ದೇಶಿ ಕ್ರಿಕೆಟ್ ಆರಂಭಿಸಲು ಬಿಸಿಸಿಐ ಚಿಂತನೆ
Team Udayavani, Nov 17, 2020, 7:47 PM IST
ಹೊಸದಿಲ್ಲಿ: ಯುಎಇಯಲ್ಲಿ 13ನೇ ಐಪಿಎಲ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ ಖುಷಿಯಲ್ಲಿರುವ ಬಿಸಿಸಿಐ, ಇದೀಗ 14ನೇ ಇಂಡಿಯನ್ ಪ್ರೀಮಿಯರ್ ಲೀಗ್‌ನತ್ತ ಗಮನಹರಿಸಿದೆ. ಮುಂದಿನ ಆವೃತ್ತಿಗೆ ಮತ್ತೂಂದು ತಂಡ ಸೇರ್ಪಡೆಗೊಳಿಸಲು ಬಿಸಿಸಿಐ ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದೆ. ಜತೆಗೆ ದೇಶಿ ಕ್ರಿಕೆಟ್‌ನತ್ತ ಒಲವು ವ್ಯಕ್ತಪಡಿಸಿದೆ.
ಅದರಂತೆ ಐಪಿಎಲ್-14ನೇ ಆವೃತ್ತಿಗೆ ಆಟಗಾರರನ್ನು ಹರಾಜಿನಲ್ಲಿ ಕೊಂಡುಕೊಳ್ಳಲು ಅನುಕೂಲವಾಗುವಂತೆ “ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ’ ಕ್ರಿಕೆಟ್ ಕೂಟವನ್ನು ಆಯೋಜಿಸುವುದು ಬಿಸಿಸಿಐ ಯೋಜನೆಯಾಗಿದೆ. ಅನಂತರ ರಣಜಿ ಟ್ರೋಫಿ ಪಂದ್ಯಾವಳಿಯನ್ನು ನಡೆಸುವುದು ಮಂಡಳಿಯ ಸದ್ಯದ ಲೆಕ್ಕಾಚಾರ.
ಪಂಚತಾರಾ ಹೊಟೇಲ್‌ಗಳಿಗೆ ಹತ್ತಿರವಾಗಿರುವ ಮೈದಾನಗಳಿಗೆ ಆದ್ಯತೆ ನೀಡಲಾಗುತ್ತಿದೆ. ಈ ಕುರಿತು 10 ರಾಜ್ಯ ಮಂಡಳಿಗಳನ್ನು ಸಂಪರ್ಕಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಈ ಪೈಕಿ 6 ರಾಜ್ಯ ಮಂಡಳಿಗಳು ಸಕರಾತ್ಮಕವಾಗಿ ಸ್ಪಂದಿಸಿವೆ ಎಂದು ತಿಳಿದು ಬಂದಿದೆ.
ಎರಡು ವಾರಗಳ ಅಂತರದಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಆಯೋಜಿಸಿ, ಬಳಿಕ ರಣಜಿ ಟ್ರೋಫಿಗೆ ಚಾಲನೆ ನೀಡಲು ಬಿಸಿಸಿಐ ತೀರ್ಮಾನಿಸಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.