BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Team Udayavani, Nov 22, 2024, 1:00 PM IST
ಪರ್ತ್: ಬಾರ್ಡರ್ – ಗಾವಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್ ಸರಣಿಯ ಮೊದಲ ದಿನವೇ ವಿವಾದವೊಂದು ಆರಂಭವಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪರ್ತ್ ಟೆಸ್ಟ್ (Perth Test) ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ ಕೆಎಲ್ ರಾಹುಲ್ (KL Rahul) ಅವರಿಗೆ ನೀಡಿದ ತೀರ್ಪು ಇದೀಗ ವಿವಾದಕ್ಕೆ ಕಾರಣವಾಗಿದೆ.
ರೋಹಿತ್ ಅಲಭ್ಯತೆಯ ಕಾರಣದಿಂದ ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಉತ್ತಮ ಲಯದಲ್ಲಿ ಕಂಡರು. ಉತ್ತಮ ರಕ್ಷಣಾತ್ಮಕ ಆಟವಾಡುತ್ತಿದ್ದ ರಾಹುಲ್ 74 ಎಸೆತಗಳಲ್ಲಿ 26 ರನ್ ಗಳಿಸಿದರು. ಈ ವೇಳೆ ಮಿಚಲ್ ಸ್ಟಾರ್ಕ್ ಎಸೆತವೊಂದು ರಾಹುಲ್ ರನ್ನು ವಂಚಿಸಿ ಕೀಪರ್ ಅಲೆಕ್ಸ್ ಕ್ಯಾರಿ ಬೊಗಸೆ ಸೇರಿತು.
ಆಸ್ಟ್ರೇಲಿಯನ್ ಫೀಲ್ಡರ್ ಗಳು ಅಪೀಲ್ ಮಾಡಿದರು. ಫೀಲ್ಡ್ ಅಂಪೈರ್ ತೀರ್ಪನ್ನು ಪ್ರಶ್ನಿಸಿ ನಾಯಕ ಕಮಿನ್ಸ್ ಮೂರನೇ ಅಂಪೈರ್ ಮೊರೆ ಹೋದರು.
ಪರಿಶೀಲನೆ ವೇಲೆ ಚೆಂಡು ಬ್ಯಾಟ್ ನ ಹಿಂದೆ ಹೋಗುತ್ತಿದ್ದಂತೆ ಸ್ನಿಕೋಮೀಟರ್ ಸ್ಪೈಕ್ ಅನ್ನು ತೋರಿಸಿತು, ಆದರೆ ಮೂರನೇ ಅಂಪೈರ್ ಆತುರದಲ್ಲಿದ್ದಂತೆ ತೋರುತ್ತಿದ್ದು, ಎಲ್ಲಾ ಕೋನಗಳನ್ನು ಪರಿಶೀಲಿಸದೆ ಔಟ್ ಎಂದು ತೀರ್ಪು ನೀಡಿದರು. ಪ್ಯಾಡ್ ಗೆ ಬ್ಯಾಟ್ ಬಡಿದ ಕಾರಣ ಸ್ಪೈಕ್ ತೋರಿದೆ ಎಂದು ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ.
A decision that got everyone talking! 😳
OUT or NOT OUT? What’s your take on #KLRahul‘s dismissal? 👀
📺 #AUSvINDOnStar 👉 1st Test, Day 1, LIVE NOW! #AUSvIND #ToughestRivalry pic.twitter.com/r4osnDOLyG
— Star Sports (@StarSportsIndia) November 22, 2024
ರಾಹುಲ್ ಕೂಡಾ ಮೂರನೇ ಅಂಪೈರ್ ತೀರ್ಮಾನಕ್ಕೆ ಅಸಮಾಧಾನಗೊಂಡರು. ಪೆವಿಲಿಯನ್ ಗೆ ಮರಳಿದ ಅವರ ಮುಖಭಾವದಲ್ಲಿ ಅದು ಸ್ಪಷ್ಟವಾಗಿತ್ತು.
ಇದು “ತಂತ್ರಜ್ಞಾನದ ಕಳಪೆ ಪೂರೈಕೆ” ಎಂದು ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಹೇಳಿದರು. ಟಿವಿ ಅಂಪೈರ್ ತನಗೆ ಬಲವಾದ ಸಾಕ್ಷ್ಯ ಸಿಗದಿದ್ದಾಗ ತೀರ್ಪು ಬದಲಿಸಬಾರದಿತ್ತು ಎಂದು ಹೇಳಿದರು.
ಚಾನೆಲ್ ಸೆವೆನ್ ಪ್ರಸಾರದಲ್ಲಿ ಮಾಜಿ ಅಂಪೈರ್ ಸೈಮನ್ ಟೌಫೆಲ್ ಮಾತನಾಡಿದ ಅವರು, “ಅಂಪೈರ್‌ಗಳು ನಿರ್ಣಾಯಕ ಪುರಾವೆಗಳನ್ನು ಹುಡುಕುತ್ತಿದ್ದಾರೆ. ಅಂಪೈರ್ ಕೇಳುತ್ತಿದ್ದ ಕೆಲವು ಕ್ಯಾಮೆರಾ ಕೋನಗಳನ್ನು ಅವರು ಪಡೆಯಲಿಲ್ಲ. ರಿಚರ್ಡ್ ಇಲ್ಲಿಂಗ್‌ವರ್ತ್ ಅಲ್ಲಿ ಕಠಿಣ ಕೆಲಸವನ್ನು ಹೊಂದಿದ್ದರು, ಆದರೆ ಈ ಕ್ಯಾಮೆರಾ ಕೋನವು ಬಹುಶಃ ನನಗೆ ಉತ್ತಮವಾಗಿದೆ, ಇದು ಚೆಂಡು ಹೊರಗಿನ ಅಂಚನ್ನು ತಾಗುತ್ತಿದೆ ಎಂದು ತೋರಿಸುತ್ತದೆ. ನನ್ನ ದೃಷ್ಟಿಯಲ್ಲಿ ಚೆಂಡು ಹೊರ ಅಂಚಿಗೆ ಸ್ಪರ್ಷಿಸಿದೆ. ಅದು ಸ್ಕಫ್ ಗುರುತುಗಳನ್ನು ಉಂಟುಮಾಡಿದೆ, ಆದರೆ ನಂತರ ಬ್ಯಾಟ್ ಪ್ಯಾಡ್ ಗೆ ತಾಗಿದೆ. ಹಾಗಾಗಿ ಬ್ಯಾಟರ್‌ನ ದೃಷ್ಟಿಕೋನದಿಂದ ನಾನು ಯೋಚಿಸುತ್ತೇನೆ, ಅವರು ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಂತೆ ದೊಡ್ಡ ಪರದೆಯ ಮೇಲೆ ಸಾಕ್ಷ್ಯವನ್ನು ನೋಡಲು ಬಯಸುತ್ತಿದ್ದಾರೆ. ರಾಹುಲ್ ಮತ್ತು ರಿಚರ್ಡ್ ಕೆಟಲ್‌ಬರೋ ಅವರ ಮನಸ್ಸಿನಲ್ಲಿ ಪ್ರಶ್ನಾರ್ಥಕ ಚಿಹ್ನೆ ಇದೆ. ಊಟದ ವಿರಾಮದಲ್ಲಿ ಅಂಪೈರ್‌ಗಳ ಕೋಣೆಯಲ್ಲಿ ಆಸಕ್ತಿದಾಯಕ ಚರ್ಚೆ ನಡೆಯಲಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.