ಹರ್ಮನ್‌ಪ್ರೀತ್ ಪಡೆಗೆ ದೊಡ್ಡ ಸವಾಲು: ಮಲೇಷ್ಯಾ ವಿರುದ್ಧ ಮಹತ್ವದ ಪಂದ್ಯ
Team Udayavani, Aug 6, 2023, 6:45 AM IST
ಚೆನ್ನೈ: ಏಷ್ಯನ್ ಚಾಂಪಿ ಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಆತಿಥೇಯ ಭಾರತ ರವಿವಾರ ಟೇಬಲ್ ಟಾಪರ್ ಮಲೇಷ್ಯಾ ವಿರುದ್ಧ ಸೆಣಸಲಿದೆ. ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸುವುದು ಹರ್ಮನ್‌ಪ್ರೀತ್ ಪಡೆಯ ಎದುರಿಗಿರುವ ದೊಡ್ಡ ಸವಾಲು.
ಚೀನ ವಿರುದ್ಧ 7-2 ಗೋಲುಗಳ ಗೆಲುವಿನ ಆರಂಭ ಪಡೆದಿದ್ದ ಭಾರತ, ಶುಕ್ರವಾರ ಸಾಮಾನ್ಯ ತಂಡವಾದ ಜಪಾನ್ ವಿರುದ್ಧ ಜಬರ್ದಸ್ತ್ ಪ್ರದರ್ಶನ ನೀಡಲು ವಿಫಲವಾಗಿತ್ತು. ಕಾರಣ, ಪೆನಾಲ್ಟಿ ಕಾರ್ನರ್‌ಗಳನ್ನು ವ್ಯರ್ಥಗೊಳಿಸಿದ್ದು. ಚೀನ ವಿರುದ್ಧ 6 ಗೋಲುಗಳನ್ನು ಪೆನಾಲ್ಟಿ ಕಾರ್ನರ್ ಮೂಲಕವೇ ಬಾರಿಸಿದ ಭಾರತಕ್ಕೆ ಜಪಾನ್ ವಿರುದ್ಧ ಇದನ್ನು ಪುನರಾವರ್ತಿಸಲಾಗಲಿಲ್ಲ. ಕನಿಷ್ಠ 15 ಪೆನಾಲ್ಟಿ ಕಾರ್ನರ್‌ಗಳಲ್ಲಿ ಭಾರತ ಗೋಲಾಗಿಸಿದ್ದು ಒಂದನ್ನು ಮಾತ್ರ. ಹರ್ಮನ್‌ಪ್ರೀತ್ ಸಿಂಗ್, ವರುಣ್ ಕುಮಾರ್, ಅಮಿತ್ ರೋಹಿದಾಸ್, ಜುಗ್ರಾಜ್ ಸಿಂಗ್ ಅವರಂಥ ಘಟಾನುಘಟಿ ಆಟಗಾರರನ್ನು ಹೊಂದಿರುವ ತಂಡಕ್ಕೆ ಇದೊಂದು ಭಾರೀ ಹಿನ್ನಡೆ. ತಂಡದ ಕೋಚ್ ಕ್ರೆಗ್ ಫುಲ್ಟನ್ ಕೂಡ ಈ ವೈಫಲ್ಯದತ್ತ ಬೆಟ್ಟು ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka sports meet: ಈಜು ಸ್ಪರ್ಧೆ ಆರಂಭ; ದಕ್ಷಿಣ ಕನ್ನಡ ಮೇಲುಗೈ
Under-19 Women’s T20 World Cup: ವೈಷ್ಣವಿ ಹ್ಯಾಟ್ರಿಕ್, 5 ರನ್ನಿಗೆ 5 ವಿಕೆಟ್ ದಾಖಲೆ
Australia Open: 50ನೇ ಬಾರಿಗೆ ಗ್ರ್ಯಾನ್‌ಸ್ಲಾಮ್ ಸೆಮೀಸ್‌ಗೇರಿದ ಜೋಕೋ
Women’s ODI rankings: ಅಗ್ರಸ್ಥಾನಕ್ಕೆ ಮಂಧನಾ ಸನಿಹ
Rinku Singh: ತಂದೆಗೆ ಸೂಪರ್ ಬೈಕ್ ಗಿಫ್ಟ್ ನೀಡಿದ ರಿಂಕು ಸಿಂಗ್… ಬೆಲೆ ಎಷ್ಟು ಗೊತ್ತಾ?