ಮತ್ತೆ ಮಿಂಚಿದ ಪ್ರದೀಪ್ ನರ್ವಾಲ್: ಪಾಟ್ನಾ ಪೈರೇಟ್ಸ್ ಫೈನಲಿಗೆ
Team Udayavani, Oct 27, 2017, 7:59 AM IST
ಚೆನ್ನೈ: ಪ್ರದೀಪ್ ನರ್ವಾಲ್ ಅವರ ಸೂಪರ್ ರೈಡ್ನ ನೆರವಿನಿಂದ ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡವು ಪ್ರೊ ಕಬಡ್ಡಿ ಲೀಗ್ನ ಐದರ ಚೆನ್ನೈಯಲ್ಲಿ ಗುರುವಾರ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ ತಂಡವನ್ನು 47-44 ಅಂಕಗಳಿಂದ ರೋಮಾಂಚಕವಾಗಿ ಸೋಲಿಸಿ ಫೈನಲಿಗೇರಿತು.
ಶನಿವಾರ ನಡೆಯುವ ಪ್ರಶಸ್ತಿ ಹೋರಾಟದಲ್ಲಿ ಪಾಟ್ನಾ ಪೈರೇಟ್ಸ್ ತಂಡವು ಗುಜರಾತ್ ಫಾರ್ಚೂನ್ಸ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. “ಎ’ ಬಣದ ಅಗ್ರಸ್ಥಾನಿಯಾಗಿದ್ದ ಗುಜರಾತ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಬೆಂಗಾಲ್ ತಂಡವನ್ನು 42-17 ಅಂಕಗಳಿಂದ ಸುಲಭವಾಗಿ ಮಣಿಸಿ ಫೈನಲಿಗೇರಿತ್ತು. ರೈಡ್ ಮತ್ತು ರಕ್ಷಣೆಯಲ್ಲಿ ಅಮೋಘ ನಿರ್ವಹಣೆ ನೀಡುತ್ತಿರುವ ಕನ್ನಡಿಗ ಸುಕೇಶ್ ಹೆಗ್ಡೆ ಅವರನ್ನು ಒಳಗೊಂಡ ಗುಜರಾತ್ ಫೈನಲ್ನಲ್ಲಿ ಪ್ರಶಸ್ತಿ ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸಲಿದೆ.
ಹಾಲಿ ಚಾಂಪಿಯನ್ ಪಾಟ್ನಾಗೆ ಫೈನಲಿಗೇರುವ ಹಾದಿ ಸುಗಮವಾಗಿರಲಿಲ್ಲ. ಎರಡು ಎಲಿಮಿನೇಟರ್ ಮತ್ತು ಒಂದು ಕ್ವಾಲಿಫೈಯರ್ನಲ್ಲಿ ಗೆಲ್ಲುವ ಮೂಲಕ ಪಾಟ್ನಾ ಪ್ರಶಸ್ತಿಯನ್ನು ತನ್ನಲ್ಲಿ ಉಳಿಸಿಕೊಳ್ಳುವ ವಿಶ್ವಾಸ ಮೂಡಿಸಿದೆ. ಈ ಮೂರು ಪಂದ್ಯ ಗೆಲ್ಲುವಲ್ಲಿ ಪ್ರದೀಪ್ ಅವರ ಭರ್ಜರಿ ರೈಡಿಂಗ್ ಪ್ರಮುಖ ಕಾರಣವಾಗಿದೆ.
ಪಂದ್ಯವೊಂದರಲ್ಲಿ ಗರಿಷ್ಠ ಸಹಿತ ಪ್ರೊ ಕಬಡ್ಡಿ ಲೀಗ್ನಲ್ಲಿ ಅತ್ಯಧಿಕ ರೈಡ್ ಅಂಕ ಗಳಿಸಿದ ದಾಖಲೆ ಹೊಂದಿರುವ ಪ್ರದೀಪ್ ಸೂಪರ್ ಪ್ಲೇ ಆಫ್ನ ಎರಡು ಎಲಿಮಿನೇಟರ್ ಪಂದ್ಯಗಳಲ್ಲಿ ಹರಿಯಾಣ ಸ್ಟೀಲರ್ ಮತ್ತು ಪುನೇರಿ ಪಲ್ಟಾನ್ಸ್ ವಿರುದ್ಧ ಪಾಟ್ನಾ ಗೆಲ್ಲಲು ಕಾರಣರಾಗಿದ್ದರು. ಗುರುವಾರ ಬೆಂಗಾಲ್ ವಿರುದ್ಧವೂ ಪ್ರದೀಪ್ 36 ರೈಡ್ನಲ್ಲಿ 23 ಅಂಕ ಪಡೆದು ತಂಡ ಮೇಲುಗೈ ಸಾಧಿಸಲು ನೆರವಾಗಿದ್ದರು. ಬೆಂಗಾಲ್ ತಂಡದ ಮಣಿಂದರ್ ಸಿಂಗ್ 17 ಅಂಕ ಪಡೆದರೂ ತಂಡ ಗೆಲುವು ಕಾಣಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ
Cyclone Fengal: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ತಮಿಳುನಾಡಲ್ಲಿ 3 ದಿನ ಭಾರೀ ಮಳೆ
Mangaluru: ಕರಾವಳಿಯಲ್ಲಿ ಈ ಬಾರಿ ವಾಡಿಕೆಯಂತೆ ಚಳಿ
Ayodhya: ರಾಮಮಂದಿರ ಪ್ರಾಣಪ್ರತಿಷ್ಠೆ ಸಂಭ್ರಮ ಜ.22ರ ಬದಲು 11ಕ್ಕೆ!
Cyber Fraud: 1 ತಿಂಗಳು ವೃದ್ದೆ ಡಿಜಿಟಲ್ ಅರೆಸ್ಟ್: 3.8 ಕೋಟಿ ಲೂಟಿ ಹೊಡೆದ ಕಳ್ಳರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.