![City](https://www.udayavani.com/wp-content/uploads/2025/02/City-1-415x249.jpg)
![City](https://www.udayavani.com/wp-content/uploads/2025/02/City-1-415x249.jpg)
Team Udayavani, Dec 13, 2022, 10:34 PM IST
ಮುಂಬೈ: ಮಂಗಳವಾರ ನಡೆದ ಪ್ರೊ ಕಬಡ್ಡಿ 1ನೇ ನಿರ್ಗಮನ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಅದ್ಭುತ ಜಯ ಸಾಧಿಸಿದೆ. ಅದು ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿಯನ್ನು 56-24 ಅಂಕಗಳಿಂದ ಸೋಲಿಸಿ, ಸೆಮಿಫೈನಲ್‌ಗೇರಿದೆ.
ಡಿ.15ರಂದು ನಡೆಯುವ 1ನೇ ಉಪಾಂತ್ಯದಲ್ಲಿ ಬುಲ್ಸ್, ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಎದುರಿಸಲಿದೆ. ಕಳೆದ ಬಾರಿ ಕಪ್ ಗೆದ್ದಿದ್ದ ಡೆಲ್ಲಿ ಈ ಬಾರಿ ನಿರ್ಗಮನ ಸುತ್ತಿನಲ್ಲೇ ನಿರ್ಗಮಿಸಿದೆ.
ಬೆಂಗಳೂರು ಇಡೀ ಪಂದ್ಯದಲ್ಲಿ ಪೂರ್ಣ ನಿಯಂತ್ರಣ ಹೊಂದಿತ್ತು. ಪಂದ್ಯದ ಆರಂಭದ ಕೆಲ ನಿಮಿಷಗಳಲ್ಲೇ ಡೆಲ್ಲಿಯನ್ನು ಆಲೌಟ್ ಮಾಡಿತು. ಪಂದ್ಯದ 5ನೇ ನಿಮಿಷದಲ್ಲಿ ಬುಲ್ಸ್ 13-3ರಿಂದ ಮುನ್ನಡೆ ಸಾಧಿಸಿತ್ತು. ಪಂದ್ಯದ 12ನೇ ನಿಮಿಷದಲ್ಲಿ ಡೆಲ್ಲಿಗೆ ಮತ್ತೂಮ್ಮೆ ಆಘಾತ ಎದುರಾಯಿತು. ಆಗ ಬೆಂಗಳೂರು 24-10ರಿಂದ ಮುನ್ನಡೆ ಸಾಧಿಸಿತ್ತು. ಮೊದಲನೇ ಅವಧಿ ಮುಗಿಯುವಾಗ ಬೆಂಗಳೂರಿನ ಮುನ್ನಡೆ 31-14ರಲ್ಲಿತ್ತು. ಆಗಲೇ ಬುಲ್ಸ್ ಗೆಲ್ಲುವುದು ಖಚಿತವಾಗಿತ್ತು.
ದ್ವಿತೀಯ ಅವಧಿಯಲ್ಲಿ ಇದೇ ಆಟವನ್ನು ಮುಂದುವರಿಸಿದ ಬೆಂಗಳೂರು ಡೆಲ್ಲಿಗೆ ಉಸಿರೆತ್ತಲು ಅವಕಾಶ ನೀಡಲಿಲ್ಲ. ಒಟ್ಟಾರೆಯಾಗಿ 56-24ರ ಅಂತರದಿಂದ ಗೆಲುವು ಸಾಧಿಸಿತು. ಬುಲ್ಸ್‌ನ ಈ ಯಶಸ್ಸಿನಲ್ಲಿ ದಾಳಿಗಾರ ಭರತ್ ಪಾತ್ರ ಮಹತ್ವದ್ದು. ಅವರು 18 ದಾಳಿಗಳಲ್ಲಿ 15 ಅಂಕ ಸಂಪಾದಿಸಿದರು. ಇನ್ನು ಆರಂಭದಿಂದಲೇ ಅಬ್ಬರಿಸತೊಡಗಿದ ವಿಕಾಶ್ ಕಂಡೊಲ 18 ದಾಳಿಗಳಲ್ಲಿ 13 ಅಂಕ ಪಡೆದರು. ಡೆಲ್ಲಿ ಪರ ನಾಯಕ ನವೀನ್ ಕುಮಾರ್ 8 ಅಂಕ ಪಡೆದರೂ, ಅದೇನು ಮಿಂಚಿನ ಆಟವಾಗಿರಲಿಲ್ಲ. ಉಳಿದ ಆಟಗಾರರೂ ವಿಫಲರಾದರು.
ತಮಿಳ್-ಪುನೇರಿ ನಡುವೆ 2ನೇ ಉಪಾಂತ್ಯ
ಮಂಗಳವಾರ ರಾತ್ರಿ ನಡೆದ ಇನ್ನೊಂದು ನಿರ್ಗಮನ ಪಂದ್ಯ ಅತ್ಯಂತ ರೋಚಕವಾಗಿತ್ತು. ನಿಗದಿತ 40 ನಿಮಿಷಗಳಲ್ಲಿ ತಮಿಳ್ ತಲೈವಾಸ್-ಯುಪಿ ಯೋಧಾಸ್ ತಲಾ 36 ಅಂಕ ಗಳಿಸಿ ಸಮಬಲ ಸಾಧಿಸಿದವು. ಕಡೆಗೆ ತಲಾ 5 ರೈಡ್‌ಗಳ ಮೂಲಕ ಫಲಿತಾಂಶ ನಿರ್ಧರಿಸಲಾಯಿತು. ಇಲ್ಲಿ ತಮಿಳ್ ತಂಡ 6, ಯೋಧಾಸ್ 4 ಅಂಕಗಳಿಸಿತು. ಡಿ.15ರಂದು ನಡೆಯುವ 2ನೇ ಸೆಮಿಫೈನಲ್‌ನಲ್ಲಿ ಪುನೇರಿ ಪಲ್ಟಾನ್ ತಂಡವನ್ನು ತಮಿಳ್ ತಲೈವಾಸ್ ಎದುರಿಸಲಿದೆ.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Modern City: ದುಬಾೖ ಮಾದರಿ ದೇಶದಲ್ಲೂ ಫಿನ್‌ಟೆಕ್ ಸಿಟಿ ನಿರ್ಮಾಣ
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
You seem to have an Ad Blocker on.
To continue reading, please turn it off or whitelist Udayavani.