ಅಬುಧಾಬಿ ಟಿ10 ಕ್ರಿಕೆಟ್ ಕೂಟಕ್ಕೆ ಬಿಗ್ ಹಿಟ್ಟರ್
Team Udayavani, Dec 21, 2020, 10:58 PM IST
ಅಬುಧಾಬಿ: ಜನವರಿ 28ರಿಂದ ಆರಂಭವಾಗಲಿರುವ ದ್ವಿತೀಯ “ಅಬುಧಾಬಿ ಟಿ10 ಲೀಗ್’ನಲ್ಲಿ ವಿಶ್ವದ ಬಿಗ್ ಹಿಟ್ಟರ್‌ಗಳೆಲ್ಲ ಪಾಲ್ಗೊಳ್ಳುವುದು ದೃಢಪಟ್ಟಿದೆ. ಇದರಲ್ಲಿ ಕೆರಿಬಿಯನ್ ಕ್ರಿಕೆಟಿಗರದು ಸಿಂಹಪಾಲು. ಕ್ರಿಸ್ ಗೇಲ್, ಆ್ಯಂಡ್ರೆ ರಸೆಲ್, ಸುನೀಲ್ ನಾರಾಯಣ್ ಮತ್ತು ಡ್ವೇನ್ ಬ್ರಾವೊ ಅರಬ್ ನಾಡಿನಲ್ಲಿ ಅಬ್ಬರಿಸಲು ಆಗಮಿಸಲಿದ್ದಾರೆ.
ರೋಮಾಂಚನ ಮೂಡಿಸಲಿದೆ
ಸ್ಫೋಟಕ ಆರಂಭಕಾರ ಕ್ರಿಸ್ ಗೇಲ್ ಟೀಮ್ ಅಬುಧಾಬಿ ತಂಡದ ಐಕಾನ್ ಆಟಗಾರನಾಗಿರಲಿದ್ದಾರೆ. “ಇನ್ನಷ್ಟು ಕಿರಿದುಗೊಂಡ ಕ್ರಿಕೆಟ್ ಮತ್ತಷ್ಟು ರೋಮಾಂಚನ ಮೂಡಿಸಲಿದೆ. ಮತ್ತೆ ಶೇಖ್ ಜಾಯೇದ್ ಸ್ಟೇಡಿಯಂನಲ್ಲಿ ಆಡುವುದನ್ನು ಎದುರು ನೋಡುತ್ತಿದ್ದೇನೆ’ ಎಂದು ಟಿ20 ಕ್ರಿಕೆಟ್‌ನಲ್ಲಿ ಸಾವಿರ ಸಿಕ್ಸರ್ ಸಿಡಿಸಿರುವ ಕ್ರಿಸ್ ಗೇಲ್ ಹೇಳಿದ್ದಾರೆ.
ಮತ್ತೋರ್ವ ಕೆರಿಬಿಯನ್ ಬಿಗ್ ಹಿಟ್ಟರ್ ಆ್ಯಂಡ್ರೆ ರಸೆಲ್ ನಾರ್ದರ್ನ್ ವಾರಿಯರ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಗಾಯಾಳಾಗಿ ಐಪಿಎಲ್ ಕೂಟವನ್ನು ಆರ್ಧದಲ್ಲೇ ಬಿಟ್ಟುಹೋಗಿದ್ದ ಆಲ್‌ರೌಂಡರ್ ಡ್ವೇನ್ ಬ್ರಾವೊ ಡೆಲ್ಲಿ ಬುಲ್ಸ್ ತಂಡದ ಸದಸ್ಯನಾಗಿದ್ದಾರೆ. ಡೆಕ್ಕನ್ ಗ್ಲೆàಡಿಯೇಟರ್ನ ಐಕಾನ್ ಕ್ರಿಕೆಟರ್ ಆಗಿರುವವರು ಟ್ರಿನಿಡಾಡ್ ಸ್ಪಿನ್ನರ್ ಸುನೀಲ್ ನಾರಾಯಣ್. ಪಾಕಿಸ್ಥಾನದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಅವರನ್ನು ಖಲಂದರ್ ತಂಡದಲ್ಲಿದ್ದಾರೆ.
ಮರಾಠಾ ತಂಡಲ್ಲಿ ಮಲಿಕ್
ಹಾಲಿ ಚಾಂಪಿಯನ್ “ಮರಾಠಾ ಅರೇಬಿಯನ್ಸ್’ ತಂಡದ ಪ್ರಮುಖ ಸದಸ್ಯನೆಂದರೆ ಪಾಕಿಸ್ಥಾನದ ಅನುಭವಿ ಸವ್ಯಸಾಚಿ ಶೋಯಿಬ್ ಮಲಿಕ್. ಶ್ರೀಲಂಕಾದ ಎಡಗೈ ಪೇಸ್ ಬೌಲರ್ ಇಸುರು ಉದಾನಾ “ಬಾಂಗ್ಲಾ ಟೈಗರ್’ ಟೀಮ್‌ನ ಪ್ರಮುಖ ಸದಸ್ಯನಾಗಿದ್ದಾರೆ. ಇದೇ ನಾಡಿನ ತಿಸರ ಪೆರೆರ “ಪುಣೆ ಡೆವಿಲ್ಸ್’ ತಂಡದ ಐಕಾನ್ ಆಟಗಾರರಾಗಿದ್ದಾರೆ. ಪೆರೆರ ನಾಯಕತ್ವದ ಜಾಫಾ° ತಂಡ ಇತ್ತೀಚೆಗೆ ಚೊಚ್ಚಲ ಲಂಕಾ ಪ್ರೀಮಿಯರ್ ಲೀಗ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.