ಬಿಸಿಸಿಐ ಪದಾಧಿಕಾರಿಗಳ ವಜಾಕ್ಕೆ ಶಿಫಾರಸು!
Team Udayavani, Mar 10, 2018, 7:30 AM IST
ನವದೆಹಲಿ: ಬಿಸಿಸಿಐ ಆಡಳಿತಾಧಿಕಾರಿಗಳಾದ ವಿನೋದ್ ರಾಯ್, ಡಯಾನಾ ಎಡುಲ್ಜಿ ಸರ್ವೋಚ್ಚ ನ್ಯಾಯಾಲಯಕ್ಕೆ ವಸ್ತುಸ್ಥಿತಿ ವರದಿ ಸಲ್ಲಿಸಿದ್ದು, ಪದಾಧಿಕಾರಿಗಳನ್ನು ವಜಾ ಮಾಡಲು ಶಿಫಾರಸು ಮಾಡಿದ್ದಾರೆ. ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ, ಕಾರ್ಯದರ್ಶಿ ಅಮಿತಾಭ್ ಚೌಧರಿ, ಖಜಾಂಚಿ ಅನಿರುದ್ಧ ಚೌಧರಿಯನ್ನು ವಜಾ ಮಾಡಿ ಹೊಸ ಚುನಾವಣೆ ನಡೆಸಲು ಮನವಿ ಮಾಡಿದ್ದಾರೆ.
ಬಿಸಿಸಿಐನ ನೂತನ ಸಂವಿಧಾನ ಅಳವಡಿಕೆಗೆ ಮುನ್ನವೇ ವಾರ್ಷಿಕ ಸರ್ವಸದಸ್ಯರ ಸಭೆ ನಡೆಸಲು ಅನುಮತಿ ಕೋರಿದ್ದಾರೆ. ಈ ಪದಾಧಿಕಾರಿಗಳು ಲೋಧಾ ಶಿಫಾರಸು ಜಾರಿಗೆ ಅಡ್ಡಿಯಾಗಿದ್ದಾರೆನ್ನುವುದು ಅವರ ಅಭಿಪ್ರಾಯವಾಗಿದೆ. ಈ ಹಿಂದೆ ಇದೇ ರೀತಿ ಮನವಿ ಮಾಡಿದ್ದಾಗ ಸರ್ವೋಚ್ಚ ನ್ಯಾಯಾಲಯ ಬಲವಾದ ತೀರ್ಮಾನ ಕೈಗೊಂಡು, ಅಂದಿನ ಅಧ್ಯಕ್ಷ ಅನುರಾಗ್ ಠಾಕೂರ್, ಕಾರ್ಯದರ್ಶಿಯಾಗಿದ್ದ ಅಜಯ್ ಶಿರ್ಕೆ ವಜಾಗೊಂಡಿದ್ದರು.
ಬಿಸಿಸಿಐ “ಸ್ವಹಿತಾಸಕ್ತಿ’ ಕುರಿತು ಪ್ರಶ್ನಿಸಿದ ರಾಹುಲ್ ದ್ರಾವಿಡ್
ನವದೆಹಲಿ: ಬೆಂಗಳೂರಿನಲ್ಲಿ ಕ್ರೀಡಾ ತರಬೇತಿಗಾಗಿ ಪಡುಕೋಣೆ-ದ್ರಾವಿಡ್ ಕ್ರೀಡಾ ಕೇಂದ್ರ ಕಳೆದ ವರ್ಷ ಆರಂಭವಾಗಿದೆ. ಇದು ಸ್ವಹಿತಾಸಕ್ತಿ ಪ್ರಕರಣದಡಿ ಬರುತ್ತದೆಯೇ ಎಂದು ಕ್ರಿಕೆಟಿಗ ರಾಹುಲ್ ದ್ರಾವಿಡ್ ಬಿಸಿಸಿಐಗೆ ಪತ್ರ ಬರೆದು ಪ್ರಶ್ನಿಸಿದ್ದಾರೆ. ಬಿಸಿಸಿಐಗೆ ಬರೆದಿರುವ ಪತ್ರದಲ್ಲಿ, ತನ್ನ ಹೆಸರನ್ನು ಆ ಕ್ರೀಡಾ ಸಂಸ್ಥೆ ಬಳಸಿಕೊಂಡಿದೆ. ಆದರಲ್ಲಿ ತಾನು ಮಾಲಿಕತ್ವ ಹೊಂದಿಲ್ಲ, ಇದು ಸ್ವಹಿತಾಸಕ್ತಿ ಅಡಿಯಲ್ಲಿ ಬರುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಕಳೆದ ವರ್ಷ ದ್ರಾವಿಡ್ ಅ-19 ತಂಡದ ಕೋಚ್ ಹುದ್ದೆಯ ಜತೆಗೆ ಐಪಿಎಲ್ ಫ್ರಾಂಚೈಸಿ ಡೆಲ್ಲಿಡೇರ್‌ಡೆವಿಲ್ಸ್ ತಂಡದ ಕೋಚ್ ಆಗಿದ್ದರು. ಒಂದೇ ಸಮಯದಲ್ಲಿ ಎರಡು ಹುದ್ದೆ ನಿರ್ವಹಿಸುವುದು ಸ್ವಹಿತಾಸಕ್ತಿಗೆ ಕಾರಣವಾಗುತ್ತದೆ ಎಂದು ಎಂದು ವಿವಾದವಾಗಿತ್ತು. ಆ ನಂತರ ಡೆಲ್ಲಿ ತಂಡದ ಕೋಚ್ ಹುದ್ದೆ ಕೈಬಿಟ್ಟಿದ್ದರು. ಭಾರತ ಕಿರಿಯರ ತಂಡದ ಕೋಚ್ ಸ್ಥಾನಕ್ಕೆ ಅಂಟಿಕೊಂಡಿದ್ದರು. ಆಗ ದ್ರಾವಿಡ್ ವೇತನವನ್ನು 5 ಕೋಟಿ ರೂ.ಗೆ ಏರಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಸದ್ಯ ದ್ರಾವಿಡ್ ಭಾರತ ಕಿರಿಯರ ತಂಡ, ಎ ತಂಡದ ಕೋಚ್ ಆಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
ಧ್ಯಾನ್‌ಚಂದ್ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್ ಸಿಂಗ್ ಪ್ರಶ್ನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ
Max movie review: ಮಾಸ್ ಮನಸುಗಳಿಗೆ ʼಮ್ಯಾಕ್ಸ್ʼ ಅಭಿಷೇಕ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.