IPL Auction ಕೊನೆಗೂ ಬಿಡ್ಡಿಂಗ್ ಅಖಾಡಕ್ಕಿಳಿದ ಬೆಂಗಳೂರು: ಆರ್ ಸಿಬಿಗೆ ಬಂದ ವಿಂಡೀಸ್ ಬೌಲರ್
Team Udayavani, Dec 19, 2023, 3:33 PM IST
ಮುಂಬೈ: ಐಪಿಎಲ್ ಮಿನಿ ಹರಾಜು ದುಬೈನಲ್ಲಿ ನಡೆಯುತ್ತಿದೆ. ಎಲ್ಲಾ ಹತ್ತು ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರ ಖರೀದಿ ಮಾಡುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತಡವಾಗಿಯಾದರೂ ಆಟಗಾರರ ಖರೀದಿಗೆ ಮುಂದಾಗಿದೆ.
ವೆಸ್ಟ್ ಇಂಡೀಸ್ ಬೌಲರ್ ಅಲ್ಜಾರಿ ಜೋಸೆಫ್ ಅವರನ್ನು ಆರ್ ಸಿಬಿ ಖರೀದಿಸಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪೈಪೋಟಿಯಲ್ಲಿ ಬೆಂಗಳೂರು ತಂಡವು 11.5 ಕೋಟಿ ರೂ ನೀಡಿ ಖರೀದಿಸಿತು.
ಹರಾಜು ಹೈಲೈಟ್ಸ್
ಹರಾಜಿಗೆ ಬಂದ ಮೊದಲ ಹೆಸರು ವೆಸ್ಟ್ ಇಂಡೀಸ್ ನ ರೊಮನ್ ಪೊವೆಲ್ ಅವರದ್ದು. ರಾಜಸ್ಥಾನ ರಾಯಲ್ಸ್ ತಂಡವು ಅವರನ್ನು 7.4 ಕೋಟಿ ರೂಗೆ ಖರೀದಿ ಮಾಡಿತು. ಇಂಗ್ಲೆಂಡ್ ನ ಹ್ಯಾರಿ ಬ್ರೂಕ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು 4 ಕೋಟಿ ರೂ ನೀಡಿ ಖರೀದಿ ಮಾಡಿತು.
ವಿಶ್ವಕಪ್ ಹೀರೋ ಟ್ರಾವಿಸ್ ಹೆಡ್ ಖರೀದಿಗೆ ಚೆನ್ನೈ ಮತ್ತು ಹೈದರಾಬಾದ್ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿತು. ಕೊನೆಗೆ ಹೈದರಾಬಾದ್ ತಂಡವು 6.8 ಕೋಟಿ ರೂ ಗೆ ಟ್ರಾವಿಸ್ ರನ್ನು ಖರೀದಿಸಿತು. ಲಂಕಾ ಆಲ್ ರೌಂಡರ್ ವಾನಿಂದು ಹಸರಂಗ ಅವರನ್ನು ಹೈದರಾಬಾದ್ ಮೂಲ ಬೆಲೆ 1.5 ಕೋಟಿ ರೂ ಖರೀದಿಸಿತು.
ಕಿವೀಸ್ ಬ್ಯಾಟಿಂಗ್ ಸೆನ್ಸೇಶನ್ ರಚಿನ್ ರವೀಂದ್ರ ಅವರು ಭಾರಿ ಹಣ ಪಡೆಯಬಹುದು ಎಂದು ಭಾವಿಸಲಾಗಿತ್ತು. ಆದರೆ ಹರಾಜಿನಲ್ಲಿ ಹೆಚ್ಚಿನ ಬೇಡಿಕೆ ಸಿಗಲಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಚಿನ್ ಅವರನ್ನು 1.8 ಕೋಟಿ ರೂ ಗೆ ತನ್ನ ತೆಕ್ಕೆಗೆ ಹಾಕಿಕೊಂಡಿತು. ಶಾರ್ದೂಲ್ ಠಾಕೂರ್ ಅವರನ್ನು ನಾಲ್ಕು ಕೋಟಿ ಗೆ ಚೆನ್ನೈ ಖರೀದಿಸಿತು.
Holds the IPL record for the best bowling figures ever 🔥
Alzarri is our first pick of the #IPL2024 auction! 👏#PlayBold #BidForBold #IPLAuction #ನಮ್ಮRCB #NowARoyalChallenger pic.twitter.com/eRTO5d1OA4
— Royal Challengers Bangalore (@RCBTweets) December 19, 2023
ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಅವರು ಉತ್ತಮ ಬೇಡಿಕೆ ಪಡೆದರು. ಚೆನ್ನೈ, ಆರ್ ಸಿಬಿ, ಹೈದರಾಬಾದ್ ನಡುವೆ ಪೈಪೋಟಿ ನಡೆಯಿತು. ಕೊನೆಗೆ ಕಮಿನ್ಸ್ ಅವರು ದಾಖಲೆಯ 20.5 ಕೋಟಿ ರೂ ಗೆ ಹೈದರಾಬಾದ್ ತಂಡದ ಪಾಲಾದರು. ಇದು ಐಪಿಎಲ್ ಇತಿಹಾಸದಲ್ಲಿ ಆಟಗಾರ ಪಡೆದ ಅತಿ ಹೆಚ್ಚು ಹಣ
ರೋಮನ್ ಪೊವೆಲ್: ರಾಜಸ್ಥಾನ: 7.4 ಕೋಟಿ
ಹ್ಯಾರಿ ಬ್ರೂಕ್: ಡೆಲ್ಲಿ: 4 ಕೋಟಿ
ಟ್ರಾವಿಸ್ ಹೆಡ್: ಹೈದರಾಬಾದ್: 6.8 ಕೋಟಿ
ವಾನಿಂದು ಹಸರಂಗ: ಹೈದರಾಬಾದ್: 4.5 ಕೋಟಿ
ರಚಿನ್ ರವೀಂದ್ರ: ಚೆನ್ನೈ: 1.8 ಕೋಟಿ
ಶಾರ್ದೂಲ್ ಠಾಕೂರ್: ಚೆನ್ನೈ: 4 ಕೋಟಿ
ಅಜ್ಮತುಲ್ಲಾ ಓಮರ್ಝೈ: ಗುಜರಾತ್: 50 ಲಕ್ಷ
ಪ್ಯಾಟ್ ಕಮಿನ್ಸ್: ಹೈದರಾಬಾದ್: 20.5 ಕೋಟಿ
ಗೆರಾಲ್ಡ್ ಕೋಟ್ಜಿ: ಮುಂಬೈ: 5 ಕೋಟಿ
ಹರ್ಷಲ್ ಪಟೇಲ್ : ಪಂಜಾಬ್: 11.75 ಕೋಟಿ
ಡ್ಯಾರೆಲ್ ಮಿಚೆಲ್: ಚೆನ್ನೈ: 14 ಕೋಟಿ
ಕ್ರಿಸ್ ವೋಕ್ಸ್: ಪಂಜಾಬ್: 4.2 ಕೋಟಿ
ಟ್ರಸ್ಟನ್ ಸ್ಟಬ್ಸ್: ಡೆಲ್ಲಿ: 50 ಲಕ್ಷ
ಕೆಎಸ್ ಭರತ್: ಕೋಲ್ಕತ್ತಾ; 50 ಲಕ್ಷ
ಚೇತನ್ ಸಕಾರಿಯಾ: ಕೋಲ್ಕತ್ತಾ; 50 ಲಕ್ಷ
ಅಲ್ಜಾರಿ ಜೋಸೆಫ್: ಬೆಂಗಳೂರು; 11.50 ಕೋಟಿ
ಉಮೇಶ್ ಯಾದವ್: ಗುಜರಾತ್: 5.80 ಕೋಟಿ
ಶಿವಂ ಮಾವಿ: ಲಕ್ನೋ: 6.4 ಕೋಟಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.