ಯೋ-ಯೋ ಟೆಸ್ಟ್ ಜತೆಗೆ “ಡೆಕ್ಸಾ’ ಕಡ್ಡಾಯ: ವರ್ಷಾರಂಭದ ಸಭೆ ನಡೆಸಿದ ಬಿಸಿಸಿಐ
ಫಿಟ್‌ನೆಸ್‌ಗೆ ಆದ್ಯತೆ ; 20 ಆಟಗಾರರ ಯಾದಿಯಿಂದ ವಿಶ್ವಕಪ್‌ಗೆ ಆಯ್ಕೆ
Team Udayavani, Jan 2, 2023, 8:15 AM IST
ಮುಂಬಯಿ: ಹೊಸ ವರ್ಷದ ಮೊದಲ ದಿನದಂದು ನಡೆದ ಬಿಸಿಸಿಐ ಸಭೆಯಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಆಟಗಾರರ ಆಯ್ಕೆಗೆ ಮಾನದಂಡವಾಗಿರುವ ಯೋ-ಯೋ ಟೆಸ್ಟ್ ವಿಧಾನವನ್ನು ಮರಳಿ ಆಯೋಜಿಸು ವುದು, ಇದರೊಂದಿಗೆ “ಡೆಕ್ಸಾ’ವನ್ನೂ (ಮೂಳೆಗಳ ಸಾಂದ್ರತೆಯನ್ನು ಅಳೆಯುವ ವಿಶೇಷ ರೀತಿಯ ಎಕ್ಸ್-ರೇ, ಡ್ಯುಯೆಲ್ ಎನರ್ಜಿ ಎಕ್ಸ್-ರೇ ಎಬಾಪ್ಟಿಮೆಟ್ರಿ) ಕಡ್ಡಾಯಗೊಳಿಸಲಾಯಿತು.
2022ರಲ್ಲಿ ಭಾರತೀಯ ಕ್ರಿಕೆಟ್ ನಿರ್ವಹಣೆ ಹೇಳಿಕೊಳ್ಳುವಂಥ ಮಟ್ಟದಲ್ಲಿ ಇರದಿದ್ದುದ ರಿಂದ ಹಾಗೂ ಈ ವರ್ಷ ಭಾರತದ ಆತಿಥ್ಯದಲ್ಲೇ ಏಕದಿನ ವಿಶ್ವಕಪ್ ಪಂದ್ಯಾವಳಿ ನಡೆಯುವುದರಿಂದ ಈ ಸಭೆ ಹೆಚ್ಚಿನ ಮಹತ್ವ ಪಡೆದಿತ್ತು. ಆಟಗಾರರ ಲಭ್ಯತೆ ಹಾಗೂ ಅವರ ಫಿಟ್‌ನೆಸ್ ಕಾಯ್ದುಕೊಳ್ಳುವ ವಿಚಾರದ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚಿಸಲಾಯಿತು.
ಬಿಸಿಸಿಐ ಅಚ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ, ನಾಯಕ ರೋಹಿತ್ ಶರ್ಮ, ಕೋಚ್ ರಾಹುಲ್ ದ್ರಾವಿಡ್, ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್, ಆಯ್ಕೆ ಮಂಡಳಿ ಅಧ್ಯಕ್ಷ ಚೇತನ್ ಶರ್ಮ ಸಭೆಯಲ್ಲಿ ಹಾಜರಿದ್ದರು. ಇವರೆಲ್ಲ ಸೇರಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡರು.
ಫಿಟ್‌ನೆಸ್ ಬಹಳ ಮುಖ್ಯ
ಏಕದಿನ ವಿಶ್ವಕಪ್‌ಗಾಗಿ 20 ಕ್ರಿಕೆಟಿಗರನ್ನು ಆರಿಸಿ (ಶಾರ್ಟ್ ಲಿಸ್ಟ್), ಈ ವರ್ಷ ಆಡಲಾಗುವ ಸುಮಾರು 35 ಏಕದಿನ ಪಂದ್ಯಗಳಿಗೆ ಈ 20 ಕ್ರಿಕೆಟಿಗರನ್ನೇ ಆವರ್ತನ ಪದ್ಧತಿಯಂತೆ ಆಡಿಸುವುದು ಬಿಸಿಸಿಐ ಯೋಜನೆ. ಮೂರೂ ಮಾದರಿಗಳಲ್ಲಿ ಆಡಲಾಗುವ ಆಟಗಾರರ ಫಿಟ್‌ನೆಸ್‌ಗೆ ಹೆಚ್ಚಿನ ಗಮನ ಕೊಡಲು ಯೋಜನೆಗಳನ್ನು ರೂಪಿಸಲಾಯಿತು. ಆರಂಭದಲ್ಲೇ ಯೋ-ಯೋ ಮತ್ತು ಡೆಕ್ಸಾ ಟೆಸ್ಟ್‌ನಲ್ಲಿ ತೇರ್ಗಡೆಯಾದರೆ ನಡುವಲ್ಲಿ ಫಿಟ್‌ನೆಸ್ ಸಮಸ್ಯೆ ಎದುರಾಗದೆಂಬುದು ಮಂಡಳಿ ನಂಬಿಕೆ. ಹೀಗಾಗಿ ಆಟಗಾರರ ದೈಹಿಕ ಕ್ಷಮತೆಯ ಮೇಲ್ವಿಚಾರಣೆಗಾಗಿ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಕೆಲಸ ಮಾಡುವಂತೆ ವಿವಿಎಸ್ ಲಕ್ಷ್ಮಣ್ ನೇತೃತ್ವದ ಎನ್‌ಸಿಎಗೆ ಬಿಸಿಸಿಐ ಸೂಚಿಸಿತು.
ಜಸ್‌ಪ್ರೀತ್ ಬುಮ್ರಾ, ದೀಪಕ್ ಚಹರ್, ರವೀಂದ್ರ ಜಡೇಜ ಮೊದಲಾದ ಕ್ರಿಕೆಟಿಗರು ಫಿಟ್‌ನೆಸ್ ಸಮಸ್ಯೆಯಿಂದಾಗಿ ಕಳೆದ ಅನೇಕ ತಿಂಗಳಿಂದ ಟೀಮ್ ಇಂಡಿಯಾದಿಂದ ಬೇರ್ಪಟ್ಟಿ ರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಮುಂದೆ ಕ್ರಿಕೆಟಿಗರಿಗೆ ಇಂಥ ಸಮಸ್ಯೆ ಕಾಡದಂತೆ ನೋಡಿಕೊಳ್ಳಬೇಕಾದ ಮಹತ್ವದ ಹೊಣೆಗಾರಿಕೆ ಕುರಿತು ಚರ್ಚಿಸಲಾಯಿತು.
ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ದೇಶಿ ಕ್ರಿಕೆಟ್‌ಗಳಲ್ಲಿ ಆಡಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವುದು ಮುಖ್ಯ. ಕೇವಲ ಐಪಿಎಲ್ ಮಾತ್ರವೇ ಮಾನದಂಡವಲ್ಲ ಎಂಬುದನ್ನು ಸೂಚ್ಯವಾಗಿ ಹೇಳಲಾಯಿತು.
ಯೋ-ಯೋ ಗೊತ್ತು, ಡೆಕ್ಸಾ ಅಂದರೇನು?
ಕ್ರಿಕೆಟಿಗರ ಯೋ-ಯೋ ಟೆಸ್ಟ್ ಬಗ್ಗೆ ಈಗಾಗಲೇ ಅಲ್ಪಸ್ವಲ್ಪ ತಿಳಿದಿದೆ. ಇದು 23 ಹಂತಗಳ ಪರೀಕ್ಷೆ, ಕ್ರಿಕೆಟಿಗರಿಗೆ 5ನೇ ಹಂತದಿಂದ ಆರಂಭ, ಕ್ರಿಕೆಟಿಗ 20 ಪ್ಲಸ್ 20 ಮೀ. ದೂರವನ್ನು ನಿಗದಿತ ಅವಧಿಯಲ್ಲಿ ಪೂರೈಸುವುದು. ಹಂತಗಳ ಸಂಖ್ಯೆ ಹೆಚ್ಚಿದಂತೆ ದೂರವನ್ನು ಕ್ರಮಿಸುವ ಸಮಯ ಕಡಿಮೆಯಾಗುತ್ತದೆ. ಇಲ್ಲಿ ತೇರ್ಗಡೆಯಾಗಲು ಕನಿಷ್ಠ 16.1 ಅಂಕ ಅಗತ್ಯ. ಇದು ಯೋ-ಯೋ.
ಡೆಕ್ಸಾ ಅಂದರೆ ಮೂಳೆಗಳ ಸಾಂದ್ರತೆ ಯನ್ನು ಪತ್ತೆಹಚ್ಚುವ ವಿಧಾನ. ಆಟಗಾರರ ದೈಹಿಕ ಕ್ಷಮತೆಯನ್ನು ವೈಜ್ಞಾನಿಕವಾಗಿ, ಹೆಚ್ಚು ನಿಖರವಾಗಿ ಗುರುತಿಸಲು ಇದರಿಂದ ಸಾಧ್ಯ. ಇಲ್ಲಿ ನಡೆಸಲಾಗುವ ಎಕ್ಸ್-ರೇ ಪರೀಕ್ಷೆ ವೇಳೆ ಆಟಗಾರರ ಮೂಳೆಯ ಸಾಮರ್ಥ್ಯದ ಸ್ಪಷ್ಟ ಚಿತ್ರಣ ಲಭಿಸುತ್ತದೆ. ಮೂಳೆಯ ಸಾಮರ್ಥ್ಯ ಎಷ್ಟಿದೆ, ಗಟ್ಟಿಯಾಗಿದೆಯೇ ಅಥವಾ ಬಹಳ ಬೇಗ ಮುರಿಯಬಹುದೇ ಎಂಬುದರ ಜತೆಗೆ ದೇಹದಲ್ಲಿನ ಕೊಬ್ಬಿನ ಅಂಶವನ್ನೂ ಪತ್ತೆಹಚ್ಚಬಹುದು. ಇದು ಕೇವಲ 10 ನಿಮಿಷಗಳ ಪರೀಕ್ಷೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
MUST WATCH
ಹೊಸ ಸೇರ್ಪಡೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಹಸು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.