ನಾಗ್ಪುರ ಟೆಸ್ಟ್ ನಲ್ಲಿ ಆಸೀಸ್ ಫೇಲ್; ಸ್ಪಿನ್ ಜಾಲಕ್ಕೆ ಸಿಲುಕಿದ ಕಾಂಗರೂ
ಟೀಂ ಇಂಡಿಯಾಗೆ ಭರ್ಜರಿ ಜಯ
Team Udayavani, Feb 11, 2023, 2:22 PM IST
ನಾಗ್ಪುರ: ಬಾರ್ಡರ್- ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಶುಭಾರಂಭ ಮಾಡಿದೆ. ನಾಗ್ಪುರ ಟೆಸ್ಟ್ ಪಂದ್ಯವು ಮೂರೇ ದಿನಕ್ಕೆ ಅಂತ್ಯವಾಗಿದ್ದು, ರೋಹಿತ್ ಶರ್ಮಾ ಬಳಗವು ಇನ್ನಿಂಗ್ಸ್ ಮತ್ತು 132 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ.
233 ರನ್ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಆಸೀಸ್ ತಂಡವು 91 ರನ್ ಗೆ ಸರ್ವಪತನಗೊಂಡಿತು. ಈ ಜಯದೊಂದಿಗೆ ಭಾರತವು ನಾಲ್ಕು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿತು.
ಎರಡನೇ ದಿನದಾಟದ ಅಂತ್ಯಕ್ಕೆ ಏಳು ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿದ್ದಲ್ಲಿಂದ ಆಟ ಮುಂದುವರಿಸಿದ ಭಾರತ ತಂಡವು ಭರ್ತಿ 400 ರನ್ ಗಳಿಸಿತು. ಜಡೇಜಾ 70 ರನ್ ಗಳಿಸಿ ಔಟಾದರೆ, ದಿಟ್ಟ ಹೋರಾಟ ಮುಂದುವರಿಸಿದ ಅಕ್ಷರ್ ಪಟೇಲ್ 84 ರನ್ ಮಾಡಿದರು. ಅದರಲ್ಲೂ ಶಮಿ ಜೊತೆ 52 ರನ್ ಜೊತೆಯಾಟವಾಡಿದರು. ಭರ್ಜರಿಯಾಗಿ ಬ್ಯಾಟ್ ಬೀಸಿದ ಶಮಿ ಮೂರು ಸಿಕ್ಸರ್ ಜೊತೆಗೆ 37 ರನ್ ಮಾಡಿದರು. ಆಸೀಸ್ ಪರ ಪದಾರ್ಪಣೆ ಮಾಡಿದ ಆಟಗಾರ ಮರ್ಫಿ ಏಳು ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ:ಕುರುಗೋಡು: ಬೇಡಿಕೆಗಳು ಈಡೇರಿಸುವುದಾಗಿ ಭರವಸೆಯಲ್ಲೇ ಕೈ ತೊಳೆದುಕೊಂಡ ಸಚಿವರು, ಶಾಸಕರು.!
233 ರನ್ ಹಿನ್ನಡೆಯಿಂದ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸೀಸ್ ಗೆ ಭಾರತೀಯ ಸ್ಪಿನ್ನರ್ ಗಳು ಕಾಡಿದರು. ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ದಾಳಿಗೆ ನಲುಗಿದ ಕಾಂಗರೂ ನಾಡಿನ ಬ್ಯಾಟರ್ ಗಳು ಸುಲಭದಲ್ಲಿ ವಿಕೆಟ್ ಚೆಲ್ಲಿದರು. ಒಂದಷ್ಟು ಪ್ರತಿರೋಧ ತೋರಿದ ಸ್ಮಿತ್ ಅಜೇಯ 25 ರನ್ ಮಾಡಿದರು. ಅಶ್ವಿನ್ ಐದು ವಿಕೆಟ್, ಜಡೇಜಾ ಮತ್ತು ಶಮಿ ತಲಾ ಎರಡು ವಿಕೆಟ್ ಕಿತ್ತರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.