ಕೋಲ್ಕತ್ತಾ ನೈಟ್ ರೈಡರ್ಸ್ ಪಾಳಯ ಸೇರಿದ ಟೀಂ ಇಂಡಿಯಾ ಮಾಜಿ ಕೋಚ್
Team Udayavani, Jan 15, 2022, 10:48 AM IST
ಕೋಲ್ಕತ್ತಾ: ಕೆಲವೇ ವಾರಗಳಲ್ಲಿ ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮೆಗಾ ಹರಾಜು ನಡೆಯಲಿದೆ. ಹೀಗಾಗಿ ತಂಡಗಳು ತಯಾರಿ ನಡೆಸುತ್ತಿದೆ. ಇದೇ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ತನ್ನ ಸಹಾಯಕ ಸಿಬ್ಬಂದಿ ಬಲವನ್ನು ಹೆಚ್ಚಿಸುತ್ತಿದೆ.
ರವಿ ಶಾಸ್ತ್ರಿಯೊಂದಿಗೆ ಟೀಂ ಇಂಡಿಯಾದಲ್ಲಿ ಬೌಲಿಂಗ್ ಕೋಚ್ ಆಗಿದ್ದ ಭರತ್ ಅರುಣ್ ಅವರು ಕೆಕೆಆರ್ ಪಾಳಯ ಸೇರಿದ್ದಾರೆ. ಕೋಲ್ಕತ್ತಾ ತಂಡದಲ್ಲಿ ಭರತ್ ಅರುಣ್ ಅವರು ಬೌಲಿಂಗ್ ಕೋಚ್ ಆಗಿರಲಿದ್ದಾರೆ ಎಂದು ಫ್ರಾಂಚೈಸಿ ಸ್ಪಷ್ಟಪಡಿಸಿದೆ. ಇದುವರೆಗೆ ಕೈಲ್ ಮಿಲ್ಸ್ ಅವರು ಕೆಕೆಆರ್ ಬೌಲಿಂಗ್ ಕೋಚ್ ಆಗಿದ್ದರು.
ದೇಶೀಯ ಕ್ರಿಕೆಟ್‌ನಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸಿದ ಮತ್ತು ಭಾರತಕ್ಕಾಗಿ 2 ಟೆಸ್ಟ್ ಮತ್ತು 4 ಏಕದಿನ ಪಂದ್ಯಗಳನ್ನು ಆಡಿರುವ ಭರತ್ ಅರುಣ್ ಇತ್ತೀಚಿನವರೆಗೂ ರವಿಶಾಸ್ತ್ರಿ ಮತ್ತು ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಒಳಗೊಂಡ ಭಾರತದ ಪ್ರಸಿದ್ಧ ಕೋಚಿಂಗ್ ಲೈನ್-ಅಪ್‌ನ ಭಾಗವಾಗಿದ್ದರು. ಆಟದ ದಿನಗಳ ನಂತರ ಭರತ್ ಅರುಣ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬೌಲಿಂಗ್ ತರಬೇತುದಾರರಾಗಿ ಕೆಲಸ ಮಾಡಿದ್ದರು ಮತ್ತು ಆಸ್ಟ್ರೇಲಿಯಾದಲ್ಲಿ 2012 ರಲ್ಲಿ ವಿಶ್ವಕಪ್ ಗೆಲುವಿಗೆ ಅಂಡರ್ 19 ತಂಡಕ್ಕೆ ತರಬೇತುದಾರರಾಗಿದ್ದರು.
ಇದನ್ನೂ ಓದಿ:ರಹಾನೆ- ಪೂಜಾರ ಭವಿಷ್ಯದ ಬಗ್ಗೆ ಹೇಳುವುದು ನನ್ನ ಕೆಲಸವಲ್ಲ: ವಿರಾಟ್
“ನಾನು ತುಂಬಾ ಉತ್ಸುಕನಾಗಿದ್ದೇನೆ ಮತ್ತು ನೈಟ್ ರೈಡರ್ಸ್‌ನಂತಹ ಅತ್ಯಂತ ಯಶಸ್ವಿ ಫ್ರಾಂಚೈಸಿಯ ಭಾಗವಾಗಲು ಎದುರು ನೋಡುತ್ತಿದ್ದೇನೆ” ಎಂದು ಅರುಣ್ ತನ್ನ ನೇಮಕಾತಿಯ ಕುರಿತು ಹೇಳಿದರು.
? ???????????? ?
We are delighted to introduce you to our new bowling coach! Welcome to the Knight Riders family, Bharat Arun ??#KKR #AmiKKR #IPL2022 #BharatArun pic.twitter.com/MpAXJMa67C
— KolkataKnightRiders (@KKRiders) January 14, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.