Team India; ಕೆಎಲ್ ರಾಹುಲ್ ವಿರುದ್ಧ ಕಿಡಿಕಾರಿದ ಬಿಸಿಸಿಐ: ಕಾರಣ ಇಲ್ಲಿದೆ
Team Udayavani, Feb 13, 2024, 11:26 AM IST
ಮುಂಬೈ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಪಂದ್ಯವು ಗುರುವಾರದಿಂದ ರಾಜಕೋಟ್ ನಲ್ಲಿ ಆರಂಭವಾಗಲಿದೆ. ಈಗಾಗಲೇ ತಂಡವನ್ನು ಪ್ರಕಟಿಸಲಾಗಿದೆ. ಆದರೆ ಫಿಟ್ನೆಸ್ ಷರತ್ತಿನೊಂದಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಕೆ.ಎಲ್ ರಾಹುಲ್ ಅವರು ಪೂರ್ಣ ಫಿಟ್ ಆಗದ ಕಾರಣ ಮೂರನೇ ಪಂದ್ಯದಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಮತ್ತೋರ್ವ ಕನ್ನಡಿಗ ದೇವದತ್ತ ಪಡಿಕ್ಕಲ್ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
“ಮುಂದಿನ ಮೂರು ಪಂದ್ಯಗಳಿಗೆ ರಾಹುಲ್ ಅವರ ಲಭ್ಯತೆ ಅವರ ಫಿಟ್ನೆಸ್ ಅವಲಂಬಿತವಾಗಿರುತ್ತದೆ. ಅವರು ಮೂರನೇ ಪಂದ್ಯದಿಂದ ಹೊರಗುಳಿಯಲಿದ್ದಾರೆ. ರಾಹುಲ್ ಅವರು ಶೇ.90ರಷ್ಟು ಮ್ಯಾಚ್ ಫಿಟ್ ಆಗಿದ್ದು, ಬಿಸಿಸಿಐ ಮೆಡಿಕಲ್ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ” ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.
ರಾಹುಲ್ ಅವರು ರಾಜಕೋಟ್ ಗೆ ಪ್ರಯಾಣ ಬೆಳೆಸಿಲ್ಲ. ಅವರು ಬೆಂಗಳೂರಿನ ಎನ್ ಸಿಎನಲ್ಲಿದ್ದಾರೆ.
“ರಾಹುಲ್ ಅವರ ಗಾಯವು ಮೇಲ್ನೋಟಕ್ಕೆ ಗಂಭೀರವಾಗಿದೆ ಎಂದು ಬಿಸಿಸಿಐನ ವೈದ್ಯಕೀಯ ತಂಡಕ್ಕೆ ತಿಳಿದಿದ್ದರೆ, ಅವರನ್ನು ತಂಡದಲ್ಲಿ ತಾತ್ಕಾಲಿಕವಾಗಿ ಏಕೆ ಇರಿಸಲಾಯಿತು? ಆಟಗಾರನು ತನ್ನ ಬ್ಯಾಟಿಂಗ್ ನ ವೀಡಿಯೊಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಏಕೆ ತಪ್ಪು ಸಂದೇಶಗಳನ್ನು ಕಳುಹಿಸುತ್ತಿದ್ದಾನೆ?” ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.