BCCI: ಐಪಿಎಲ್ ನಲ್ಲಿ ದೊಡ್ಡ ಬದಲಾವಣೆ..? Retention ಪಟ್ಟಿ ಬಗ್ಗೆ ಬಿಸಿಸಿಐ ನಿರ್ಧಾರ
Team Udayavani, May 31, 2024, 6:48 PM IST
ಮುಂಬೈ: 17ನೇ ಸೀಸನ್ ನ ಐಪಿಎಲ್ ಮುಗಿದಿದೆ. ಬಿಸಿಸಿಐ ನಿರ್ಧರಿಸಿದ ಮೂರು ವರ್ಷಗಳ ಚಕ್ರದಲ್ಲಿ ಐಪಿಎಲ್ 2024 ಅಂತಿಮ ಸೀಸನ್ ಆಗಿತ್ತು. ಇದರರ್ಥ ಮುಂದಿನ ಋತುವಿನಲ್ಲಿ ಮೆಗಾ ಹರಾಜು ನಡೆಯಲಿದೆ.
ಫ್ರಾಂಚೈಸಿಗಳಿಗೆ ಸೀಮಿತ ಸಂಖ್ಯೆಯ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಉಳಿದ ಆಟಗಾರರನ್ನು ತಂಡದಿಂದ ಕೈಬಿಡಲಾಗುತ್ತದೆ. ಮೆಗಾ ಹರಾಜಿನಲ್ಲಿ ಈ ಆಟಗಾರರು ವಿವಿಧ ತಂಡಗಳ ಪಾಲಾಗುತ್ತಾರೆ.
ಹರಾಜು ನಿಯಮಗಳಲ್ಲಿ ದೊಡ್ಡ ಬದಲಾವಣೆಯಾಗುವ ಬಗ್ಗೆ ಊಹಾಪೋಹಗಳು ಕಳೆದ ಕೆಲವು ವಾರಗಳಿಂದ ಕೇಳಿ ಬರುತ್ತಿತ್ತು. ಆದರೆ ಇತ್ತೀಚಿನ ವರದಿಯ ಪ್ರಕಾರ ಬಿಸಿಸಿಐ ಪ್ರತಿ ತಂಡಕ್ಕೆ ನಾಲ್ಕು ರಿಟೆನ್ಶನ್ ಗಳು ಅಥವಾ ಮೂರು ರಿಟೆನ್ಶನ್ ಮತ್ತು ಫ್ರಾಂಚೈಸಿಗಳಿಗೆ ಒಂದು ರೈಟ್ ಟು ಮ್ಯಾಚ್ (ಆರ್‌ಟಿಎಂ) ಕಾರ್ಡ್ ಅವಕಾಶ ನೀಡಲು ಬಯಸುತ್ತಿದೆ. ರಿಟೆನ್ಶನ್ ಸ್ಲಾಟ್ ಗಳ ಹೆಚ್ಚಳವು ಫ್ರಾಂಚೈಸಿಗಳಿಂದ ಹೆಚ್ಚಿನ ಬೆಂಬಲವನ್ನು ಪಡೆಯಲಿಲ್ಲ ಎಂದು ವರದಿ ಹೇಳಿಕೊಂಡಿದೆ.
ರಿಟೆನ್ಶನ್ ಅವಕಾಶವನ್ನು ಆರಕ್ಕೆ ಅಥವಾ ಎಂಟಕ್ಕೆ ಹೆಚ್ಚಳ ಮಾಡಿದರೆ, ಮತ್ತೆ ಒಂದು ಆರ್ ಟಿಎಂ ಅವಕಾಶ ನೀಡಿದರೆ ಹರಾಜಿನಲ್ಲಿ ಏನು ಉಳಿಯುತ್ತದೆ. ಹರಾಜು ಪ್ರಕ್ರಿಯೆಯು ಐಪಿಎಲ್ ಗೆ ಮೆರುಗು ನೀಡಿದೆ. ಅದಕ್ಕೆ ಕಡಿಮೆ ಪ್ರಾಮುಖ್ಯತೆ ನೀಡುವುದರಿಂದ ಲೀಗ್ ಅನ್ನು ಉತ್ತಮ ಆರೋಗ್ಯದಲ್ಲಿಡಲು ಸಹಾಯ ಮಾಡುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.