ಟೆಸ್ಟ್ ವಿಶ್ವಕಪ್, ಏಕದಿನ ಲೀಗ್ ರದ್ದು ಮಾಡಿ: ಐಸಿಸಿಗೆ ಬಿಸಿಸಿಐ ಆಗ್ರಹ ಮಾಡಿದ್ಯಾಕೆ?
Team Udayavani, Apr 18, 2020, 9:59 AM IST
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಗೂ ಕೆಲವು ಬಲಿಷ್ಠ ಕ್ರಿಕೆಟ್ ಸಂಸ್ಥೆಗಳಿಗೂ ಒಳಗೊಳಗೇ ತಿಕ್ಕಾಟ ಶುರುವಾಗಿದೆ. 2023ರಿಂದ 2031ರ ಅವಧಿಯಲ್ಲಿ ಪ್ರತೀವರ್ಷ ಒಂದು ವಿಶ್ವಕೂಟ ನಡೆಸಬೇಕೆಂದು ಐಸಿಸಿ ಲೆಕ್ಕಿಸಿದೆ.
ಇದರಿಂದ ತಮಗೆ ನಷ್ಟ ಎಂದು ಬಿಸಿಸಿಐ, ಇಂಗ್ಲೆಂಡ್, ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ ತಿರುಗಿಬಿದ್ದಿವೆ. ಇತ್ತೀಚೆಗೆ ನಡೆದ ವಿಡಿಯೊ ಕಾನ್ಫರೆನ್ಸ್ ಸಭೆಯ ನಂತರ ಐಸಿಸಿಗೆ ಪತ್ರ ಬರೆದಿರುವ ಅವು, ಟೆಸ್ಟ್ ವಿಶ್ವ ಚಾಂಪಿಯನ್ ಶಿಪ್, ಏಕದಿನ ಲೀಗ್ ರದ್ದುಪಡಿಸಿ ಎಂದು ಆಗ್ರಹಿಸಿವೆ.
ಟೆಸ್ಟ್ ಹಾಗೂ ಏಕದಿನ ವಿಶ್ವ ಲೀಗ್ ಆಯೋಜನೆಯಿಂದ ಸದಸ್ಯ ರಾಷ್ಟ್ರಗಳು ಪರಸ್ಪರ ದ್ವಿಪಕ್ಷೀಯ ಸರಣಿ ಆಯೋಜಿಸುವುದು ಸಾಧ್ಯವಾಗುವುದಿಲ್ಲ, ಅವನ್ನು ರದ್ದುಪಡಿಸಿ ಎಂದು ಆಗ್ರಹಿಸಿವೆ. ವಾಸ್ತವವಾಗಿ ಇದುವರೆಗೆ ದ್ವಿಪಕ್ಷೀಯ ಸರಣಿಗಳನ್ನು ಸದಸ್ಯ ರಾಷ್ಟ್ರಗಳೇ ಆಯೋಜಿಸುತ್ತಿದ್ದವು.
ಈಗ ಅದನ್ನು ಐಸಿಸಿಯೇ ಬೇರೆ ಬೇರೆ ರೂಪದಲ್ಲಿ, ಕಾರಣಗಳಲ್ಲಿ ಆಯೋಜಿಸಲು ಹೊರಟಿದೆ. ಆಗ ಆದಾಯ ಅದಕ್ಕೇ ಬರುತ್ತದೆ. ಇದು ಕ್ರಿಕೆಟ್ ಸಂಸ್ಥೆಗಳಿಗೆ ಚಿಂತೆಗೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.