Indian ಆ್ಯತ್ಲೀಟ್‌ಗಳಿಗೆ ಉತ್ಕೃಷ್ಟ ಸೌಕರ್ಯ: ಪ್ರಧಾನಿ ಮೋದಿ
Team Udayavani, Nov 2, 2023, 12:28 AM IST
ಹೊಸದಿಲ್ಲಿ: ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಇದಕ್ಕೆ ಕ್ರೀಡಾಕ್ಷೇತ್ರವೂ ಹೊರತಾಗಿಲ್ಲ. ಕ್ರೀಡಾ ಪಟು ಕೇಂದ್ರಿತ ಕೇಂದ್ರ ಸರಕಾರವು ಕ್ರೀಡಾಪಟುಗಳಿಗೆ ಎದುರಾಗುವ ಎಲ್ಲ ಅಡೆತಡೆಗಳನ್ನು ತೆರವುಗೊಳಿಸಲು ಶಕ್ತಿಮೀರಿ ಪ್ರಯತ್ನಿಸಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಹ್ಯಾಂಗ್‌ಝೂ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ದಾಖಲೆ 111 ಪದಕ ಗೆದ್ದ ಪ್ಯಾರಾ ಆ್ಯತ್ಲೀಟ್ ಗಳ ಸಮ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ ಅವರು ಆ್ಯತ್ಲೀಟ್‌ಗಳಿಗೆ ಉತ್ಕೃಷ್ಟ ಸೌಕರ್ಯ, ಸೌಲಭ್ಯಗಳನ್ನು ನೀಡಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದವರು ತಿಳಿಸಿದ್ದಾರೆ.
ಇಂದು ನಾವು ದೇಶದಲ್ಲಿ ಬದಲಾವಣೆಯ ಗಾಳಿಯನ್ನು ನೋಡುತ್ತಿದ್ದೇವೆ. ಈ ಮೊದಲು ಯಾರಾದರೂ ಕ್ರೀಡೆಯಲ್ಲಿ ಪಾಲ್ಗೊಳ್ಳುವಾದ ಜನರು ಅದನ್ನು ಜೀವನದ ಒಂದು ಭಾಗವಾಗಿ ಪರಿಗಣಿಸುತ್ತಿರಲಿಲ್ಲ. ಆದರೆ ಈಗ ವಿಷಯ ಬದಲಾಗುತ್ತಿದೆ. ಕ್ರೀಡೆಯನ್ನು ಕೂಡ ವೃತ್ತಿಯಾಗಿ ಬದಲಾಗುತ್ತಿದೆ ಮತ್ತು ಸರಕಾರವು ಕ್ರೀಡಾಪಟುಗಳ ನೆರವಿಗೆ ಸದಾ ಇರಲಿದೆ ಎಂದರು.
“2030ರ ಯೂತ್ ಒಲಿಂಪಿಕ್ ಕ್ರೀಡಾಕೂಟ ಮತ್ತು 2036ರ ಬೇಸಗೆ ಒಲಿಂಪಿಕ್ಸ್ ಗೆ ಭಾರತ ಆತಿಥ್ಯ ವಹಿಸುವ ನಿಟ್ಟಿನಲ್ಲಿ ಸರಕಾರದ ಬದ್ಧತೆಯನ್ನು ಪ್ರಧಾನಿ ಪುನರುಚ್ಚರಿಸಿದರು. ದೇಶವು ಯಾವಾಗಲೂ ಉತ್ತಮ ಕ್ರೀಡಾಪಟುಗಳನ್ನು ಉತ್ಪಾದಿಸುತ್ತಿತ್ತು ಆದರೆ ಹಣಕಾಸಿನ ನೆರವು ಕೊರತೆಯಿಂದಾಗಿ ಕ್ರೀಡಾಪಟುಗಳು ಮಿಂಚಲು ವಿಫಲರಾಗುತ್ತಿದ್ದರು ಎಂದು ಅವರು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.