BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
Team Udayavani, Nov 21, 2024, 11:17 AM IST
ಪರ್ತ್: ಬಹುನಿರೀಕ್ಷಿತ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ ಶುಕ್ರವಾರ (ನ.22) ಬೆಳಗ್ಗೆ ಆರಂಭವಾಗಲಿದೆ. ಗುರುವಾರ ಎರಡೂ ತಂಡದ ನಾಯಕರು ಟ್ರೋಫಿ ಎದುರು ಪೋಸ್ ಕೊಟ್ಟಿದ್ದಾರೆ. ಎರಡು ಬಲಾಢ್ಯ ತಂಡಗಳ ಟೆಸ್ಟ್ ಸರಣಿಯನ್ನು ಕ್ರಿಕೆಟ್ ವಿಶ್ವ ಎದುರು ನೋಡುತ್ತಿದೆ.
2024-25ರ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯು ನವೆಂಬರ್ 22 2024ರಿಂದ 2025ರ ಜನವರಿ 7ರವರೆಗೆ ನಡೆಯಲಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಸರಣಿಯಲ್ಲಿ ಐದು ಪಂದ್ಯಗಳು ನಡೆಯಲಿದೆ. 1991-92ರ ಬಳಿಕ ಮೊದಲ ಬಾರಿಗೆ ನಾಲ್ಕು ಪಂದ್ಯಗಳ ಸರಣಿಯ ಬದಲು ಐದು ಪಂದ್ಯಗಳು ನಡೆಯಲಿದೆ.
ತವರಿನ ಟೆಸ್ಟ್ ಸರಣಿಯಲ್ಲಿ ಸೋಲು ಕಂಡಿರುವ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಲುಪಲು ಇದು ಅತ್ಯಂತ ಪ್ರಮುಖ ಸರಣಿ. ಫೈನಲ್ ನಲ್ಲಿ ಖಚಿತ ಸ್ಥಾನವನ್ನು ಭದ್ರಪಡಿಸಿಕೊಳ್ಳಲು, ಭಾರತ ಆಸ್ಟ್ರೇಲಿಯಾವನ್ನು 4-1 ಅಂತರದಿಂದ ಸೋಲಿಸಬೇಕಾಗಿದೆ; 3-2 ಗೆಲುವು ಕೂಡ ಅವರ ಫೈನಲ್ ತಲುಪಲು ಸಹಾಯ ಮಾಡಬಹುದು.
ಆಸ್ಟ್ರೇಲಿಯಾದಲ್ಲಿ, ಭಾರತವು 52 ಟೆಸ್ಟ್‌ಗಳನ್ನು ಆಡಿದೆ, ಕೇವಲ ಒಂಬತ್ತು ಗೆದ್ದಿದ್ದು, 30 ರಲ್ಲಿ ಸೋತಿದೆ. ವಿಶೇಷವೆಂದರೆ ಆ ಒಂಬತ್ತು ಜಯಗಳಲ್ಲಿ ನಾಲ್ಕು ಅವರ ಕೊನೆಯ ಎರಡು ಪ್ರವಾಸಗಳಲ್ಲಿ ಬಂದಿವೆ.
ಬಾರ್ಡರ್-ಗಾವಸ್ಕರ್ ಸರಣಿ ವೇಳಾಪಟ್ಟಿ
1 ನೇ ಟೆಸ್ಟ್: ಆಪ್ಟಸ್ ಸ್ಟೇಡಿಯಂ, ಪರ್ತ್
ದಿನಾಂಕ: 22-26 ನವೆಂಬರ್
ಸಮಯ: 10:20 AM ಸ್ಥಳೀಯ / 7:50 AM IST
2ನೇ ಟೆಸ್ಟ್: ಅಡಿಲೇಡ್ ಓವಲ್ (ಹಗಲು-ರಾತ್ರಿ)
ದಿನಾಂಕಗಳು: ಡಿಸೆಂಬರ್ 6-10
ಸಮಯ: 2:30 PM ಸ್ಥಳೀಯ / 9:30 AM IST
3ನೇ ಟೆಸ್ಟ್: ಗಬ್ಬಾ, ಬ್ರಿಸ್ಬೇನ್
ದಿನಾಂಕಗಳು: ಡಿಸೆಂಬರ್ 14-18
ಸಮಯ: 10:20 AM ಸ್ಥಳೀಯ / 5:50 AM IST
4 ನೇ ಟೆಸ್ಟ್: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (ಬಾಕ್ಸಿಂಗ್ ಡೇ ಟೆಸ್ಟ್)
ದಿನಾಂಕ: 26-30 ಡಿಸೆಂಬರ್
ಸಮಯ: 10:30 AM ಸ್ಥಳೀಯ / 5:00 AM IST
5 ನೇ ಟೆಸ್ಟ್: ಸಿಡ್ನಿ ಕ್ರಿಕೆಟ್ ಮೈದಾನ
ದಿನಾಂಕ: 3-7 ಜನವರಿ
ಸಮಯ: 10:30 AM ಸ್ಥಳೀಯ / 5:00 AM IST
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಮತ್ತು ಹಾಟ್‌ಸ್ಟಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kota; ಮತ್ತೊಬ್ಬ ವಿದ್ಯಾರ್ಥಿ ಆತ್ಮಹ*ತ್ಯೆ: ವರ್ಷದ 17ನೇ ಕೇಸು
C.T. Ravi ಗೈರು; ಸಾಹಿತ್ಯ ಕ್ಷೇತ್ರದಲ್ಲಿ ರಾಜಕೀಯ ಮಾಡಬಾರದು: ಎಚ್.ಕೆ.ಪಾಟೀಲ್
ಮಮ್ತಾಜ್ ಅಲಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಜಾಮೀನು ವಿಚಾರಣೆ ಅರ್ಜಿ ಮುಂದೂಡಿಕೆ
Kannada; ಬಳ್ಳಾರಿಯಲ್ಲಿ 88ನೇ ಕನ್ನಡ ಸಾಹಿತ್ಯ ಸಮ್ಮೇಳನ
BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.