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.
ಬಿಸಿಸಿಐ ಈ ವರ್ಷ ಪದ್ಮ ಪ್ರಶಸ್ತಿಗೆ ಬೇರೆ ಯಾವುದೇ ನಾಮಂಕನವನ್ನು ಕಳಿಸಿಲ್ಲ. ಧೋನಿ ಅವರು 302 ಏಕದಿನ ಪಂದ್ಯಗಳನ್ನಾಡಿ 9,737 ರನ್ ಬಾರಿಸಿದ್ದಾರೆ; 90 ಟೆಸ್ಟ್ ಪಂದ್ಯಗಳನ್ನು ಆಡಿ 4,876 ರನ್ ಬಾರಿಸಿದ್ದಾರೆ; 78 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿ 1,212 ರನ್ ಬಾರಿಸಿದ್ದಾರೆ. 16 ಏಕದಿನ ಶತಕಗಳನ್ನು ಬಾರಿಸಿದ್ದಾರೆ (ಟೆಸ್ಟ್ನಲ್ಲಿ 6, ಏಕದಿನದಲ್ಲಿ 10). 100 ಅಂತಾರಾಷ್ಟ್ರೀಯ ಅರೆ ಶತಕಗಳನ್ನು ಬಾರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
IPL 2025: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.