ಟಿ20 ಶ್ರೇಯಾಂಕ: 6ಕ್ಕೆ ಕುಸಿದ ಕೊಹ್ಲಿ
Team Udayavani, Feb 26, 2018, 6:35 AM IST
ದುಬೈ: ನೂತನ ಐಸಿಸಿ ಟಿ20 ಶ್ರೇಯಾಂಕ ಬಿಡುಗಡೆಯಾಗಿದೆ. ಇದರಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತಷ್ಟು ಕುಸಿತ ಕಂಡು 6ನೇ ಸ್ಥಾನಕ್ಕಿಳಿದಿದ್ದಾರೆ.
ಒಂದೆರಡು ತಿಂಗಳ ಹಿಂದೆ ನಂ.1 ಸ್ಥಾನದಲ್ಲಿದ್ದ ಅವರು ಆಫ್ರಿಕಾ ಪ್ರವಾಸದಲ್ಲಿ ಟಿ20 ಮಟ್ಟಿಗೆ ಸಾಮಾನ್ಯ ಪ್ರದರ್ಶನ ನೀಡಿದ್ದರಿಂದ ಈ ಕುಸಿತ ಸಂಭವಿಸಿದೆ. ಮತ್ತೂಂದು ಕಡೆ ಶ್ರೇಯಾಂಕದಲ್ಲಿ ಭಾರೀ ಕುಸಿತ ಅನುಭವಿಸಿರುವುದು ವೇಗಿ ಜಸಿøàತ್ ಬುಮ್ರಾ. ಆಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್‌ರೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದ ಅವರು ಇದೀಗ 5ನೇ ಸ್ಥಾನಕ್ಕೆ ಕುಸಿದಿದ್ದಾರೆ. ಹಿಂದಿನ 3 ಟಿ20ಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡದಿದ್ದುದ್ದೇ ಇದಕ್ಕೆ ಕಾರಣ. ಮತ್ತೂಂದು ಕಡೆ ಆಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಅಗ್ರಸ್ಥಾನಕ್ಕೇರುವ ಮೂಲಕ ಅಸಾಮಾನ್ಯ ಸಾಧನೆ ಮಾಡಿದ್ದಾರೆ. ಐಸಿಸಿ ಸಹ ಸದಸ್ಯ ರಾಷ್ಟ್ರಗಳ ಕ್ರಿಕೆಟಿಗರಲ್ಲೇ ಇದು ಶ್ರೇಷ್ಠ ಸಾಧನೆಯಾಗಿದೆ.
ಭಾರತಕ್ಕೆ ಐಸಿಸಿ ಟೆಸ್ಟ್ ಗದೆ!
ಈ ಬಾರಿಯ ಆಫ್ರಿಕಾ ಪ್ರವಾಸದಲ್ಲಿನ 3ನೇ ಪಂದ್ಯವನ್ನು ಗೆದ್ದು ಭಾರತ ನಂ.1 ಟೆಸ್ಟ್ ತಂಡವೆಂಬ ಹೆಗ್ಗಳಿಕೆ ಉಳಿಸಿಕೊಂಡಿದೆ. ಈ ಬಾರಿ ಏಪ್ರಿಲ್ ಕಳೆಯುವ ಹೊತ್ತಿಗೆ ಯಾವುದೇ ತಂಡ ಭಾರತವನ್ನು ಹಿಂದಿಕ್ಕುವ ಭರವಸೆಯಿಲ್ಲ ಎಂಬ ಕಾರಣಕ್ಕೆ ಸತತ 2ನೇ ವರ್ಷ ಟೆಸ್ಟ್ ಗದೆಯನ್ನು ಐಸಿಸಿ ಭಾರತಕ್ಕೆ ನೀಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.