WPL; Royal Challengers Bangalore ಮಹಿಳಾ ತಂಡಕ್ಕೆ ಹೊಸ ಕೋಚ್ ನೇಮಕ
Team Udayavani, Sep 30, 2023, 12:44 PM IST
ಬೆಂಗಳೂರು: ವನಿತಾ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡಕ್ಕೆ ಆಸ್ಟ್ರೇಲಿಯಾದ ಲ್ಯೂಕ್ ವಿಲಿಯಮ್ಸ್ ಅವರನ್ನು ಮುಖ್ಯ ಕೋಚ್ ಆಗಿ ಘೋಷಿಸಿದೆ. ಆರ್ ಸಿಬಿ ಯ ಕ್ರಿಕೆಟ್ ನಿರ್ದೇಶಕರಾಗಿ ಮೊ ಬೊಬಾಟ್ ಅವರನ್ನು ನೇಮಿಸಿದ ಒಂದು ದಿನದ ನಂತರ ಈ ಪ್ರಕಟಣೆ ಬಂದಿದೆ.
ಸೌತ್ ಆಸ್ಟ್ರೇಲಿಯಾದ ಮಾಜಿ ಆಟಗಾರ ಲ್ಯೂಕ್ ವಿಲಿಯಮ್ಸ್ ಅವರು ವನಿತಾ ಬಿಬಿಎಲ್ ಕೂಟದಲ್ಲಿ ಅಡಿಲೇಡ್ ಸ್ಟ್ರೈಕರ್ ತಂಡದ ಕೋಚ್ ಆಗಿ ಎರಡು ಬಾರಿ ರನ್ನರ್ ಅಪ್ ಮತ್ತು 202-23ರ ಸೀಸನ್ ನಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಿದರು. ಮಹಿಳಾ ಹಂಡ್ರೆಡ್‌ನಲ್ಲಿ ವಿಲಿಯಮ್ಸ್ ತಮ್ಮ ಯಶಸ್ವಿ 2023 ಅಭಿಯಾನದ ಸಮಯದಲ್ಲಿ ಸದರ್ನ್ ಬ್ರೇವ್ ತಂಡದ ಸಹಾಯಕ ತರಬೇತುದಾರರಾಗಿದ್ದರು.
ವಿಲಿಯಮ್ಸ್ ಅವರು ಫ್ರಾಂಚೈಸ್ ಗೆ ಕೃತಜ್ಞತೆ ಸಲ್ಲಿಸಿದರು. “ಆರ್ ಸಿಬಿಯೊಂದಿಗೆ ಈ ಅವಕಾಶವನ್ನು ಪಡೆದಿದ್ದಕ್ಕಾಗಿ ರೋಮಾಂಚನಗೊಂಡಿದ್ದೇನೆ. ಡಬ್ಲ್ಯುಪಿಎಲ್ ನ ಎರಡನೇ ಸೀಸನ್ ಗಾಗಿ ತಂಡದ ಸಿದ್ಧತೆಗಳೊಂದಿಗೆ ಪ್ರಾರಂಭಿಸಲು ಎದುರು ನೋಡುತ್ತಿದ್ದೇನೆ. ಹಲವಾರು ರೋಚಕವಾದ ಪಂದ್ಯಗಳನ್ನು ಆಯೋಜಿಸುವ ಆಟದ ಗುಂಪಿನೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ. ಭಾರತೀಯ ಮತ್ತು ವಿಶ್ವ ಕ್ರಿಕೆಟ್‌ನಲ್ಲಿನ ಆಟಗಾರರು, ನಾವು ನಮ್ಮ ಬೃಹತ್, ಉತ್ಸಾಹಿ ಅಭಿಮಾನಿಗಳಿಗೆ ದಿಟ್ಟ ಮತ್ತು ಉತ್ತೇಜಕ ಶೈಲಿಯ ಆಟ ಮತ್ತು ಯಶಸ್ಸನ್ನು ತರಲು ನೋಡುತ್ತಿದ್ದೇವೆ” ಎಂದು ಹೇಳಿದ್ದಾರೆ.
🚨 ANNOUNCEMENT: Big Bash Winning Coach 𝐋𝐮𝐤𝐞 𝐖𝐢𝐥𝐥𝐢𝐚𝐦𝐬 Joins RCB Women’s Team as Head Coach 😇🤝
Luke: “I look forward to working with a playing group that will host a number of the most exciting players in Indian and world cricket as we look to bring a bold and… pic.twitter.com/WxRyzedkPV
— Royal Challengers Bangalore (@RCBTweets) September 30, 2023
ಸ್ಮೃತಿ ಮಂಧನಾ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆರಂಭಿಕ ಸೀಸನ್ ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
Pro Kabaddi: ಮೂರಕ್ಕೇರಿದ ಯುಪಿ ಯೋಧಾಸ್
Head Coach: ವೆಸ್ಟ್ ಇಂಡೀಸ್ ಎಲ್ಲ ಮಾದರಿಗೂ ಡ್ಯಾರನ್ ಸಮ್ಮಿ ಕೋಚ್
Ind vs WI T20: ದ್ವಿತೀಯ ಟಿ20 ಪಂದ್ಯದಲ್ಲಿ ತಿರುಗಿ ಬಿದ್ದ ವೆಸ್ಟ್ ಇಂಡೀಸ್ ವನಿತೆಯರು
NZ vs ENG Test: ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್‌ಗೆ 423 ರನ್ ಜಯಭೇರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.