ಬಿಸಿಸಿಐ ಪದಾಧಿಕಾರಿಗಳಿಗೆ ಮತ್ತೂಮ್ಮೆ ಪದಚ್ಯುತಿ ಭೀತಿ
Team Udayavani, Aug 17, 2017, 11:21 AM IST
ನವದೆಹಲಿ: ಬಿಸಿಸಿಐ ಅಗ್ರ ನೇತಾರರಿಗೆ ಮತ್ತೂಮ್ಮೆ ಪದಚ್ಯುತಿಯ ಭೀತಿ ತಟ್ಟಿದೆ. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸುತ್ತಿಲ್ಲ, ಆದ್ದರಿಂದ ಹಂಗಾಮಿ ಅಧ್ಯಕ್ಷ, ಕಾರ್ಯದರ್ಶಿ ಸೇರಿ ಅಗ್ರ ಪದಾಧಿಕಾರಿಗಳನ್ನು ಪದಚ್ಯುತಿ ಮಾಡಲು ಅವಕಾಶ ನೀಡಿ ಎಂದು ಸರ್ವೋಚ್ಚ ನ್ಯಾಯಾಲಯ ನಿಯೋಜಿತ ಆಡಳಿತಾಧಿಕಾರಿಗಳು ನ್ಯಾಯ ಪೀಠಕ್ಕೆ ಮನವಿ ಸಲ್ಲಿಸಿದ್ದಾರೆ. ಒಂದು ವೇಳೆ ನ್ಯಾಯಪೀಠ ಇದನ್ನು ಪರಿಗಣಿಸಿ ದರೆ ಮತ್ತೂಂದು ಆಘಾತಕಾರಿ ಬೆಳವಣಿಗೆಗೆ ಬಿಸಿಸಿಐ ಸಿದ್ಧವಾಗಬೇಕಾಗುತ್ತದೆ.
ಈ ವರ್ಷಾರಂಭದಲ್ಲಿ ಸರ್ವೋಚ್ಚ ನ್ಯಾಯಾಲಯದ ಆಡಳಿತಾತ್ಮಕ ಸುಧಾರಣೆಗೆ ಅಡ್ಡಿಯಾಗಿದ್ದಾರೆ ಎಂಬ ಕಾರಣದಿಂದ ಅನುರಾಗ್ ಠಾಕೂರ್ ಮತ್ತು ಅಜಯ್ ಶಿರ್ಕೆಯನ್ನು ಅಧ್ಯಕ್ಷ ಮತ್ತು ಕಾರ್ಯದರ್ಶಿ ಹುದ್ದೆಯಿಂದ ಪದಚ್ಯುತಿಗೊಳಿಸಲಾಗಿತ್ತು. ಆ ನೆನಪು ಇನ್ನೂ ಹಾಗೆಯೇ ಇರುವಾಗಲೇ ಮತ್ತೂಂದು ಬೆಳವಣಿಗೆ ನಡೆಯುತ್ತಿದೆ. ಆಡಳಿತಾಧಿಕಾರಿಗಳ ಸಿಟ್ಟಿಗೆ ಕಾರಣ, ಬಿಸಿಸಿಐ ಸಿಇಒ ರಾಹುಲ್ ಜೊಹ್ರಿಯನ್ನು ಜು.26ರಂದು ನಡೆದ ವಿಶೇಷ
ಸಭೆಯಿಂದ ಹೊರ ಕಳುಹಿಸಿದ್ದು. ಬಿಸಿಸಿಐನ ಎಲ್ಲ ಸಭೆಗಳಲ್ಲಿ ಸಿಇಒ ಕಡ್ಡಾಯವಾಗಿ ಇರಲೇಬೇಕೆಂದು ಹೇಳಿದ್ದರೂ ಬಿಸಿಸಿಐ ಅಧ್ಯಕ್ಷ, ಕಾರ್ಯದರ್ಶಿಯವರು ಜೊಹ್ರಿ ಸೇರಿದಂತೆ ಇನ್ನಿತರ ಕೆಲ ಕಾನೂನು ಸಲಹೆಗಾರರನ್ನು ಸಭೆಯಿಂದ ಹೊರ ಹೋಗಲು ಸೂಚಿಸಲಾಗಿತ್ತು! ಇದಕ್ಕೆ
ನ್ಯಾಯಪೀಠದ ಆದೇಶವನ್ನೇ ಆಧಾರವಾಗಿ ನೀಡಲಾಗಿತ್ತು!
ಮತ್ತೂಂದು ಕಡೆ ಸಭೆಯಲ್ಲಿ ಯಾವುದೇ ಸುಧಾರಣೆಗಳ ಬಗ್ಗೆ ಚರ್ಚೆ ನಡೆಸದೆ ಅವುಗಳನ್ನು ಇತರೆ ಪಟ್ಟಿಯಲ್ಲಿಡಲಾಗಿತ್ತು. ಪದಾಧಿಕಾರಿಗಳ ಅನರ್ಹತೆ, ಉನ್ನತ ಸಮಿತಿ ರಚನೆ, ಕಾರ್ಯ ಚಟುವಟಿಕೆಗಳ ಹಂಚಿಕೆ ಮುಂತಾದವುಗಳ ಕುರಿತು ತಟಸ್ಥ ನಿಲುವಿತ್ತು. ಅತ್ಯಂತ ಮಹತ್ವದ ಸ್ವಹಿತಾಸಕ್ತಿ
ವಿವಾದ, ವಿಶೇಷ ಅಧಿಕಾರಿ ನೇಮಕದ ಕುರಿತೂ ವಿಶೇಷ ಸಭೆಯಲ್ಲಿ ಚರ್ಚೆಯೇ ಆಗಿಲ್ಲ ಎನ್ನುವುದು ಆಡಳಿತಾಧಿಕಾರಿಗಳ ಆರೋಪ. ಅಷ್ಟಲ್ಲದೇ ಸಭೆಯ ಪ್ರಕ್ರಿಯೆಗಳ ಕುರಿತು ಆಡಳಿತಾಧಿಕಾರಿಗಳಿಗೆ ಯಾವುದೇ ನೇರ ಮಾಹಿತಿ ಸಿಗದಂತೆ ನೋಡಿಕೊಳ್ಳಲಾಗಿದೆ. ಇದು ಆಡಳಿತಾಧಿಕಾರಿಗಳನ್ನು ದೂರ ವಿಡುವ ಸ್ಪಷ್ಟ ಯತ್ನ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.