ಸಚಿನ್ 10ನೇ ಸಂಖ್ಯೆ ಜೆರ್ಸಿಗೆ ವಿದಾಯ!
Team Udayavani, Nov 30, 2017, 6:45 AM IST
ಮುಂಬೈ: ಭಾರತ ಕ್ರಿಕೆಟ್ನ ದೇವರೆಂದು ಕರೆಸಿಕೊಂಡಿರುವ ಸಚಿನ್ ತೆಂಡುಲ್ಕರ್ 10ನೇ ಸಂಖ್ಯೆಯ ಜೆರ್ಸಿ ಧರಿಸಿ ಆಡುತ್ತಿದ್ದರೆನ್ನುವುದು ಕ್ರಿಕೆಟ್ ಅಭಿಮಾನಿಗಳಿಗೆ ಚಿರಪರಿಚಿತ ಸಂಗತಿ. 2013ರಲ್ಲಿ ತೆಂಡುಲ್ಕರ್ ನಿವೃತ್ತಿಯಾದಾಗ ಆ ಸಂಖ್ಯೆಯ ಜೆರ್ಸಿಯನ್ನು ಭಾರತೀಯ ಡ್ರೆಸ್ಸಿಂಗ್ ಕೊಠಡಿಯಲ್ಲಿ ಗೌರವ ಸೂಚಕವಾಗಿ ಇಡಲಾಗಿತ್ತು. ಇದೀಗ 10ನೇ ಸಂಖ್ಯೆಯ ಜೆರ್ಸಿಗೆ ಅಧಿಕೃತವಾಗಿ ವಿದಾಯ ಹೇಳಿದ ಪರಿಸ್ಥಿತಿ ಏರ್ಪಟ್ಟಿದೆ. ಕಾರಣ ಸಚಿನ್ ಗೌರವಾರ್ಥ ಯಾವುದೇ ಕ್ರಿಕೆಟಿಗ ಅದನ್ನು ಬಳಸಲು ಒಪ್ಪುತ್ತಿಲ್ಲ.
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ನಿಯಮಗಳ ಪ್ರಕಾರ ಯಾವುದೇ ಸಂಖ್ಯೆಯ ಜೆರ್ಸಿಗೆ ಅಧಿಕೃತವಾಗಿ ವಿದಾಯ ಹೇಳುವುದು ಅಸಾಧ್ಯ. ಆದರೆ ಭಾರತೀಯ ಆಟಗಾರರು ಅದನ್ನು ಬಳಸಲು ಮುಂದಾಗದಿರುವುದು ಅನಧಿಕೃತ ನಿವೃತ್ತಿಯ ವಾತಾವರಣ ಸೃಷ್ಟಿಸಿದೆ. ಅದೂ ಅಲ್ಲದೇ ಸಚಿನ್ ತೆಂಡುಲ್ಕರ್ ಅವರ 10ನೇ ಸಂಖ್ಯೆಯ ಜೆರ್ಸಿಯನ್ನು ಬೇರಾವುದೇ ಆಟಗಾರ ಧರಿಸುವುದನ್ನು ಅಭಿಮಾನಿಗಳು ಕೂಡ ಸಹಿಸುವುದಿಲ್ಲ.
ಇತ್ತೀಚೆಗೆ ಭಾರತ ಕ್ರಿಕೆಟ್ ತಂಡದ ಶ್ರೀಲಂಕಾ ಪ್ರವಾಸದ ವೇಳೆ ಮುಂಬೈ ಮೂಲದ ವೇಗದ ಬೌಲರ್ ಶಾದೂìಲ್ ಠಾಕೂರ್ ಈ ಸಂಖ್ಯೆಯ ಜೆರ್ಸಿಯನ್ನು ಧರಿಸಿದ್ದರು. ಅದನ್ನು ಖಡಕ್ಕಾಗಿ ವಿರೋಧಿಸಿದ್ದರಿಂದ ಶಾದೂìಲ್ ಅದರ ಸಹವಾಸವೇ ಬೇಡವೆಂದು ಬಿಟ್ಟುಬಿಟ್ಟರು. 10ನೇ ಸಂಖ್ಯೆ ಬಳಸುವುದಕ್ಕೆ ಅವಕಾಶ ನೀಡಿದ್ದರೂ ಆಟಗಾರರೇ ಹಿಂಜರಿಯುತ್ತಿರುವುದು ಬಿಸಿಸಿಐಗೂ ಇಕ್ಕಟ್ಟು ಸೃಷ್ಟಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australian Open: ಹಿಂದೆ ಸರಿದ ಸಿಮೋನಾ ಹಾಲೆಪ್
South Africa vs Pakistan 2nd Test: ಬಾಶ್ ದಾಖಲೆ: ದ. ಆಫ್ರಿಕಾ ಮುನ್ನಡೆ
Melbourne Cricket Club; ಸಚಿನ್ ತೆಂಡುಲ್ಕರ್ಗೆ ಗೌರವ ಸದಸ್ಯತ್ವ
Boxing: ವಿಶ್ವ ಬಾಕ್ಸಿಂಗ್ ಸಂಸ್ಥೆಯಿಂದ ಮಧ್ಯಂತರ ಏಷ್ಯನ್ ಮಂಡಳಿ
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್ಸ್ವೀಪ್ ಮಾಡಿದ ವನಿತೆಯರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.